ETV Bharat / state

ಕುಮಾರಸ್ವಾಮಿ ಅವರದು ಡಬಲ್ ಸ್ಟ್ಯಾಂಡ್ ರಾಜಕಾರಣ: ಸಚಿವ ಚಲುವರಾಯಸ್ವಾಮಿ - Chaluvarayaswamy - CHALUVARAYASWAMY

ನಮ್ಮ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ, ಆರೆಸ್ಸೆಸ್​​, ಜೆಡಿಎಸ್ ಅವರಿಗೆ ಭಯ ಎಂದು ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದರು.

Minister Chaluvarayaswamy
ಸಚಿವ ಚಲುವರಾಯಸ್ವಾಮಿ (ETV Bharat)
author img

By ETV Bharat Karnataka Team

Published : Aug 2, 2024, 8:20 PM IST

Updated : Aug 2, 2024, 9:48 PM IST

ಸಚಿವ ಚಲುವರಾಯಸ್ವಾಮಿ ಹೇಳಿಕೆ (ETV Bharat)

ಮಂಡ್ಯ: "ಸಿಎಂಗೆ ಯಾವುದೇ ಡಿಸ್ಟರ್ಬ್ ಆಗಿಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ತಾನೇ ಶೇಕ್ ಆಗೋದು. ಹಾಗೇನಾದರೂ ಆಗಿದ್ದರೆ, ಇವತ್ತು ನೆರೆ ಪ್ರದೇಶಕ್ಕೆ ಹೋಗುತ್ತಿರಲಿಲ್ಲ. ಮನೆಯಲ್ಲಿ ಇರುತ್ತಿದ್ದರು. ಸಿಎಂ ರಾಜೀನಾಮೆ ಪ್ರಶ್ನೆ ಬರಲ್ಲ. ಹೈಕಮಾಂಡ್ ಯಾಕೆ ರಾಜೀನಾಮೆ ಕೇಳುತ್ತದೆ? ಸಿಎಂ ಅವರು ಧೈರ್ಯವಾಗಿ ಇದ್ದಾರೆ" ಎಂದು ಸಚಿವ ಎನ್​.ಚಲುವರಾಯಸ್ವಾಮಿ ಹೇಳಿದರು.

ಇಂದು ಮಂಡ್ಯದ ಕೆಆರ್​ಎಸ್​ನಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿ ಚೆಕ್ ತಗೊಂಡಿದ್ದಾರಾ? ಏನಾದರೂ ಆದೇಶ ಮಾಡಿದ್ದಾರಾ? ಸೈಟ್ ಕೊಟ್ಟಿರುವುದು ಬಿಜೆಪಿಯವರು. ತಪ್ಪು ಬಿಜೆಪಿ ಅವರದ್ದು. ಇವರಿಗೆ ಸೈಟ್ ಮಂಜೂರು ಆದಾಗ ಡಿಸಿಎಂ ಆಗಿರಲಿಲ್ಲ. ಕುಮಾರಸ್ವಾಮಿ ಅವರದ್ದು ಡಬಲ್ ಸ್ಟಾಂಡ್ ರಾಜಕಾರಣ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿ, ಕೇಂದ್ರ ಸಚಿವರಾಗಿದ್ದಾರೆ. ಏನು ಮಾತನಾಡುತ್ತಾರೋ ಗೊತ್ತಿಲ್ಲ. ಪಾದಯಾತ್ರೆಗೆ ಬೆಂಬಲ ಕೊಡಲ್ಲ ಎಂದಿದ್ದರು. ಇದೀಗ ನಿನ್ನೆ ಸಂಜೆ ಬೆಂಬಲ‌ ಅಂತ ಹೇಳಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಆರ್​ಎಸ್​ಎಸ್​ ಹಾಗೂ ಜೆಡಿಎಸ್​ಗೆ ಭಯವಿದೆ" ಎಂದರು‌.

ಕಾವೇರಿಗೆ ಮತ್ತೊಮ್ಮೆ ಬಾಗಿನ ವಿಚಾರವಾಗಿ ಮಾತನಾಡಿ, "ಕಳೆದ ಬಾರಿ ಬರಗಾಲ ಅಂತ ಲೇವಡಿ ಮಾಡಿದ್ದರು. ಆಗ ನನ್ನ ಶ್ರೀಮತಿ ಚಾಮುಂಡೇಶ್ವರಿ ಹಾಗೂ ಕಾವೇರಿ ಮಾತೆಗೆ ಹರಕೆ ಮಾಡಿಕೊಂಡಿದ್ದರು. ಮೊನ್ನೆ ಸಿಎಂ ಬಾಗಿನ ಬಿಡುವಾಗ ಬಾಗಿನ ಬಿಡಲು ಆಗಿರಲಿಲ್ಲ. ಹಾಗಾಗಿ ನಾವು ಇಂದು ಬಾಗಿನ ಬಿಟ್ಟಿದ್ದೇವೆ" ಎಂದು ಸ್ಪಷ್ಟನೆ ನೀಡಿದರು.

