ETV Bharat / state

ಕೆಎಲ್​ಇ ಕಾರ್ಯಾಧ್ಯಕ್ಷರಾಗಿ 40 ವರ್ಷ ಸೇವೆ: ಅಂತಾರಾಷ್ಟ್ರೀಯ ಮಟ್ಟಕ್ಕೆ ಶಿಕ್ಷಣ ಸಂಸ್ಥೆ ಬೆಳೆಸಿದ ಡಾ. ಕೋರೆಗೆ ಅಭಿನಂದನೆ - Dr Prabhakar Kore

author img

By ETV Bharat Karnataka Team

Published : May 19, 2024, 9:21 AM IST

Updated : May 19, 2024, 11:55 AM IST

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 40 ವರ್ಷಗಳನ್ನು ಪೂರೈಸಿದ ಡಾ.ಪ್ರಭಾಕರ್ ಕೋರೆಯನ್ನು ಕೆಎಲ್ಇ ಆಡಳಿತ ಮಂಡಳಿ ಅಭಿನಂದನಾ ಸಮಾರಂಭ ಕಾರ್ಯಕ್ರಮದ ಮೂಲಕ ಸನ್ಮಾನಿಸಿದೆ.

ಡಾ.ಪ್ರಭಾಕರ್ ಕೋರೆಗೆ ಸನ್ಮಾನ ಕಾರ್ಯಕ್ರಮ
ಡಾ.ಪ್ರಭಾಕರ್ ಕೋರೆಗೆ ಸನ್ಮಾನ ಕಾರ್ಯಕ್ರಮ (ETV Bharat)

ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ದಂಪತಿಗೆ ಅಭಿನಂದನೆ (ETV Bharat)

ಬೆಳಗಾವಿ: "ಕೆಎಲ್ಇ ಸಂಸ್ಥೆ ನನ್ನ ರಕ್ತದಲ್ಲಿ ಬೆರೆತು ನಿಂತಿದೆ. ನಾನು ಏನೇ ಆಗಿರಲಿ, ಏನೇ ಪದವಿ-ಪ್ರಶಸ್ತಿಗಳಿಗೆ ಭಾಜನ ಆಗಿರಲಿ, ಇದೆಲ್ಲ ಕೆಎಲ್ಇ ಸಂಸ್ಥೆಯಿಂದಲೇ ಎಂಬುದನ್ನು ಪ್ರಾಂಜಲ ಮನಸ್ಸಿನಿಂದ ಹೇಳಬಲ್ಲೆ. ಎಲ್ಲಿಯವರೆಗೆ ನನ್ನಲ್ಲಿ ಶಕ್ತಿಯಿದೆಯೋ ನಾನು ಸಂಸ್ಥೆಗಾಗಿ ಹಾಗೂ ಸಮಾಜಕ್ಕಾಗಿ ದುಡಿಯುತ್ತೇನೆ" ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಹೇಳಿದರು.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 40 ವರ್ಷಗಳನ್ನು ಪೂರೈಸಿದ ನಿಮಿತ್ತವಾಗಿ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕೆಎಲ್ಇ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. "ಕೆಎಲ್ಇ ಸಂಸ್ಥೆಯೇ ನನಗೆ ಸರ್ವಸ್ವ, ಸಪ್ತರ್ಷಿಗಳ ನೆನಹೆ ನನಗೆ ಉದಯ. ಅವರ ಮರೆವೇ ನನಗೆ ಅಸ್ತಮಾನ. ಅಂತಹ ಕೆ.ಎಲ್.ಇ. ಕಟ್ಟಿ ಬೆಳೆಸಿದ ಸಂಸ್ಥಾಪಕರನ್ನು ಶಿಕ್ಷಣ ಪರಿವಾರದವರನ್ನು ಮನಸಾರೆ ಸ್ಮರಿಸುತ್ತೇನೆ. ಕೆಎಲ್ಇ ಸಂಸ್ಥೆಯೇ ನನಗೆ ಏನೆಲ್ಲವನ್ನೂ ನೀಡಿದೆ, ಬೆಳೆಸಿದೆ. ಆದ್ದರಿಂದ ಸಮಾಜಕ್ಕಾಗಿ ನನಗೆ ಸಾಧ್ಯವಾದಷ್ಟು ಸೇವೆಯನ್ನು ನೀಡಲು ಪ್ರಯತ್ನಿಸಿದ್ದೇನೆ" ಎಂದರು.

