ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಳ್ಳಾರಿಯಲ್ಲಿ ಇ.ತುಕಾರಾಂ, ಮಂಡ್ಯದಲ್ಲಿ ಹೆಚ್ಡಿ ಕುಮಾರಸ್ವಾಮಿ ಗೆಲುವು. ಮೂವರೂ ಹಾಲಿ ಶಾಸಕರಾಗಿದ್ದು, ಮೂರೂ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ELECTION RESULT LIVE UPDATE: ಸಾಗರ್ ಖಂಡ್ರೆ, ಪ್ರಿಯಾಂಕಾ, ಬೊಮ್ಮಾಯಿ, ಕಾಗೇರಿಗೆ ಗೆಲುವಿನ ಸಿಹಿ - Lok Sabha Election Results live
Published : Jun 4, 2024, 7:13 AM IST
|Updated : Jun 4, 2024, 1:39 PM IST
LIVE FEED
ಹಾಲಿ ಶಾಸಕರು ದೆಹಲಿಗೆ: ಮೂರು ಸ್ಥಾನಗಳಿಗೆ ಉಪ ಚುನಾವಣೆ ಪಕ್ಕಾ
ಸಾಗರ್ ಖಂಡ್ರೆ, ಪ್ರಿಯಾಂಕಾ, ಬೊಮ್ಮಾಯಿ, ಕಾಗೇರಿಗೆ ಗೆಲುವಿನ ಸಿಹಿ
ಚಿಕ್ಕೋಡಿಯಲ್ಲಿ ಕಾಂಗ್ರೆಸ್ನ ಪ್ರಿಯಾಂಕಾ ಜಾರಕಿಹೊಳಿ ಗೆಲುವು. ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆಗೆ ಹೀನಾಯ ಸೋಲು. ಉತ್ತರಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಗೆಲುವು. ಕಾಂಗ್ರೆಸ್ನ ಅಂಜಲಿ ನಿಂಬಾಳ್ಕರ್ಗೆ ಸೋಲು. ಕಾಂಗ್ರೆಸ್ನ ಸಾಗರ್ ಖಂಡ್ರೆಗೆ ಜಯ, ಕೇಂದ್ರ ಸಚಿವ ಭಗವಂತ್ ಖೂಬಾಗೆ ಸೋಲು. ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಗೆ ಜಯ. ಕಾಂಗ್ರೆಸ್ನ ಆನಂದಸ್ವಾಮಿ ಗಡ್ಡದ್ದೇವರಮಠಗೆ ಪರಾಜಯ.
ಗೆಲುವಿನತ್ತ ತೇಜಸ್ವಿ ಸೂರ್ಯ, ಪ್ರಜ್ವಲ್ಗೆ ಭಾರೀ ಹಿನ್ನಡೆ
ಬಿಜೆಪಿಯ ಶೋಭಾ ಕರಂದ್ಲಾಜೆ, ಧಾರವಾಡದಲ್ಲಿ ಪ್ರಲ್ಹಾದ್ ಜೋಶಿ, ಮಂಡ್ಯದಲ್ಲಿ ಕುಮಾರಸ್ವಾಮಿಗೆ ಮುನ್ನಡೆ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯಗೆ ಗೆಲುವಿನ ನಿರೀಕ್ಷೆ, ಹಾಸನದಲ್ಲಿ ಹಾವು ಏಣಿ ಆಟ. 30 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ನ ಶ್ರೇಯಸ್ ಪಟೇಲ್. ಜೆಡಿಎಸ್ನ ಪ್ರಜ್ವಲ್ಗೆ ಹಿನ್ನಡೆ.
ಸೋಮಣ್ಣ, ಸುಧಾಕರ್, ಸಾಗರ್ ಖಂಡ್ರೆ, ರಾಜಶೇಖರ್ ಹಿಟ್ನಾಳ್ಗೆ ಮುನ್ನಡೆ
ತುಮಕೂರಿನಲ್ಲಿ ಬಿಜೆಪಿಯ ವಿ.ಸೋಮಣ್ಣ 84 ಸಾವಿರ ಮತಗಳು, ಬಿಜೆಪಿಯ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ 50, ಬೀದರ್ನಲ್ಲಿ ಕಾಂಗ್ರೆಸ್ನ ಸಾಗರ್ ಖಂಡ್ರೆ 65 ಸಾವಿರ ಮುನ್ನಡೆ. ಕೊಪ್ಪಳದಲ್ಲಿ ಕಾಂಗ್ರೆಸ್ನ ರಾಜಶೇಖರ್ ಹಿಟ್ನಾಳ್ 5 ಸಾವಿರ ಮತಗಳಿಂದ ಮುನ್ನಡೆ.
