ETV Bharat / state

ಸಿಇಟಿ-2024: ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಕೆಇಎ ಸೂಚನೆ - CET 2024 - CET 2024

ಸಿಇಟಿ ಪ್ರವೇಶ ಪತ್ರಗಳನ್ನು ತಕ್ಷಣ ಡೌನ್ಲೋಡ್ ಮಾಡಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ.

kea-notice-to-download-hall-tickets-for-cet-2024
ಸಿಇಟಿ-2024: ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಕೆಇಎ ಸೂಚನೆ
author img

By ETV Bharat Karnataka Team

Published : Apr 11, 2024, 9:31 AM IST

ಬೆಂಗಳೂರು: ಏಪ್ರಿಲ್ 18 ಮತ್ತು 19 ರಂದು ನಡೆಯಲಿರುವ ಸಿಇಟಿ - 24ರ ಪ್ರವೇಶ ಪತ್ರಗಳನ್ನು ಇನ್ನೂ ಡೌನ್ಲೋಡ್ ಮಾಡಿಕೊಂಡಿರದ ಅಭ್ಯರ್ಥಿಗಳಿಗೆ ಈಗಲೇ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೂಚಿಸಿದೆ.

ಸಿಇಟಿ ಪರೀಕ್ಷೆಗೆ ಅರ್ಜಿ ಹಾಕಿರುವ ಇನ್ನೂ ಸುಮಾರು 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿಲ್ಲ. ಮುಂಚಿತವಾಗಿಯೇ ಡೌನ್ಲೋಡ್ ಮಾಡಿಕೊಂಡರೆ ಕೊನೆಯ ಕ್ಷಣದ ತೊಡಕುಗಳು ಹಾಗೂ ಆತಂಕಗಳಿಂದ ಮುಕ್ತವಾಗಿ ಪರೀಕ್ಷೆ ಎದುರಿಸಲು ಸಹಕಾರಿಯಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸಿಇಟಿ - 24 ಬರೆಯಲು ಒಟ್ಟು 3,27,384 ಅಭ್ಯರ್ಥಿಗಳು ಅರ್ಜಿ ಹಾಕಿದ್ದು, ಇದುವರೆಗೆ 2,76,495 ವಿದ್ಯಾರ್ಥಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಉಳಿದ 50,889 ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕಾಗಿದೆ ಎಂದು ಅವರು ವಿವರಿಸಿದ್ದಾರೆ.

ಶುಲ್ಕ ಪಾವತಿ, ಪರೀಕ್ಷೆ ಆಯ್ಕೆಗೆ ಏಪ್ರಿಲ್​ 12ರ ಗಡುವು: ಸಿಇಟಿ ಪರೀಕ್ಷೆಗೆ ಆನ್​ಲೈನ್ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮನವಿ ಮೇರೆಗೆ ಶುಲ್ಕ ಪಾವತಿಸಲು ಮತ್ತು ಸಿಇಟಿ ಪರೀಕ್ಷೆಯ ಆಯ್ಕೆಗೆ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ ಎಂದು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದರು.

ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳು ಏಪ್ರಿಲ್​ 10 ರ ಬೆಳಗ್ಗೆಯಿಂದ ಏಪ್ರಿಲ್​ 12 ರ ಸಂಜೆ 5 ಗಂಟೆಯವರೆಗೆ ಶುಲ್ಕ ಪಾವತಿಸಬಹುದಾಗಿದೆ. ಇಂತಹ ಅಭ್ಯರ್ಥಿಗಳು 'ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು' ಇವರ ಹೆಸರಿಗೆ 600 ರೂ. ಮೊತ್ತದ ಡಿ.ಡಿ. ತೆಗೆಸಿಕೊಂಡು, ಸಿಇಟಿ ಅರ್ಜಿ ನಮೂನೆ ಸಹಿತ ಪ್ರಾಧಿಕಾರದ ಕಚೇರಿಗೆ ಖುದ್ದಾಗಿ ಹಾಜರಾಗಬೇಕು ಎಂದು ನಿರ್ದೇಶಕರು ಮಾಹಿತಿ ನೀಡಿದ್ದರು.

ಅರ್ಜಿಯಲ್ಲಿ ಕೆಲವರು ಕೇವಲ ನೀಟ್ ಆಯ್ಕೆ ಮಾಡಿಕೊಂಡಿದ್ದಾರೆ. ಅಂತಹವರು ಈಗ ಸಿಇಟಿ ಪರೀಕ್ಷೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಅಂತಹ ಅಭ್ಯರ್ಥಿಗಳು ಕೂಡ ಏಪ್ರಿಲ್​ 12 ರ ಸಂಜೆ 5 ಗಂಟೆಯೊಳಗೆ ಪ್ರಾಧಿಕಾರಕ್ಕೆ ಹಾಜರಾಗಿ ಅರ್ಜಿ ಸಲ್ಲಿಸಬೇಕು ಎಂದು ಎಸ್. ರಮ್ಯಾ ಹೇಳಿದ್ದರು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರಾಜ್ಯದ ಯಾವುದೇ ಭಾಗದಲ್ಲಿ ಖಾಲಿ‌ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಅವಕಾಶ ನೀಡಲಾಗುವುದು. ಅಭ್ಯರ್ಥಿಗಳು ಇದಕ್ಕೆ ಸಿದ್ಧರಿರಬೇಕು ಮತ್ತು ಈ ಹಂತದಲ್ಲಿ ಅರ್ಜಿ ಪರಿಗಣಿಸುವುದರಿಂದ ದತ್ತಾಂಶಗಳಲ್ಲಿ ಆಗಲಿರುವ ವ್ಯತ್ಯಾಸವನ್ನು ಆಕ್ಷೇಪಿಸಲು ಯಾವುದೇ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: ಸಿಇಟಿ ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ: ಸಿಇಟಿ ಶುಲ್ಕ ಪಾವತಿ, ಪರೀಕ್ಷೆ ಆಯ್ಕೆಗೆ ಏಪ್ರಿಲ್​ 12ರ ಗಡುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.