ETV Bharat / state

ಕುವೆಂಪು ವಿವಿಯಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗಿಲ್ಲ ನೈಜ ಮಾರ್ಕ್ಸ್ ಕಾರ್ಡ್ ಭಾಗ್ಯ!: ಕುಲಪತಿಗಳು ಹೇಳಿದ್ದೇನು? - KUVEMPU VV STUDENTS PROBLEMS

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 4 ವರ್ಷದಿಂದ ಪದವಿ ಹಾಗೂ ಸ್ನಾತ್ತಕೋತ್ತರ ಪದವಿ ಮತ್ತು ದೂರ ಶಿಕ್ಷಣ ಪದವಿ ಮುಗಿಸಿದವರಿಗೆ ಅಂಕಪಟ್ಟಿ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳ ಆರೋಪ ಹೀಗಿದೆ.

KUVEMPU UNIVERSITY MARK CARD  KUVEMPU UNIVERSITY  SHIVAMOGGA  ಕುವೆಂಪು ವಿವಿ
ಕುವೆಂಪು ವಿವಿಯಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗಿಲ್ಲ ನೈಜ ಮಾರ್ಕ್ಸ್ ಕಾರ್ಡ್ ಭಾಗ್ಯ!: ಕುಲಪತಿಗಳು ಹೇಳಿದ್ದೇನು? (ETV Bharat)
author img

By ETV Bharat Karnataka Team

Published : 12 hours ago

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಮಲೆನಾಡಿನ ತಪ್ಪಲಲ್ಲಿ ಇರುವ ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಪದವಿ ಹಾಗೂ ಸ್ನಾತ್ತಕೋತ್ತರ ಪದವಿ ಮತ್ತು ದೂರ ಶಿಕ್ಷಣ ಪದವಿ ಮುಗಿಸಿದವರಿಗೆ ಅಂಕಪಟ್ಟಿ ಇನ್ನೂ ಲಭ್ಯವಾಗಿಲ್ಲ. 2021 ರಿಂದ ಇದುವರೆಗೂ ಯಾರಿಗೂ ಅಂಕ ಪಟ್ಟಿಯೇ ಬಂದಿಲ್ಲ. ಅಂಕಪಟ್ಟಿಗಾಗಿ ವಿದ್ಯಾರ್ಥಿಗಳು ಕಾಲೇಜು, ವಿಶ್ವವಿದ್ಯಾನಿಲಯಕ್ಕೆ ಅಲೆದು ಅಲೆದು ಸುಸ್ತಾಗಿದ್ದಾರೆ. ಪದವಿ ಹಾಗೂ ಸ್ನಾತ್ತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು ಮಾರ್ಕ್ಸ್ ಶೀಟ್ ನೀಡಿದೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.

ಮಾರ್ಕ್ಸ್ ಶೀಟ್​ಗೆ ಬೆಲೆ ಇಲ್ಲ: ಕುವೆಂಪು ವಿಶ್ವ ವಿದ್ಯಾನಿಲಯದಿಂದ ಹಾಗೂ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿಗಳಿಗೆ ನೈಜ ಅಂಕಪಟ್ಟಿ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಿಂದ ಗೊಂದಲ ಉಂಟಾಗಿದೆ. ನೂತನ ಶಿಕ್ಷಣ ನೀತಿಯು ವಿವಿ ಹಾಗೂ ಪದವಿ ಕಾಲೇಜುಗಳಿಗೆ UUCMS (ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ) ಜಾರಿ ಮಾಡಿದೆ. ಇದೆಲ್ಲವು ಆನ್​ಲೈನ್ ಆಗಿದ್ದು, ಇದಕ್ಕೆ ಒಂದು ಪೋರ್ಟಲ್ ಇದೆ. ಇದರಲ್ಲಿ ತಾಂತ್ರಿಕ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಇದೆನ್ನೆಲ್ಲಾ ಪರಿಹರಿಸಲು ವಿವಿ ಹಾಗೂ ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲ. ವಿವಿ ರಾಜ್ಯ ಸರ್ಕಾರದ ಕಡೆ ಗಮನ ಬೊಟ್ಟು ಮಾಡಿ ತೋರಿಸುತ್ತಿದೆ. ತಾಂತ್ರಿಕ ಸಮಸ್ಯೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ನೈಜ ಅಂಕಪಟ್ಟಿ ಸಿಗದೇ ಪರದಾಡುವಂತಾಗಿದೆ.