ತೇಜಸ್ವಿ ಸೂರ್ಯ 1 ಲಕ್ಷ ಮತಗಳ ಅಂತ‘ರದ ಮುನ್ನಡೆ
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಭರ್ಜರಿ ಮುನ್ನಡೆ. 2,30,923 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ನ ಸೌಮ್ಯರೆಡ್ಡಿ ವಿರುದ್ಧ 1,19,566 ಮತಗಳ ಅಂತರದಲ್ಲಿ ಮುಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ ಡಾ.ಮಂಜುನಾಥ್ ಭಾರೀ ಮುನ್ನಡೆ
ಬೆಂಗಳೂರು ಗ್ರಾಮಾಂತರದಲ್ಲಿ 83 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ ಕಾಯ್ದುಕೊಂಡ ಡಾ.ಸಿ.ಎನ್. ಮಂಜುನಾಥ್. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ಗೆ ತೀವ್ರ ಹಿನ್ನಡೆ.
ಮಂಡ್ಯದಲ್ಲಿ ಕುಮಾರಸ್ವಾಮಿ ಸತತ ಮುನ್ನಡೆ
ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನಾಲ್ಕನೇ ಸುತ್ತಿನಲ್ಲೂ ಸತತ ಮುನ್ನಡೆ, 30 ಸಾವಿರಕ್ಕೂ ಅಧಿಕ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ ಭಾರೀ ಮುನ್ನಡೆ ಸಾಧಿಸುತ್ತಿದ್ದಾರೆ.
ಏರಿಳಿತ ಕಾಣುತ್ತಿರುವ ಕಾಂಗ್ರೆಸ್, ಎನ್ಡಿಎ ಅಭ್ಯರ್ಥಿಗಳು
ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ 1 ಲಕ್ಷ ಮತಗಳನ್ನು ಪಡೆದುಕೊಂಡು ಮುನ್ನಡೆ ಸಾಧಿಸುತ್ತಿದ್ದಾರೆ. 2 ಸಾವಿರ ಮತಗಳ ಅಂತರದಿಂದ ವಿ.ಸೋಮಣ್ಣ ಅವರು ಮುಂದಿದ್ದಾರೆ. ಬಳ್ಳಾರಿಯಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ನ ಇ.ತುಕಾರಾಂ ಮುನ್ನಡೆ ಸಾಧಿಸುತ್ತಿದ್ದಾರೆ.
ಕೆ.ಎಸ್ ಈಶ್ವರಪ್ಪಗೆ ಭಾರೀ ಹಿನ್ನಡೆ, ಡಾ.ಮಂಜುನಾಥ್ಗೆ ಮುನ್ನಡೆ
ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಅವರಿಗೆ ಮುನ್ನಡೆ, ಡಿಕೆ ಸುರೇಶ್ಗೆ ಹಿನ್ನಡೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯಗೆ, ಬಳ್ಳಾರಿಯಲ್ಲಿ ಶ್ರೀರಾಮುಲು ಮುನ್ನಡೆ, ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರು ಭಾರೀ ಹಿನ್ನಡೆ ಹೊಂದಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಆರಂಭಿಕ ಮುನ್ನಡೆ
ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಆರಂಭಿಕ ಮುನ್ನಡೆ, ಹಾವೇರಿಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ, ಜೆಡಿಎಸ್ನ ಕೋಲಾರದಲ್ಲಿ ಮಲ್ಲೇಶ್ಬಾಬು, ಉಡುಪಿ- ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಮುನ್ನಡೆ, ಚಿಕ್ಕೋಡಿಯಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್ ಮುನ್ನಡೆ ಪಡೆದಿದ್ದಾರೆ.
ಅಂಚೆ ಮತಗಳ ಎಣಿಕೆ ಆರಂಭ
ರಾಜ್ಯದ 29 ಮತ ಎಣಿಕೆ ಕೇಂದ್ರಗಳ ಸ್ಟ್ರಾಂ ರೂಮ್ ತೆಗೆದು ಅಂಚೆ ಮತಗಳನ್ನು ಎಣಿಸುತ್ತಿರುವ ಅಧಿಕಾರಿಗಳು. ಭಾರೀ ಪೊಲೀಸ್ ಬಿಗಿ ಭದ್ರತೆಯಲ್ಲಿ ಮತ ಎಣಿಕೆ ಆರಂಭವಾಗಿದೆ.