ETV Bharat / state

ಕೆಂಪೇಗೌಡ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್​ ಆಧುನೀಕರಣ - KIA ATC

author img

By ETV Bharat Karnataka Team

Published : Jul 5, 2024, 12:52 PM IST

ಹೊಸ ATC ಗೋಪುರ ನಿರ್ಮಿಸಿ, ಎಲ್ಲಾ ಕಾರ್ಯಾಚರಣೆಯನ್ನೂ ಅಲ್ಲಿಗೆ ಸ್ಥಳಾಂತರಿಸಿದ ನಂತರ ಈಗಿರುವ ATCಯನ್ನು ಸಂಪೂರ್ಣವಾಗಿ ನವೀಕರಿಸಲಾಗುವುದು ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Air Traffic Control of Kempegowda International Airport
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (KIA Office)

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಏರ್ ಟ್ರಾಫಿಕ್ ಕಂಟ್ರೋಲ್ (ATC) ಅನ್ನು ನವೀಕರಿಸಲಾಗುತ್ತಿದೆ. ಭವಿಷ್ಯದ ಏರ್ ಟ್ರಾಫಿಕ್ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನವೀನ ತಂತ್ರಜ್ಞಾನದೊಂದಿಗೆ ಆಧುನೀಕರಣ ಮಾಡಲಾಗುತ್ತಿದೆ.

ಕಳೆದ 16 ವರ್ಷಗಳಿಂದ ಏರ್ ಟ್ರಾಫಿಕ್ ಕಂಟ್ರೋಲ್ ಕಾರ್ಯನಿರ್ವಹಿಸುತ್ತಿದೆ. ಭವಿಷ್ಯದ ವಿಮಾನಯಾನ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ನವೀಕರಣ ಮಾಡಲಾಗುತ್ತಿದೆ. 2008ರ ಮೇ 24ರಂದು ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟದೊಂದಿಗೆ ಏರ್ ಟ್ರಾಫಿಕ್ ಕಂಟ್ರೋಲ್ ಸೇವೆ ಆರಂಭಿಸಿತ್ತು. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಇದನ್ನು ನಿರ್ವಹಿಸುತ್ತಿದೆ.

ಟರ್ಮಿನಲ್ 1ರ ಬಳಿ ಇರುವ ಏರ್ ಟ್ರಾಫಿಕ್ ಕಂಟ್ರೋಲ್ 720ರಿಂದ 730 ವಿಮಾನ ಸಂಚಾರವನ್ನು ನಿರ್ವಹಿಸುತ್ತಿದೆ. ಭವಿಷ್ಯದಲ್ಲಿ ವಿಮಾನ ಸಂಚಾರ ಇನ್ನೂ ಹೆಚ್ಚಾಗಲಿದ್ದು, ಬೇಡಿಕೆ ಪೂರೈಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ನಿಲ್ದಾಣದ ವಕ್ತಾರರ ಪ್ರಕಾರ, ವಿಮಾನ ನಿಲ್ದಾಣದ ಬಳಿ ಮತ್ತೊಂದು ATC ಗೋಪುರ ನಿರ್ಮಾಣ ಮಾಡಲಾಗುವುದು. ಪ್ರಸ್ತುತ ಇರುವ ATCಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಒಮ್ಮೆ ಹೊಸ ಟವರ್​ಗೆ ಸ್ಥಳಾಂತರಗೊಂಡರೆ ಪ್ರಸ್ತುತ ATCಯನ್ನು ಸಂಪೂರ್ಣವಾಗಿ ನವೀಕರಿಸಲಾಗುವುದು. ನವೀಕರಣ ಮತ್ತು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ಅಂದಾಜು 200 ಕೋಟಿ ರೂ ವೆಚ್ಚವಾಗಲಿದೆ. ಇದರ ಕಾಮಾಗಾರಿ 6 ತಿಂಗಳಿಂದ 1 ವರ್ಷದವರೆಗೂ ನಡೆಯುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ. ಪ್ರಸ್ತುತ ಇರುವ ATC ಉತ್ತಮ ಸ್ಥಿತಿಯಲ್ಲಿದ್ದು, ಇನ್ನೂ 10 ರಿಂದ 12 ವರ್ಷಗಳವರೆಗೂ ಕಾರ್ಯ ನಿರ್ವಹಿಸುವಷ್ಟು ಕ್ಷಮತೆ ಹೊಂದಿದೆ.

ಇದನ್ನೂ ಓದಿ: ಬೆಂಗಳೂರಿನ ಅಗತ್ಯಗಳಿಗೆ ಮತ್ತೊಂದು ವಿಮಾನ ನಿಲ್ದಾಣ: ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಚಿವ ಎಂ.ಬಿ. ಪಾಟೀಲ್ - Another airport for Bangaluru needs

ETV Bharat Logo

Copyright © 2024 Ushodaya Enterprises Pvt. Ltd., All Rights Reserved.