ವಿದ್ಯಾರ್ಥಿಗಳ ಹೇಳಿಕೆ. (ETV Bharat)

ಸಮಸ್ಯೆಗಳ ಆಗರ: "UUCMS ಪೊರ್ಟಲ್​ ಈಗ ಎಲ್ಲಾ ವಿವಿಗಳಲ್ಲೂ ಜಾರಿ ಮಾಡಿದೆ. ಇದರಲ್ಲಿಯೇ ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕು, ಪರೀಕ್ಷೆ ಕಟ್ಟಲು ಇದೆ ಪೊರ್ಟಲ್ ಬಳಕೆ ಮಾಡಿಕೊಳ್ಳಬೇಕು. ಅಲ್ಲದೇ ಅಂಕಪಟ್ಟಿಯನ್ನು ಪಡೆಯಲು ಸಹ ಇದೇ ಪೊರ್ಟಲ್ ಬಳಕೆ‌ ಮಾಡಬೇಕು. ಆದರೆ ಈ ಪೊರ್ಟಲ್ ಹಲವು ಸಮಸ್ಯೆಗಳಿಂದ‌ ಕೊಡಿದೆ. ಈ ಪೊರ್ಟಲ್ ಬಗ್ಗೆ ವಿವಿಯವರಿಗೆ ಸರಿಯಾದ ಮಾಹಿತಿ ಇಲ್ಲ. ಈ ಕುರಿತು ದೂರು ನೀಡಿದರೆ ಪರಿಹಾರವಾಗುತ್ತಿಲ್ಲ".

ಅಲ್ಲಿ ಕೇಳಿದರೆ ಇಲ್ಲಿ ಕೇಳಿ.. ಇಲ್ಲಿ ಕೇಳಿದರೆ ಅಲ್ಲಿ ಕೇಳಿ: "ಪೊರ್ಟಲ್ ಸಮಸ್ಯೆ ಕೇಳಿದರೆ, ಯೂನಿರ್ವಸಿಟಿರವರು ಇದು ಬೆಂಗಳೂರಿನಲ್ಲಿ ಕೇಳಬೇಕು ಅಂತಾರೆ, ಅಲ್ಲಿ ಕೇಳಿದರೆ ಎಲ್ಲವೂ ನಿಮ್ಮ ವಿಶ್ವವಿದ್ಯಾನಿಲಯದಲ್ಲಿಯೇ ಸರಿಪಡಿಸುವ ಅವಕಾಶವಿದೆ ಎಂದು ಹೇಳುತ್ತಾರೆ. ಈಗ ಅಂಕಪಟ್ಟಿಯನ್ನು ವಿವಿರವರು ನೈಜ ಅಂಕಪಟ್ಟಿ ನೀಡದೆ, ಜೆರಾಕ್ಸ್ ಕಾಫಿ ರೀತಿ ನೀಡುತ್ತಿದ್ದಾರೆ. ಇದನ್ನು ಬೇರೆ ವಿಶ್ವ ವಿದ್ಯಾನಿಲಯದವರು ಒಪ್ಪುತ್ತಿಲ್ಲ. ಕೆಲಸ ಹಾಗೂ ಶಿಕ್ಷಣಕ್ಕಾಗಿ ಬೇರೆ ವಿವಿಗೆ ಹೋದರೆ ನೈಜ ಅಂಕಪಟ್ಟಿ ನೀಡುತ್ತಿಲ್ಲ. ವಿಶ್ವವಿದ್ಯಾನಿಲಯದವರಿಗೆ ಕೇಳಿದ್ರೆ ಅಂಕಪಟ್ಟಿ ನೀಡಲು ಕಾಲಾವಕಾಶ ಬೇಕು ಎನ್ನುತ್ತಿದ್ದಾರೆಂದು" ವಿದ್ಯಾರ್ಥಿ ಅಭಿಷೇಕ್ ತಮ್ಮ ಅಳಲನ್ನು ತೂಡಿಕೊಳ್ಳುತ್ತಿದ್ದಾರೆ.

