ETV Bharat / state

ಕಳೆದ 10 ವರ್ಷಗಳಲ್ಲಿ ಕಾರ್ಮಿಕರ ಬದುಕು ದುಸ್ಥಿತಿಗೆ: ಕಾರ್ಮಿಕ ಸಂಘಟನೆ ಪರ ವಕೀಲರ ಹೇಳಿಕೆ - Labour Day - LABOUR DAY

ಕಳೆದ ಹತ್ತು ವರ್ಷಗಳಲ್ಲಿ ಕಾರ್ಮಿಕರು ದುಸ್ಥಿತಿಗೆ ಸಿಲುಕಿದ್ದಾರೆ ಎಂದು ಕಾರ್ಮಿಕ ಸಂಘಟನೆ ಪರ ವಕೀಲರು ಹೇಳಿದ್ದಾರೆ.

LABOR ORGANIZATIONS  WORKERS SUFFERED  LAWYERS  BENGALURU
ಕಾರ್ಮಿಕ ಸಂಘಟನೆ ಪರ ವಕೀಲರ ಹೇಳಿಕೆ
author img

By ETV Bharat Karnataka Team

Published : May 1, 2024, 6:47 PM IST

Updated : May 1, 2024, 9:39 PM IST

ಬೆಂಗಳೂರು: ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ಕಾರ್ಮಿಕರ ಕುರಿತಾದ ನಿರ್ಧಾರಗಳಿಂದ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಮಿಕರ ಜೀವನ ದುಸ್ಥಿತಿಗೆ ಸಿಲುಕಿದೆ ಎಂದು ಕಾರ್ಮಿಕ ಪರ ಸಂಘಟನೆಗಳ ಪರ ನ್ಯಾಯಾಂಗ ಹೋರಾಟದಲ್ಲಿ ತೊಡಗಿರುವ ವಕೀಲರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಕಾಯಿದೆಗಳಲ್ಲಿನ ತಿದ್ದುಪಡಿಗಳಿಂದ ದುಡಿಯುವ ಸಮಯ ಹೆಚ್ಚಳವಾಗುತ್ತಿದ್ದು, ವೇತನದಲ್ಲಿ ತೀವ್ರ ಕುಸಿತ ಕಂಡಿದೆ. ಎಲ್ಲ ವಲಯಗಳಲ್ಲಿಯೂ ಗುತ್ತಿಗೆ ಆಧಾರದಲ್ಲಿ ಉದ್ಯೋಗಗಳು ಸೃಷ್ಠಿಯಾಗುತ್ತಿದೆ. ಉದ್ಯೋಗ ಕ್ಷೇತ್ರಕ್ಕೆ ಅಭದ್ರತೆ ಕಾಡುವಂತಾಗಿದೆ. ನಿರುದ್ಯೋಗ ಹೆಚ್ಚಳವಾಗುತ್ತಿದ್ದರೂ ಆತ್ಮಹತ್ಯೆಯಂತಹ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೈಕೋರ್ಟ್ ವಕೀಲರಾದ ಮೈತ್ರಿಯಾ ಕೃಷ್ಣನ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಕೊರೊನಾ ಲಾಕ್‌ಡೌನ್ ಮತ್ತು ನೋಟು ಅಮಾನ್ಯೀಕರಣದಿಂದ ವಲಸೆ ಕಾರ್ಮಿಕರು ಮತ್ತು ದಿನಗೂಲಿಗಳು ಉದ್ಯೋಗಗಳಿಗೆ ಕತ್ತರಿ ಬಿದ್ದಿತ್ತು. ಸರ್ಕಾರಗಳು ಕಾರ್ಪೊರೇಟ್​ ಕಂಪೆನಿಗಳ ಪರ ಕೆಲಸ ಮಾಡುತ್ತಿದ್ದು, ಕಾರ್ಮಿಕರಿಗೆ ತೀವ್ರ ತೊಂದರೆ ಎದುರಾಗುತ್ತಿದೆ. ಅಲ್ಲದೆ, ಸರ್ಕಾರಿ ಉದ್ಯೋಗಗಳು ಕಡಿಮೆಯಾಗುತ್ತಿರುವುದು ಮತ್ತು ನೇಮಕಾತಿಗಳ ಮೇಲೆ ಅಕ್ಷರಶಃ ನಿರ್ಬಂಧ ಹೇರಲಾಗುತ್ತಿದೆ. ಇದರಿಂದ ಖಾಸಗಿ ಉದ್ಯೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಕನಿಷ್ಟ ವೇತನವನ್ನು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಮೇಲೆ ನಿಗದಿ ಮಾಡಬೇಕು ಎಂಬ ನಿಯಮವಿದೆ. ಆದರೆ, ಈ ಬಗ್ಗೆ ಸಕಾರ್ರಗಳು ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಇದರಿಂದಾಗಿ ನಗರ ಪ್ರದೇಶಗಳಲ್ಲಿ ನಿಗದಿಪಡಿಸಿರುವ ಕನಿಷ್ಟ ವೇತನ ಮನೆ ಬಾಡಿಗೆ, ಊಟಕ್ಕೂ ಸಾಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಕೌಶಲ್ಯಭರಿತ ಹಾಗೂ ಪೂರ್ಣ ಸಮಯದ ಹುದ್ದೆಗಳನ್ನು ಯಾವುದೇ ಕಾರಣಕ್ಕೂ ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಬಾರದು ಎಂದು ಗುತ್ತಿಗೆ ಕಾರ್ಮಿಕ ಕಾಯಿದೆಗಳ ಪ್ರಕಾರ ಹೇಳಲಾಗಿದೆ. ಆದರೆ, ಕೇಂದ್ರ ಸರ್ಕಾರ ಈ ಕಾಯಿದೆಗಳಿಗೆ ತಿದ್ದುಪಡಿ ಮಾಡಿದ್ದು, ಈ ಹುದ್ದೆಗಳನ್ನು ಖಾಯಂ ಮಾಡುವಂತಿಲ್ಲ ಎಂದು ಮಾಡಲಾಗಿದೆ ಎಂದು ಹೇಳಿದರು.

