ETV Bharat / state

ಕಾಂಗ್ರೆಸ್ ಜಾರಿಗೆ ತಂದ ಭೂ ಸುಧಾರಣೆ ಕಾನೂನಿನಿಂದ ಶಿವಮೊಗ್ಗ ಜಿಲ್ಲೆಯಲ್ಲೂ ಲಕ್ಷಾಂತರ ಜನರಿಗೆ ಲಾಭ: ಖರ್ಗೆ - Mallikarjun Kharge - MALLIKARJUN KHARGE

ಭೂ ಸುಧಾರಣೆ ಕಾನೂನಿನ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಲಕ್ಷಾಂತರ ಜನರು ಲಾಭ ಪಡೆದಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Mallikarjun Kharge
ಮಲ್ಲಿಕಾರ್ಜುನ ಖರ್ಗೆ (Etv Bharat)
author img

By ETV Bharat Karnataka Team

Published : May 2, 2024, 8:14 PM IST

Updated : May 2, 2024, 9:30 PM IST

ಮಲ್ಲಿಕಾರ್ಜುನ ಖರ್ಗೆ (Etv bharat)

ಶಿವಮೊಗ್ಗ: ''ಇಂದಿರಾ ಗಾಂಧಿ ಭೂ ಸುಧಾರಣೆ ಈ ಕಾನೂನು ತಂದವರು. ಈ ಕಾನೂನಿನಡಿ ನ್ಯಾಯವಾಗಿ ಜನರಿಗೆ ಭೂಮಿಯ ಹಕ್ಕು ನೀಡಿದ್ದೇವೆ. ಶಿವಮೊಗ್ಗ ಜಿಲ್ಲೆಯಲ್ಲೂ ಲಕ್ಷಾಂತರ ಜನರು ಇದರ ಲಾಭ ಪಡೆದಿದ್ದಾರೆ. ಅನೇಕರು ಭೂ ಮಾಲೀಕರಾಗಿದ್ದಾರೆ'' ಎಂದು ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಇಂದು ನಡೆದ ಲೋಕಸಭೆ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ನಾವು ಮಾಂಗಲ್ಯ ಸೂತ್ರ ಕದ್ದಿಲ್ಲ: ''ನಾವು ಯಾರ ಮಾಂಗಲ್ಯ ಸೂತ್ರ ಕದ್ದಿಲ್ಲ. ಆದರೆ, ಪ್ರಧಾನಿ ಮೋದಿಯವರು ಮಾಂಗಲ್ಯ ಸೂತ್ರ, ಬಂಗಾರ, ಬೆಳ್ಳಿ ಕದಿಯುತ್ತಾರೆ ಎಂದು ಹೇಳುತ್ತಾರೆ. ಸುಮ್ಮನೆ ನಿಮ್ಮನ್ನು ಭುಗಿಲೆಬ್ಬಿಸುವ ಕೆಲಸ ಮಾಡುತ್ತಾರೆ. ಇದು ಪ್ರಧಾನಿ ಆಡುವ ಮಾತಾ?, ನ್ಯಾಯದ ಪರ, ಬಡವರ ಪರವಾಗಿ ನಾವಿದ್ದೇವೆ. ಬಡವರ ಪರವಾಗಿಯೇ ಹೋರಾಟ ಮಾಡುತ್ತೇವೆ. ಇದಕ್ಕಾಗಿ ರಾಹುಲ್ ಗಾಂಧಿ ಅವರು ದೇಶದ್ಯಾಂತ ಸಂಚಾರ ಮಾಡುತ್ತಾರೆ. ಆದರೆ, ಇವರ ಮೇಲೆ ಅನೇಕ ಕೇಸ್​ಗಳನ್ನು ಹಾಕಿದ್ದಾರೆ. ಆದರೆ, ನಾವು ಇದಕ್ಕೆಲ್ಲ ಹೆದರಲ್ಲ'' ಎಂದರು.

''ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಯನ್ನು ನೀಡಿದೆ. ಇದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ. ಅದೇ ರೀತಿ ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ, ಐದು ಗ್ಯಾರಂಟಿಗಳನ್ನು ನೀಡುವ ಭರವಸೆ ನೀಡಿದ್ದೇವೆ. ಕರ್ನಾಟಕದಲ್ಲಿ ಜಾರಿ ಮಾಡಿರುವ ರೀತಿಯಲ್ಲೇ ಕೇಂದ್ರದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಹೆಣ್ಣು ಮಕ್ಕಳಿಗೆ 1 ಲಕ್ಷ ರೂ ನೀಡುವ ಮಹಾಲಕ್ಷ್ಮಿ ಯೋಜನೆ, ಯುವಕರಿಗೆ 1 ಲಕ್ಷ ರೂ. ಕೊಟ್ಟು ತರಬೇತಿ ನೀಡಿ, ಅವರು ಉದ್ಯೋಗ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ. ಅಷ್ಟೇ ಅಲ್ಲ, ಈ ಹಿಂದೆ ಯುಪಿಎ ಸರ್ಕಾರ 72 ಸಾವಿರ ಕೋಟಿ ರೂಪಾಯಿಗಳ ರೈತರ ಸಾಲ ಮನ್ನಾ ಮಾಡಿತ್ತು. ಈ ಬಾರಿ ಕೂಡ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಖರ್ಗೆ ಭರವಸೆ ನೀಡಿದರು.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರಿಗೆ ದೇಶ ತೊರೆಯಲು ಅನುಕೂಲ ಮಾಡಿಕೊಡುವುದೇ ಮೋದಿ ಗ್ಯಾರಂಟಿ: ರಾಹುಲ್ ಗಾಂಧಿ

Last Updated : May 2, 2024, 9:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.