ಉದ್ಯೋಗ, ಉನ್ನತ ಶಿಕ್ಷಣಕ್ಕೆ ಪಡೆಯಲು ತೊಡಕು: "ಪದವಿ ಹಾಗೂ ಸ್ನಾತ್ತಕೋತ್ತರ ಪದವಿ ಮುಗಿಸಿದವರಿಗೆ ಉದ್ಯೋಗ ಹಾಗೂ ಉನ್ನತ ಶಿಕ್ಷಣ ಪಡೆಯಲು ಮಾರ್ಕ್ಸ್ ಕಾರ್ಡ್ ಒಂದು ತೊಡಕಾಗಿದೆ. ಮಾರ್ಕ್ಸ್ ಕಾರ್ಡ್ ಇಲ್ಲದೆ ಯಾರು ಸಹ ಉದ್ಯೋಗ ಕೊಡುವುದಿಲ್ಲ, ಹಾಗೂ ಉನ್ನತ ಶಿಕ್ಷಣಕ್ಕೆ ಪ್ರವೇಶ ನೀಡುತ್ತಿಲ್ಲ. ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ ವಿದ್ಯಾರ್ಥಿಗಳಿಗೆ ನೈಜ ಮಾರ್ಕ್ಸ್ ಕಾರ್ಡ್ ನೀಡದೆ ಹೋದರೆ, ಘಟಿಕೋತ್ಸವದಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡುವ" ಎಚ್ಚರಿಕೆಯನ್ನು ಎಬಿವಿಪಿ ಸಂಘಟನೆಯ ನಗರ ಕಾರ್ಯದರ್ಶಿ ಲೋಹಿತ್ ನೀಡಿದ್ದಾರೆ.

ಶೀಘ್ರವೇ ಎಲ್ಲವೂ ಸರಿಯಾಗುತ್ತೆ: ಮಾರ್ಕ್ಸ್ ಕಾರ್ಡ್ ಸಮಸ್ಯೆ ಕುರಿತು ಈ ಟಿವಿ ಭಾರತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಕುವೆಂಪು ವಿಶ್ವ ವಿದ್ಯಾನಿಲಯದ ಪರಿಕ್ಷಾಂಗ ಕುಲಪತಿಗಳಾದ ಪ್ರೊ. ಗೋಪಿನಾಥ್ ರವರು, "UUCMS ಸಮಸ್ಯೆಯಿಂದಾಗಿ ಮಾರ್ಕ್ಸ್ ಕಾರ್ಡ್​ ವಿತರಿಸಲು ಸಮಸ್ಯೆ ಉಂಟಾಗಿತ್ತು. ಅಲ್ಲದೆ ಅಂಕಪಟ್ಟಿಯ ವಿನ್ಯಾಸ ಕಳೆದ ಮೂರು ತಿಂಗಳ ಹಿಂದಷ್ಟೆ NEP ಯಿಂದ ಬಂದಿದೆ. ಇದರಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಇದ್ದು, ಅದು ಪರಿಹಾರವಾಗಿದೆ. ಮುಂದಿನ ವಾರದಿಂದಲೇ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳು ಆಯಾ ಕಾಲೇಜಿನಲ್ಲಿ ಪಡೆಯಬಹುದಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಾಜೆಕ್ಟ್​​​​ ಅಂಕ ನೀಡದೇ ವಿದ್ಯಾರ್ಥಿಗಳು ಫೇಲ್​​ ಆರೋಪ: ರಸ್ತೆಗೆ ಇಳಿದು ವಿದ್ಯಾರ್ಥಿಗಳ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.