ಡಾ.ಪ್ರಭಾಕರ್ ಕೋರೆ
ಡಾ.ಪ್ರಭಾಕರ್ ಕೋರೆ (ETV Bharat)

"ನಾನು ಪುಟ್ಟ ಅಂಕಲಿ ಗ್ರಾಮದಿಂದ ಬಂದವನು. ಒಂದು ಮಹಾಸಂಸ್ಥೆಯ ಕಾರ್ಯಾಧ್ಯಕ್ಷನಾಗಿ ಆಯ್ಕೆಯಾಗಿ 40 ವರ್ಷಗಳ ಕಾಲ ಮುನ್ನಡೆಸಿ ವಿಶ್ವಮಾನ್ಯ ಮಾಡಿದ್ದು ಪವಾಡವೇ. ಜಗತ್ತಿನಲ್ಲಿಯ ಅತ್ಯುತ್ತಮವಾದದ್ದನ್ನು ನೋಡಿದಾಗ ಅದನ್ನು ನಮ್ಮ ಕೆಎಲ್ಇ ಸಂಸ್ಥೆಯಲ್ಲಿಯೂ ಅಳವಡಿಸಿಕೊಳ್ಳುತ್ತಾ ಹೋದೆ. ಕೆಎಲ್ಇ ಸಂಸ್ಥೆಯನ್ನು ಸ್ಥಾಪಿಸಿದವರು 7 ಜನ ಶಿಕ್ಷಕರು, ಅವರ ತ್ಯಾಗ ಬಹುದೊಡ್ಡದು. ಅಂತಹ ಅಸಂಖ್ಯ ಶಿಕ್ಷಕರು ಇಲ್ಲಿ ತನು-ಮನ-ಧನದಿಂದ ದುಡಿದಿದ್ದಾರೆ. ಅವರು ಗುಣಾತ್ಮಕವಾದ ಶಿಕ್ಷಣವನ್ನು ನೀಡಿದ್ದರ ಫಲವೇ ಕೆಎಲ್ಇ ಸಂಸ್ಥೆಯು ಅಗಾಧವಾಗಿ ಬೆಳೆಯಲು ಸಾಧ್ಯವಾಯಿತು" ಡಾ. ಕೋರೆ ಸ್ಮರಿಸಿದರು.

"ನನಗೆ ಸಹಕಾರ ನೀಡಿದವರನ್ನು ಸ್ಮರಿಸುವೆ. ನಾನು ಒಬ್ಬನೇ ಕೆ.ಎಲ್.ಇ. ಸಾಧನೆಗಳಿಗೆ ಕಾರಣನಾದೆ ಎಂಬ 'ಅಹಂ' ನನಗಿಲ್ಲ, ಒಬ್ಬನಿಂದ ಏನೂ ಆಗಲಾರದು. ನನಗೆ 40 ವರ್ಷಗಳ ಕಾಲ ತೆರೆದ ಮನಸ್ಸಿನ ಸಹಕಾರ ನೀಡಿದ ನನ್ನ ಆಡಳಿತ ಮಂಡಳಿ ಸದಸ್ಯರ ಸಕಾರಾತ್ಮಕ ನಿಲುವುಗಳಿಂದ ನಾನು ಯಶಸ್ವಿಯಾದೆ. ಅನೇಕ ಬಾರಿ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯಾಗಿ ಯಶಸ್ವಿಯಾದೆ, ಚುನಾವಣೆಗಳನ್ನು ತಪ್ಪಿಸಿದೆ" ಎಂದರು.

ಡಾ.ಪ್ರಭಾಕರ್ ಕೋರೆ ದಂಪತಿಯಿಂದ ಕೇಕ್​ ಕಟ್ಟಿಂಗ್​
ಡಾ.ಪ್ರಭಾಕರ್ ಕೋರೆ ದಂಪತಿಯಿಂದ ಕೇಕ್​ ಕಟ್ಟಿಂಗ್​ (ETV Bharat)

"ನಮ್ಮ ಸಂಸ್ಥೆಯನ್ನು ದಾನಿಗಳ ಉದಾರ ಕೊಡುಗೆಯಿಂದಲೇ 38 ಸಂಸ್ಥೆಗಳಿಂದ 310ಕ್ಕೆ ವಿಸ್ತರಿಸಿದ್ದು ನಿಜವಾದ ಇತಿಹಾಸ. ಕರ್ನಾಟಕ ಹಾಗೂ ಮಹಾರಾಷ್ಟ್ರ ಮೊದಲ್ಗೊಂಡು 16 ಆಸ್ಪತ್ರೆಗಳು ಕಾರ್ಯನಿರ್ವಸುತ್ತ ಅಂತಾರಾಷ್ಟ್ರೀಯ ಮಾನ್ಯತೆ ಸಂಪಾದಿಸಿರುವುದು ನನಗೆ ಖುಷಿ ಕೊಟ್ಟಿದೆ. ಅಲೋಪಥಿಕ್-ಆಯುರ್ವೇದ-ಹೋಮಿಯೋಪಥಿಕ್ ಈ 3ನ್ನು ಜನಸೇವೆಗೆ ಅರ್ಪಿಸಿದ್ದೇನೆ" ಎಂದು ಡಾ. ಪ್ರಭಾಕರ್ ಕೋರೆ ಹರ್ಷ ವ್ಯಕ್ತಪಡಿಸಿದರು.

