ETV Bharat / state

ಮುಚ್ಚುತ್ತಾ ಶಿವಮೊಗ್ಗ ವಿಮಾನ ನಿಲ್ದಾಣ?: ಈ ತಿಂಗಳಾಂತ್ಯಕ್ಕೆ ಪರವಾನಗಿ ಮುಕ್ತಾಯ, ಡಿಜಿಸಿಎ ಹೇಳೋದೇನು? - Shimoga Airport - SHIMOGA AIRPORT

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಭದ್ರತೆ ಮತ್ತು ಸುರಕ್ಷತೆ ಕೊರತೆಯಿದ್ದು, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಅಸಮಾಧಾನ ವ್ಯಕ್ತಪಡಿಸಿದೆ. ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ಇದ್ದ ಪರವಾನಗಿ ಇದೇ ತಿಂಗಳಾಂತ್ಯಕ್ಕೆ ಮುಗಿಯಲಿದೆ.

ಶಿವಮೊಗ್ಗ ವಿಮಾನ ನಿಲ್ದಾಣ
ಶಿವಮೊಗ್ಗ ವಿಮಾನ ನಿಲ್ದಾಣ (ETV Bharat)
author img

By ETV Bharat Karnataka Team

Published : Sep 4, 2024, 6:42 PM IST

Updated : Sep 4, 2024, 7:42 PM IST

ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಸಚಿವ, ಸಂಸದರ ಮಾತು (ETV Bharat)

ಶಿವಮೊಗ್ಗ: ಮಧ್ಯ ಕರ್ನಾಟಕದ ಏಕೈಕ ಮತ್ತು ಕಳೆದ ವರ್ಷದ ಫೆಬ್ರವರಿಯಲ್ಲಷ್ಟೇ ಉದ್ಘಾಟನೆಯಾಗಿದ್ದ ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣ ಈ ತಿಂಗಳಾಂತ್ಯಕ್ಕೆ ಮುಚ್ಚುವ ಭೀತಿ ಎದುರಾಗಿದೆ. ನಿಲ್ದಾಣಕ್ಕೆ ಮೂಲಸೌಕರ್ಯ, ಭದ್ರತಾ ವ್ಯವಸ್ಥೆ ಉತ್ತಮವಾಗಿಲ್ಲದ ಕಾರಣ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನೀಡಿದ್ದ ಪರವಾನಗಿ ವಾಪಸ್​ ಪಡೆಯುವ ಸಾಧ್ಯತೆ ಇದೆ.

ಈ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ನೀಡಿರುವ ಪರವಾನಗಿಯು ಸೆಪ್ಟೆಂಬರ್ 23ಕ್ಕೆ ಮುಕ್ತಾಯಗೊಳ್ಳಲಿದೆ. ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಲ್ಲಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ವಿಫಲವಾಗಿದ್ದು, ಪರವಾನಗಿ ನವೀಕರಿಸಲು ಡಿಜಿಸಿಎ ಆಸಕ್ತಿ ತೋರುತ್ತಿಲ್ಲ. ಇದರಿಂದ, ಲೋಹದ ಹಕ್ಕಿಗಳ ಹಾರಾಟದ ಮೇಲೆ ಕರಿಛಾಯೆ ಬಿದ್ದಿದೆ.

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಅನುಮತಿಯು ಕಳೆದ ತಿಂಗಳ ಆಗಸ್ಟ್ 23 ಕ್ಕೆ ಮುಕ್ತಾಯವಾಗಿತ್ತು. ಮತ್ತೆ ಅನುಮತಿ ನವೀಕರಿಸಲು ವಿನಂತಿಸಿಕೊಂಡಾಗ, ಮೂಲಸೌಕರ್ಯ ಮತ್ತು ಭದ್ರತಾ ವ್ಯವಸ್ಥೆಗಳನ್ನು ಸರಿ ಮಾಡಲು ಸೂಚಿಸಿ ಡಿಜಿಸಿಎ ಕೇವಲ ಒಂದು ತಿಂಗಳು ಅವಧಿ ವಿಸ್ತರಣೆ ಮಾಡಿತ್ತು. ಈ ಮಿತಿಯ ಮುಕ್ತಾಯಕ್ಕೆ 19 ದಿನಗಳಷ್ಟೇ ಬಾಕಿ ಇದೆ.

