ETV Bharat / state

ನಮ್ಮ ಠೇವಣಿ ಹಣ ಮರಳಿಸಿ: ಕಿತ್ತೂರು ಚನ್ನಮ್ಮ ಬ್ಯಾಂಕ್ ಗ್ರಾಹಕರಿಂದ ಪ್ರತಿಭಟನೆ - DEPOSITORS PROTEST

ನಮ್ಮ ಠೇವಣಿ ಹಣ ಮರಳಿಸುವಂತೆ ಕಿತ್ತೂರು ಚನ್ನಮ್ಮ ಬ್ಯಾಂಕ್ ಗ್ರಾಹಕರು ಪ್ರತಿಭಟನೆ ನಡೆಸಿದರು.

DEPOSITORS PROTEST
ಕಿತ್ತೂರು ಚನ್ನಮ್ಮ ಬ್ಯಾಂಕ್ ಗ್ರಾಹಕರಿಂದ ಪ್ರತಿಭಟನೆ (ETV Bharat)
author img

By ETV Bharat Karnataka Team

Published : Jan 17, 2025, 2:30 PM IST

ಬೆಳಗಾವಿ: ಬೈಲಹೊಂಗಲ ಕಿತ್ತೂರು‌ ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಠೇವಣಿದಾರರ ಹಣ ಮರು ಪಾವತಿಸುತ್ತಿಲ್ಲ. ಅಲ್ಲದೇ ಬ್ಯಾಂಕಿನಲ್ಲಿ ಸುಮಾರು 600 ಕೋಟಿ ರೂ.‌ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನೂರಾರು ಠೇವಣಿದಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಧರಣಿ‌ ನಡೆಸಿದರು.

ನಗರದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದ ಠೇವಣಿದಾರರು, ಸೊಸೈಟಿ ಚೇರ್ಮನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಡವರು, ಕೂಲಿಕಾರರು ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಾರೆ. ಅಲ್ಲದೇ ಕೆಲವೊಂದಿಷ್ಟು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮತ್ತೊಂದಿಷ್ಟು ಜನರು ಮನೆ ಕಟ್ಟುತ್ತಿದ್ದಾರೆ. ಅಲ್ಲದೇ ಮದುವೆಯನ್ನೂ ಆಗುತ್ತಿದ್ದಾರೆ. ಅಂಥವರಿಗೆ ಹಣದ ಸಮಸ್ಯೆ ಆಗುತ್ತಿದೆ ಎಂದು ಠೇವಣಿದಾರರು ಅಳಲು ತೋಡಿಕೊಂಡರು.

ಕಿತ್ತೂರು ಚನ್ನಮ್ಮ ಬ್ಯಾಂಕ್ ಗ್ರಾಹಕರಿಂದ ಪ್ರತಿಭಟನೆ (ETV Bharat)

ಠೇವಣಿದಾರ ವಿಜಯ ಗೌಡರ ಮಾಧ್ಯಮಗಳ ಜೊತೆಗೆ ಮಾತನಾಡಿ, ಚನ್ನಮ್ಮ ಬ್ಯಾಂಕಿನಲ್ಲಿ‌ ಒಟ್ಟು 762 ಕೋಟಿ ರೂ.‌ ಠೇವಣಿ ಇಟ್ಟಿರುವ ಬಗ್ಗೆ ನಮಗೆ ಮಾಹಿತಿ ಇದೆ. ಇದರಲ್ಲಿ ಬ್ಯಾಂಕ್ ಚೇರ್ಮನ್​ ಮತ್ತ ಅವರ ಮನೆಯವರೇ ಅಂದಾಜು 433 ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ. ಈ ಹಣವನ್ನು ಅವರು ಬ್ಯಾಂಕಿಗೆ ಮರಳಿಸಿಲ್ಲ. ಅದರ ಬಡ್ಡಿ ಎಲ್ಲ ಸೇರಿ ಈಗ 551 ಕೋಟಿ ರೂ. ಆಗಿದೆ. ಈಗ ನಾವು ನಮ್ಮ ಠೇವಣಿ ಹಣ ಕೇಳಲು ಹೋದರೆ ನಮ್ಮ ಆಸ್ತಿ ಮಾರಾಟ ಮಾಡಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಮ್ಮನ್ನು ಅಲೆದಾಡಿಸುತ್ತಿದ್ದಾರೆ. ಹಾಗಾಗಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗಿ ನಮ್ಮ ದುಡ್ಡು ನಮಗೆ ವಾಪಸ್​ ಕೊಡಬೇಕು ಎಂದು ಆಗ್ರಹಿಸಿದರು.

ಗ್ರಾಹಕ ಮಹಾರುದ್ರಪ್ಪ ನೀರಲಗಿ ಮಾತನಾಡಿ, ಬಡ ಜನರೇ ಹೆಚ್ಚು ಚನ್ನಮ್ಮ ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟಿದ್ದಾರೆ. ಬಡವರ ಹಣವನ್ನು ಒಂದೇ ಕುಟುಂಬಕ್ಕೆ ಸುಮಾರು 515 ಕೋಟಿ ಹಣ ಸಾಲ ಹೇಗೆ ಕೊಟ್ಟರು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಈಗಿರುವ ಸಹಕಾರಿ ಸಂಘದ ಕಾಯ್ದೆ ಗ್ರಾಹಕರ ಪರವಾಗಿಲ್ಲ. ಮೊದಲು ಅದನ್ನು ತೆಗೆದು ಹಾಕಬೇಕು. ನಮ್ಮ ಹಣ ನಮಗೆ ಮರಳಿಸಬೇಕು ಎಂದು ಒತ್ತಾಯಿಸಿದರು.

ತಮ್ಮ ಠೇವಣಿ ಹಣ ಮರಳಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ‌ವಹಿಸುವಂತೆ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಠೇವಣಿದಾರರು ಮನವಿ ಸಲ್ಲಿಸಿದರು.

ಇದನ್ನೂ ಓದಿ: ಸಾಲ ಮರುಪಾವತಿ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅರೆಸ್ಟ್ - MCC BANK CHAIRMAN ARRESTED

ETV Bharat Logo

Copyright © 2025 Ushodaya Enterprises Pvt. Ltd., All Rights Reserved.