ಬೆಂಗಳೂರು: ರಾಜ್ಯದಲ್ಲಿ ನಿಗದಿಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಇಂದಿನಿಂದ ಚಾಲಕ / ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಲಿದೆ. ಜೊತೆಗೆ, ಅಂತಹ ವಾಹನ ಸವಾರರ ಚಾಲನಾ ಪರವಾನಗಿ (ಡ್ರೈವಿಂಗ್ ಲೆಸೆನ್ಸ್) ರದ್ದು ಕೋರಿ ಆರ್ಟಿಒ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಸೇರಿದಂತೆ ರಾಜ್ಯದಲ್ಲಿ ಪ್ರತಿ ಗಂಟೆಗೆ 130 ಕೀ.ಮೀ.ಗಿಂತ ಹೆಚ್ಚಿನ ವೇಗವಾಗಿ ವಾಹನ ಚಲಾಯಿಸಿದರೆ ಅಂತಹ ಚಾಲಕರ ವಿರುದ್ಧ ಇಂದಿನಿಂದ ಎಫ್ಐಆರ್ ದಾಖಲಿಸಲಾಗುವುದು ಎಂದು ರಸ್ತೆ ಸಾರಿಗೆ ಹಾಗೂ ಸುರಕ್ಷತೆ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದರು.
ದಯವಿಟ್ಟು ಗಮನಿಸಿ 🚨: pic.twitter.com/pRFdKXemKa
— ಕರ್ನಾಟಕ ರಾಜ್ಯ ಪೊಲೀಸ್ Karnataka State Police (@KarnatakaCops) August 1, 2024
ವೇಗದ ಚಾಲನೆಯಿಂದಾಗಿ ಹೈವೇಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿರುವುದು ಕಂಡುಬಂದಿತ್ತು. ಹೀಗಾಗಿ, ಅಪಘಾತ ಪ್ರಮಾಣ ತಗ್ಗಿಸಲು ವೇಗದ ಮಿತಿ 130 ಕಿ.ಮೀ ದಾಟದಂತೆ ಸೂಚಿಸಲಾಗಿತ್ತು. ಇಂದಿನಿಂದ ರಾಜ್ಯದಲ್ಲಿ ನಿಗದಿಪಡಿಸಿದಕ್ಕಿಂತ ವೇಗವಾಗಿ ಚಲಾಯಿಸಿದರೆ ಪ್ರಕರಣ ದಾಖಲಾಗಿದೆ.
'ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ನಿಗದಿಪಡಿಸಿದ ವೇಗದ ಮಿತಿ ಮೀರಿ 130 ಕೀ.ಮಿಗಳಿಗಿಂತ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವ ವಾಹನ ಚಾಲಕರ ವಿರುದ್ಧ ಬಿಎನ್ಎಸ್ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಳ್ಳುವುದಲ್ಲದೆ, ಅಂತಹ ವಾಹನ ಚಾಲಕರ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಲು ಸಕ್ಷಮ ಅಧಿಕಾರಿಗಳಿಗೆ ಶಿಫಾರಸು ಸಲ್ಲಿಸಲಾಗುವುದು' ಎಂದು ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.