ಕುಮಾರಸ್ವಾಮಿ ಸಚಿವರಾಗಿದ್ದಕ್ಕೆ ಕೆಆರ್​ಎಸ್​ ಭರ್ತಿಯಾಗಿದೆ ಎಂಬ ಮಾಜಿ ಸಚಿವ ಪುಟ್ಟರಾಜು ಹೇಳಿಕೆ ಕುರಿತು ಮಾತನಾಡಿ, "ಹಾಗಾದ್ರೆ ಕುಮಾರಸ್ವಾಮಿ ರಾಜ್ಯದಲ್ಲಿ ಇರಲಿಲ್ಲವಾ? ಕುಮಾರಸ್ವಾಮಿ ಚನ್ನಪಟ್ಟಣ ಶಾಸಕರಾಗಿದ್ದರು, ಆಗ ಚನ್ನಪಟ್ಟಣದಲ್ಲಿ ಮಳೆ ಆಗಲಿಲ್ಲ. ಇದೀಗ ದೆಹಲಿಗೆ ಮಂತ್ರಿ ಆಗಿದ್ದಾರೆ. ಅಲ್ಲಿ ಮಳೆ ಆಗಿದೆಯಾ? ಕಳೆದ ಬಾರಿ ಶಾಸಕರು ಆಗಿದ್ದಾಗ ಚನ್ನಪಟ್ಟಣದಲ್ಲಿ ಮಳೆ ಆಗಿತ್ತಾ? ಪ್ರಕೃತಿ ಯಾರ ಅಧೀನದಲ್ಲೂ ಇಲ್ಲ. ನಾವು ಈ ಬಾರಿ ಆಷಾಡದಲ್ಲಿ ಬಾಗಿನ ಅರ್ಪಿಸಿದ್ದೇವೆ. ಇಪ್ಪತ್ತು ವರ್ಷದ ನಂತರ ಆಷಾಢದಲ್ಲಿ ಬಾಗಿನ ಅರ್ಪಿಸಲಾಗಿದೆ. ನಮ್ಮ ಅದೃಷ್ಟ ಸರಿ ಇದೆ ಎಂದು ತಮಟೆ ಸಾರುವುದಾ?" ಎಂದು ಟಾಂಗ್​ ಕೊಟ್ಟರು.

ಬಿಜೆಪಿ ಪಾದಯಾತ್ರೆ ಕುರಿತು ಮಾತನಾಡಿ, "ಇದು ಕಾನೂನುಬಾಹಿರ ಪಾದಯಾತ್ರೆ. ಸಂವಿಧಾನ ವಿರೋಧಿ‌ ಪಾದಯಾತ್ರೆ. ಪಾದಯಾತ್ರೆ ಮಾಡುವುದು ಒಂದು ಪ್ರಕ್ರಿಯೆ. ಆದರೆ ಯಾವ ವಿಷಯ ಇಟ್ಟುಕೊಂಡು ಮಾಡುತ್ತೇವೆ ಎಂಬುದು ಮುಖ್ಯ. ಅವರ ಪಾದಯಾತ್ರೆ ಯಾರ ವಿರುದ್ಧ, ಯಾವ ವಿಚಾರಕ್ಕೆ ಎಂಬುದು ಮುಖ್ಯ" ಎಂದರು.

"ಸೈಟ್ ಹೇಗೆ ಬಂದಿದೆ ಎಂಬ ವಿವರಣೆ ನೀಡಿದ ಸಚಿವ, ಕಾನೂನು ಬಾಹಿರವಾಗಿದ್ದರೂ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಹಂಚಿಕೆ ಮಾಡಿದ್ರು? ಅವರ ಮೇಲೆ ಕ್ರಮ ಆಗಬೇಕು. ಅಂದಿನ ಸಿಎಂ, ಕಮಿಟಿ ಅಧ್ಯಕ್ಷನ ಮೇಲೆ ಕ್ರಮ ಆಗಬೇಕು. ಕಾಂಗ್ರೆಸ್ ಸರ್ಕಾರ ಬರಲ್ಲ ಎಂದು ಉತ್ಸಾಹದಲ್ಲಿ ಇದ್ದರು. ಕೆಲವರು ಪಂಚೆ, ಸೂಟ್ ಹೊಲಿಸಿಕೊಂಡಿದ್ದರು. ಆದರೆ ಜನ ಕಾಂಗ್ರೆಸ್ ಪರ ತೀರ್ಮಾನ ಕೊಟ್ಟರು. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಬಂದಾಗಲಿಂದ ಈ ರೀತಿ ಮಾಡುತ್ತಿದ್ದಾರೆ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ." ಎಂದು ದೂರಿದರು.

"ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿ ಅಬ್ರಾಹಂ ಕೊಟ್ಟ ಅರ್ಜಿಗೆ ಉತ್ತರ ಕೊಟ್ಟಿದ್ದಾರೆ. ಗವರ್ನರ್ ಒಂದು ಪಕ್ಷದ ಗೊಂಬೆ ಆಗಬಾರದು. ಅವರ ಪೀಠದ ಬಗ್ಗೆ ಗೌರವ ಇದೆ. ಅವರ ಮಾತು ಬೇರೆಯವರಿಗೆ ಆಹಾರ ಆಗಬಾರದು. ನಾವೆಲ್ಲ ಅರ್ಜಿಯನ್ನು ಹಿಂತಿರುಗಿಸುವಂತೆ ನಿರ್ಣಯ ಕಳುಹಿಸಿದ್ದೇವೆ. ಅತ್ಯಂತ ಪ್ರಾಮಾಣಿಕ ಸಿಎಂ ಇದ್ದರೆ ಅದು ನಮ್ಮ ಸಿದ್ದರಾಮಯ್ಯ ಅವರು" ಎಂದರು.

ಇದನ್ನೂ ಓದಿ: ರಾಜ್ಯಪಾಲರಿಂದ ಶೋಕಾಸ್ ನೋಟಿಸ್​, ಅಬ್ರಹಾಂ ದೂರಿನ ಬಗ್ಗೆ ಸಿಎಂ ಹೇಳಿದ್ದೇನು? - CM Siddaramaiah

Last Updated : Aug 2, 2024, 9:48 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.