ಕಾರ್ಮಿಕರು ತಮ್ಮ ಸಂಸ್ಥೆಗಳ ವಿರುದ್ಧ ನಿಯಮಗಳಲ್ಲಿ ಪ್ರತಿಭಟನೆ ಮಾಡುವುದು ಸಂವಿಧಾನಬದ್ಧ ಹಕ್ಕು. ಆದರೆ, ಕನಿಷ್ಟ ವೇತನ ಹೆಚ್ಚಳ ಮಾಡುವುದಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆಗೆ ಮುಂದಾಗುವಂತಿಲ್ಲ. ಪ್ರತಿಭಟನೆಗೆ ಮುಂದಾದಲ್ಲಿ ದಂಡಕ್ಕೆ ಗುರಿಯಾಗುವಂತೆ ಮಾಡಲಾಗಿದೆ. ಆದ್ರೆ ಈ ನಿಯಮಗಳು ಕಾರ್ಮಿಕ ವಿರೋಧಿಯಾಗಿವೆ ಎಂದು ತಿಳಿಸಿದರು.

ಸಮಾನ ವೇತನ ಕಾಯಿದೆ ಜಾರಿಯಲ್ಲಿದೆ. ಆದರೆ, ಉದ್ಯೋಗದಾತ ಸಂಸ್ಥೆಗಳು ವೇತನದಲ್ಲಿ ಒಂದಷ್ಟು ಅಂಶಗಳನ್ನು ತೆಗೆದು ವೇತನ ನೀಡುತ್ತಾರೆ. ಆದರೆ, ಇದು ಸಮಾನ ವೇತನಕ್ಕೆ ವಿರೋಧವಾಗಿದೆ. ಆದ ಕಾರಣದ ಪ್ರಸ್ತುತ ಕಾರ್ಮಿಕ ಕಾಯಿದೆಗಳನ್ನು ಕೇಂದ್ರ ಸರ್ಕಾರ ಹಲ್ಲಿಲ್ಲದ ಹಾವಿನಂತೆ ಮಾಡಿದ್ದು, ಎಲ್ಲ ಕಾಯಿದೆಗಳು ಕಾರ್ಮಿಕರ ವಿರುದ್ಧವಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: Good news; 'ಆ ಬಡ್ಡಿ ಹಿಂತಿರುಗಿಸಿ', ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ದೇಶನ; ಸಾಲಗಾರರಿಗೆ ಸಂತಸದ ಸುದ್ದಿ - RBI ON INTEREST CHARGES

Last Updated : May 1, 2024, 9:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.