ETV Bharat / state

ಕೆಪಿಸಿಸಿಗೆ ಮೇಜರ್ ಸರ್ಜರಿ: ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಸೇರಿ ನೂತನ ಪದಾಧಿಕಾರಿಗಳ ನೇಮಕ - KPCC

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್​​ನಲ್ಲಿ ಬದಲಾವಣೆ ಮಾಡಲಾಗಿದೆ. ಕಾಂಗ್ರೆಸ್ ನೂತನ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳ ನೇಮಕಾತಿ ಮಾಡಿದೆ.

Etv Bharat
Etv Bharat
author img

By ETV Bharat Karnataka Team

Published : Apr 2, 2024, 7:09 AM IST

ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಎಐಸಿಸಿ ಕೆಪಿಸಿಸಿಗೆ ಮೇಜರ್ ಸರ್ಜರಿ ಮಾಡಿದೆ. ಲೋಕಸಭೆ ಚುನಾವಣೆಯಲ್ಲೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿರುವ ಕೆಪಿಸಿಸಿ ಜಿಲ್ಲಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಖಜಾಂಚಿಗಳನ್ನು ಬದಲಾವಣೆ ಮಾಡಲಾಗಿದೆ.

ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ಆನಂದ್ ನ್ಯಾಮಗೌಡ, ಎಂ.ಸಿ.ವೇಣುಗೋಪಾಲ್, ಪಿ.ಆರ್.ರಮೇಶ್, ಹೆಚ್. ಆಂಜನೇಯ, ರಮಾನಾಥ ರೈ, ಐವಾನ್ ಡಿಸೋಜಾ ಸೇರಿದಂತೆ ಒಟ್ಟು 43 ನೂತನ ಉಪಾಧ್ಯಕ್ಷರನ್ನು ನೇಮಿಸಲಾಗಿದೆ. ಜೊತೆಗೆ 138 ಪ್ರಧಾನ ಕಾರ್ಯದರ್ಶಿಗಳನ್ನು ನೆಮೀಸಲಾಗಿದೆ. ಇನ್ನು ವಿನಯ್ ಕಾರ್ತಿಕ್ ರನ್ನು ಖಜಾಂಚಿಯಾಗಿ ನೇಮಿಸಿದೆ.

ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷರನ್ನಾಗಿ ರಮೇಶ್ ಬಾಬುರನ್ನು ನೇಮಿಸಲಾಗಿದೆ. ಸಹ ಅಧ್ಯಕ್ಷರನ್ನಾಗಿ ಐಶ್ವರ್ಯ ಮಹದೇವ್ ಹಾಗೂ ಉಪಾಧ್ಯಕ್ಷರಾಗಿ ಸತ್ಯಪ್ರಕಾಶ್ ಅವರನ್ನು ನೇಮಿಸಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಜಿಲ್ಲಾ/ನಗರ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ನೇಮಕದ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷರು ತಕ್ಷಣವೇ ಜಾರಿಗೆ ಬರುವಂತೆ ಅನುಮೋದಿಸಿದ್ದಾರೆ. ಏಳು ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಬಳ್ಳಾರಿ ನಗರ - ಪ್ರಶಾಂತ್ ಅಲ್ಲಂ ವೀರಭದ್ರಪ್ಪ, ಬೆಂಗಳೂರು ಪೂರ್ವ - ಕೆ ನಂದಕುಮಾರ್, ಹಾವೇರಿ - ಸಂಜೀವಕುಮಾರ ನೇರಲಗಿ, ಕೊಪ್ಪಳ - ಅಮರೇಗೌಡ ಬಯ್ಯಾಪುರ, ಉಡುಪಿ - ಕಿಶನ್ ಹೆಗ್ಡೆ, ರಾಯಚೂರು - ಬಸವರಾಜ ಇಟಗಿ, ಶಿವಮೊಗ್ಗ - ಆರ್ ಪ್ರಸನ್ನ ಕುಮಾರ್ ಅವರನ್ನು ನೂತನ ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿದೆ.

ಇದನ್ನೂ ಓದಿ: ಲೋಕಸಮರದ ಹೊಸ್ತಿಲಲ್ಲಿ ಕೆಪಿಸಿಸಿಗೆ ಐವರು ಹೊಸ ಕಾರ್ಯಾಧ್ಯಕ್ಷರನ್ನು ನೇಮಿಸಿದ ಎಐಸಿಸಿ - KPCC working president

ETV Bharat Logo

Copyright © 2024 Ushodaya Enterprises Pvt. Ltd., All Rights Reserved.