ಗೌರವ ಅತಿಥಿಗಳಾಗಿ ಆಗಮಿಸಿದ್ದ ಬಾಗಲಕೋಟೆ ಮಾಜಿ ಶಾಸಕ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಇಂದು ಕೆಎಲ್ಇ ಏಷ್ಯಾದ ಬಹುದೊಡ್ಡ ಭಾರತೀಯ ಶಿಕ್ಷಣ ಸಂಸ್ಥೆಯಾಗಿ ಬೆಳೆದಿರುವುದು ಹೆಮ್ಮೆ ಮತ್ತು ಅಭಿಮಾನ. ಕಳೆದ ಎಂಟು ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳ ಅವಿಸ್ಮರಣೀಯ ಭಾರತದ ಶೈಕ್ಷಣಿಕ, ಸಾಮಾಜಿಕ ಚರಿತ್ರೆಯಲ್ಲಿ ಶಿಕ್ಷಣದ ಮೂಲಕ ಸಮಾಜದ ಸಂಸ್ಕೃತಿ, ಸೇವೆಗೆ ಹೊಸ ಭಾಷ್ಯ ಬರೆದವರು ಡಾ. ಪ್ರಭಾಕರ ಕೋರೆ. ಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ ಮತ್ತು ಆರೋಗ್ಯ ಸೇವೆಗಳ ಮೂಲಕ ವಿಶ್ವಮಾನ್ಯ ಸಂಸ್ಥೆಯನ್ನಾಗಿ ಬೆಳೆಸಿದ್ದಾರೆ. ಸತ್ಯಸಂಕಲ್ಪ ಬಲದಿಂದ ಕೆಲಸ ಮಾಡಿ ಮುಟ್ಟಿದ್ದೆಲ್ಲ ಒಳ್ಳೆಯದನ್ನು ನೀಡುವ ಸ್ಪರ್ಶಮಣಿ ಶಕ್ತಿಯ ವ್ಯಕ್ತಿತ್ವದವರು" ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಕೆಎಲ್ಇ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗೌರವ ಅತಿಥಿಗಳು ಡಾ. ಪ್ರಭಾಕರ ಕೋರೆ ಹಾಗೂ ಆಶಾ ಕೋರೆಯವರನ್ನು ಸತ್ಕರಿಸಿ ಅಭಿನಂದಿಸಿದರು. ಡಾ.ಪ್ರಭಾಕರ ಕೋರೆಯವರ 40 ವರ್ಷಗಳ ಪಯಣವನ್ನು ಹೊತ್ತ ‘ರತ್ನರಾಜ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.

ಅತಿಥಿಗಳಾಗಿ ಆಗಮಿಸಿದ್ದ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಮ ಗುರುಬಸವರಾಜ ಡಾ. ಪ್ರಭಾಕರ್ ಕೋರೆ ಅವರ ಸೇವೆಯನ್ನು ಹಾಡಿ ಹೊಗಳಿದರು.

ಇದೇ ಸಂದರ್ಭದಲ್ಲಿ ಕೆಎಲ್ಇ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗೌರವ ಅತಿಥಿಗಳು ಡಾ.ಪ್ರಭಾಕರ ಕೋರೆ ಹಾಗೂ ಆಶಾ ಕೋರೆಯವರನ್ನು ಸತ್ಕರಿಸಿ ಅಭಿನಂದಿಸಿದರು.

ಈ ವೇಳೆ ಕೆಎಲ್ಇ ಸಂಸ್ಥೆ ಅಧ್ಯಕ್ಷರೂ ಆಗಿರುವ ಶಾಸಕ ಮಹಾಂತೇಶ ಕೌಜಲಗಿ, ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಡಾ. ವಿಶ್ವನಾಥ ಪಾಟೀಲ, ಮಹಾಂತೇಶ ಕವಟಗಿಮಠ, ಡಾ. ವಿ.ಎಸ್. ಸಾಧುನವರ, ಜಯಾನಂದ ಮುನವಳ್ಳಿ, ವೈ.ಎಸ್.ಪಾಟೀಲ, ಶಂಕರಣ್ಣ ಮುನವಳ್ಳಿ, ಅನಿಲ ಪಟ್ಟೇದ, ಬಾಬಣ್ಣ ಮೆಟಗುಡ್ಡ, ಪ್ರವೀಣ ಬಾಗೇವಾಡಿ, ಅಮಿತ ಕೋರೆ, ಎಂ.ಸಿ. ಕೊಳ್ಳಿ ಉಪಸ್ಥಿತರಿದ್ದರು. ಕೆಎಲ್‌ಇ ಯುಎಸ್‌ಎಂ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ, ಬಿವಿಬಿ ಉಪಕುಲಪತಿ ಡಾ.ಅಶೋಕ ಶೆಟ್ಟರ್​ ಸೇರಿ ಮತ್ತಿತರರು ಇದ್ದರು. ಡಾ. ಮಹೇಶ ಗುರನಗೌಡರ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ: ಗಂಗಾವತಿ: ಆರ್​ಸಿಬಿ ಕ್ರಿಕೆಟ್ ತಂಡದ ಗೆಲುವಿಗಾಗಿ ರಕ್ತದಾನ ಮಾಡಿದ ಅಭಿಮಾನಿಗಳು - Indian Premier League

Last Updated : May 19, 2024, 11:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.