ನಿಲ್ದಾಣದಲ್ಲಿನ ಸಮಸ್ಯೆಗಳೇನು?: ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತಿರುವ ಏಕೈಕ ವಿಮಾನ ನಿಲ್ದಾಣವಾಗಿದ್ದರೂ, ಇಲ್ಲಿನ ಸೌಕರ್ಯಗಳಿಗೆ ಬರವಿದೆ. ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಪರವಾನಗಿ ನೀಡುವಾಗ ಸುರಕ್ಷತೆ ಮತ್ತು ಭದ್ರತೆ ವಿಚಾರಗಳ ಬಗ್ಗೆ ಕೆಲವು ಷರತ್ತುಗಳನ್ನು ಹಾಕಿತ್ತು. ಅವುಗಳನ್ನು ನಿಲ್ದಾಣದ ಹೊಣೆ ಹೊತ್ತಿರುವ ಕೆಎಸ್‌ಐಐಡಿಸಿಯು ಅನುಸರಿಸಿಲ್ಲ. ರನ್‌ವೇ ಸುರಕ್ಷತೆ ನಿಗದಿತ ಪ್ರಮಾಣದಲ್ಲಿಲ್ಲ. ರಕ್ಷಣಾ ಸಲಕರಣೆಗಳ ಖರೀದಿ ವಿಳಂಬ, ತಂತ್ರಜ್ಞರು, ಸಿಬ್ಬಂದಿಗೆ ಸಮವಸ್ತ್ರ ಕೊರತೆ, ಕ್ಷಿಪ್ರ ಕಾರ್ಯಪಡೆ (ಕ್ಯೂಆರ್‌ಟಿ) ಇಲ್ಲದೇ ಇರುವುದು ಸೇರಿ ಹಲವು ಮಾನದಂಡಗಳು ಪಾಲಿಸದ್ದನ್ನು ಡಿಜಿಸಿಎ ಗುರುತಿಸಿದೆ. ಹೀಗಾಗಿ ಪರವಾನಗಿ ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಕಡಿಮೆ ಇದೆ.

ಪರವಾನಗಿ ಬಗ್ಗೆ ಸರ್ಕಾರ ಕ್ರಮ: ಈ ಕುರಿತು ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ವಿಮಾನ ನಿಲ್ದಾಣದ ಪರವಾನಗಿ ನವೀಕರಣವು ಇದೇ ತಿಂಗಳ‌ 23 ಕ್ಕೆ ಅಂತ್ಯವಾಗಲಿದ್ದು, ಈ ಕುರಿತು ಸಚಿವ ಎಂ.ಬಿ.ಪಾಟೀಲ್ ಅವರ ಗಮನಕ್ಕೆ ತರಲಾಗಿದೆ. ಇದರಲ್ಲಿ ನನ್ನ ಜವಾಬ್ದಾರಿಯೂ ಇದೆ. ಸರ್ಕಾರವೂ ಈ ಬಗ್ಗೆ ಗಮನಿಸುತ್ತದೆ. ವಿಮಾನ ನಿಲ್ದಾಣದಿಂದ ಬರುವ ಆದಾಯ ಹೆಚ್ಚಿಸುವ ಬಗ್ಗೆಯೂ ಗಮನ ಹರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ವಿಮಾನ ನಿಲ್ದಾಣದ ಪರವಾನಗಿ ಅವಧಿಯು ಕೇವಲ ಒಂದು ತಿಂಗಳು ವಿಸ್ತರಣೆ ಮಾಡಲಾಗಿದೆ. ಡಿಜಿಸಿಎ ಸೂಚಿಸಿದ 14 ಸಲಹೆಗಳಲ್ಲಿ 12 ಅನ್ನು ಪಾಲಿಸಲಾಗಿದೆ. ಫೈರ್ ಜೆಟ್ ಮೆಕಾನಿಕ್ ಇಲ್ಲ. ರನ್ ವೇಯಲ್ಲಿ ಧೂಳು ತುಂಬಿದೆ ಎಂದು ಹೇಳಲಾಗಿದೆ. ಇದನ್ನು ಸರಿಪಡಿಸಲಾಗಿದೆ. ನೈಟ್ ಲ್ಯಾಂಡಿಂಗ್​​ಗೆ ಅನುಮತಿ ಸಿಕ್ಕಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ; ಮುಡಾ ಹಗರಣದ ತೀರ್ಪು ಬರುವ ಮುನ್ನವೇ ಸಿದ್ದರಾಮಯ್ಯ ರಾಜೀನಾಮೆ‌ ನೀಡಲಿ: ಬಿ.ಎಸ್. ಯಡಿಯೂರಪ್ಪ - b s yediyurappa reaction on cm

Last Updated : Sep 4, 2024, 7:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.