ETV Bharat / state

ಜೋಗದಲ್ಲಿ ಅಭಿವೃದ್ದಿ ಕಾಮಗಾರಿ ಶೇ 85 ರಷ್ಟು ಪೂರ್ಣ; 2025ರ ನವೆಂಬರ್​ಗೆ ಲೋಕಾರ್ಪಣೆ - JOG FALLS DEVELOPMENT WORK

ಜಗತ್ಪ್ರಸಿದ್ಧ ಜೋಗ ಜಲಪಾತ ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಸುವ ಕಾಮಗಾರಿ ಭರದಿಂದ ಸಾಗಿದ್ದು, ಈ ಕುರಿತು ಈಟಿವಿ ಭಾರತದ ಪ್ರತಿನಿಧಿ ಕಿರಣ್ ಅವರ ವರದಿ ಇಲ್ಲಿದೆ.

jog-falls-development-work
ಜೋಗದಲ್ಲಿ ಅಭಿವೃದ್ದಿ ಕಾಮಗಾರಿ (ETV Bharat)
author img

By ETV Bharat Karnataka Team

Published : Nov 25, 2024, 9:04 PM IST

ಶಿವಮೊಗ್ಗ: ಜಗದ್ವಿಖ್ಯಾತ ಜೋಗ ಜಲಪಾತ ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಜೋಗದ ಗುಂಡಿ ಪ್ರತಿ ಬಾರಿಯೂ ನೋಡುಗರಿಗೆ ಹೊಸ ಅನುಭವ ನೀಡುತ್ತದೆ. ಇಂತಹ ಜೋಗ ಜಲಪಾತ ಮಳೆಗಾಲ, ಬೇಸಿಗೆ ಹೀಗೆ ಕಾಲ ಕಾಲಕ್ಕೆ ವಿಭಿನ್ನವಾಗಿ ತನ್ನನ್ನು ತೆರೆದುಕೊಳ್ಳುತ್ತದೆ. ಅಷ್ಟೇ ಏಕೆ ಹತ್ತಿರದಿಂದ ಅದ್ಭುತವಾಗಿ ಕಾಣುವ ಶರಾವತಿ ಭೋರ್ಗರೆತ, ಉತ್ತರ ಕನ್ನಡದ ಬ್ರಿಟಿಷ್​ ಬಂಗ್ಲೆ ಭಾಗದಿಂದ ನೋಡಿದಾಗ ಬೇರೆಯದ್ದೇ ಅನುಭವ ನೀಡುವುದು ವಿಶೇಷ.

ಅಂತೆಯೇ ಜಗತ್ ಪ್ರಸಿದ್ಧ ಜೋಗ ಜಲಪಾತದಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳನ್ನು ಒದಗಿಸುವ ಹಾಗೂ ಜೋಗವನ್ನು ಹತ್ತಿರದಿಂದ ನೋಡುವ ಅವಕಾಶ ಕಲ್ಪಿಸಲು ಜೋಗದ ಸಮಗ್ರ ಅಭಿವೃದ್ದಿ ಕಾರ್ಯ ಭರದಿಂದ ಸಾಗುತ್ತಿದ್ದು, ಈ ಕುರಿತ ವರದಿ ಇಲ್ಲಿದೆ.

ಜೋಗದ ಅಭಿವೃದ್ದಿ ಕಾಮಗಾರಿ ಶೇ 85 ರಷ್ಟು ಪೂರ್ಣ ; 2025ರ ನವೆಂಬರ್​ಗೆ ಲೋಕಾರ್ಪಣೆ (ETV Bharat)

ಜೋಗ ಜಲಪಾತದ ಸಮಗ್ರ ಅಭಿವೃದ್ದಿ ಪ್ರವಾಸೋದ್ಯಮಕ್ಕೆ ಉತ್ತೇಜನ : ಜೋಗ ಜಲಪಾತವನ್ನು ಕಂಡವರು ವಾಹ್.. ಎಂದು ಹೇಳದೇ ಇರಲಾರರು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತವು ಶರಾವತಿ ನದಿಯಿಂದ ಪ್ರಸಿದ್ದಿಯನ್ನು ಪಡೆದಿದೆ. ಜೋಗ ಜಲಪಾತದಲ್ಲಿ ಶರಾವತಿ‌‌ ನದಿಯು 920 ಮೀಟರ್ ಎತ್ತರದಿಂದ ನೆಲಕ್ಕೆ ಧುಮ್ಮಿಕ್ಕುತ್ತದೆ.‌ ಹೀಗೆ ಧುಮ್ಮಿಕ್ಕುವಾಗ ಐದು ಕವಲುಗಳಲ್ಲಿ ಕಾಣಸಿಗುತ್ತದೆ. ರಾಜ, ರಾಣಿ, ರೋರರ್, ಲೇಡಿ, ರಾಕೆಟ್ ಎಂದು ಐದು ಕವಲುಗಳಲ್ಲಿ ನೋಡುಗರಿಗೆ ರಂಜಿಸಿ ಕೆಳಕ್ಕೆ ಇಳಿದು ಗೇರುಸೊಪ್ಪ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ.

Commercial store construction
ಜೋಗದಲ್ಲಿ ಅಭಿವೃದ್ದಿ ಕಾಮಗಾರಿ (ETV Bharat)

185 ಕೋಟಿ ರೂ. ವೆಚ್ಚದಲ್ಲಿ ಜೋಗದ ಸಮಗ್ರ ಅಭಿವೃದ್ದಿ : ಜೋಗವನ್ನು ಇನ್ನಷ್ಟು ಸುಂದರವನ್ನಾಗಿಸಲು ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಜೋಗದ ಸಮಗ್ರ ಅಭಿವೃದ್ದಿಗೆ 185 ಕೋಟಿ ರೂ‌. ಮೀಸಲಿಟ್ಟಿದ್ದರು.

ಜೋಗದಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳ ವಿವರ : ಜೋಗ ಜಲಪಾತಕ್ಕೆ ಪ್ರವೇಶ ಪಡೆಯಲು ಪ್ರವೇಶ ದ್ವಾರವಿದೆ. ದ್ವಾರದ ಮೂಲಕ ಜೋಗ ಜಲಪಾತಕ್ಕೆ ಪ್ರವೇಶ ಪಡೆದರೆ ಅಲ್ಲಿ ವಾಕಿಂಗ್ ಪಾಥ್ ಸಿಗುತ್ತದೆ. ವಾಕಿಂಗ್ ಪಾಥ್ ಮೂಲಕ ಮೇಲಕ್ಕೆ ಜೋಗ ವೀಕ್ಷಣ ಗೋಪುರ ತಲುಪಬಹುದು. ಇಲ್ಲಿ ಮೊದಲು ಶಾಪಿಂಗ್​ಗಾಗಿ ಮಳಿಗೆ ಸಿಗುತ್ತವೆ.

Commercial store construction
ವಾಣಿಜ್ಯ ಮಳಿಗೆ ನಿರ್ಮಾಣ (ETV Bharat)

ಶಾಪಿಂಗ್ ಮಳಿಗೆಯಿಂದ ಜೋಗವನ್ನು ಹತ್ತಿರದಿಂದ ನೋಡಲು ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿದೆ. ಇದು ವಿಶ್ವ ವಿಖ್ಯಾತ ನಯಾಗರ ಫಾಲ್ಸ್​ನಲ್ಲಿರುವಂತೆ ಜಲಪಾತ ಹತ್ತಿರದಿಂದ ನೋಡುವ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರವಾಸಿಗರಿಗೆ ಇದು ರೋಚಕ ಅನುಭವನ್ನು ನೀಡುತ್ತದೆ. ಇದರ ಜೊತೆಗೆ ಮಕ್ಕಳ ಉದ್ಯಾನ, ಉಪಹಾರ ಗೃಹಗಳು, ವಿಶ್ರಾಂತಿ ಗೃಹಗಳ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಜೋಗದ ಸಿರಿ ನೋಡಲು ರೋಪ್ ವೇ ಅನ್ನು ಮಾಡಲಾಗುತ್ತಿದೆ.

ಈ ರೋಪ್ ವೇ ಜೋಗದ ಒಂದು‌ ಭಾಗದಿಂದ ಇನ್ನೊಂದು ಭಾಗಕ್ಕೆ ಅಂದರೆ, ಜೋಗದ ಎದುರು ಭಾಗದಿಂದ ಜೋಗದ ಬ್ರಿಟಿಷ್​ ಬಂಗ್ಲೆ ಬಳಿಯ ತನಕ ರೋಪ್ ವೇ ನಿರ್ಮಾಣ ಮಾಡಲಾಗುತ್ತದೆ. ಜೋಗಕ್ಕೆ ಬರುವ ಪ್ರವಾಸಿಗರು ಒಂದು ದಿನ ಜೋಗದಲ್ಲಿ ಎಂಜಾಯ್ ಮಾಡಿದರೆ, ಇನ್ನೂಂದು ದಿನ ತಲಕಳಲೆ ಡ್ಯಾಂನಲ್ಲಿ ಜಲಕ್ರೀಡೆಗೆ ಅವಕಾಶ ಮಾಡಿಕೊಡಲಾಗುತ್ತದೆ.

Commercial store construction
ಜೋಗದಲ್ಲಿ ಅಭಿವೃದ್ದಿ ಕಾಮಗಾರಿ (ETV Bharat)

ಸ್ಟಾರ್ ಹೋಟೆಲ್ ನಿರ್ಮಾಣ : ಇಲ್ಲಿ ಬೋಟಿಂಗ್, ವಾಟರ್ ಸ್ಪೋರ್ಟ್​ನಂತಹ ಮನರಂಜನೆಯನ್ನು ಒದಗಿಸಲಾಗುತ್ತಿದೆ. ಇದರಿಂದ ಜೋಗಕ್ಕೆ ಬಂದವರು ಎರಡು ದಿನ‌ ಇಲ್ಲಿಯೇ ಉಳಿಯುವಂತ ಅವಕಾಶ ಮಾಡಲಾಗಿದೆ. ಇದಕ್ಕಾಗಿ ಜೋಗದಲ್ಲಿ ಸುಮಾರು‌ 80 ಕೋಟಿ ರೂ.ಗೆ ಒಂದು ಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುತ್ತಿದೆ. ಪ್ರವಾಸಿಗರು ಜೋಗ ನೋಡಲು ಬಂದಾಗ ಅವರ ವಾಹನ ನಿಲುಗಡೆಗೆ ದೊಡ್ಡ ಮಟ್ಟದ ಪಾರ್ಕಿಂಗ್ ವ್ಯವಸ್ಥೆ ಸಿದ್ದವಾಗುತ್ತಿದೆ.

ಜೋಗ ಜಲಪಾತದ ಪ್ರಸಕ್ತ ಕಾಮಗಾರಿಯ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ನಿರ್ದೇಶಕರಾದ ಧರ್ಮಪ್ಪನವರು ಮಾತನಾಡಿದ್ದು, 'ಜೋಗ ಜಲಪಾತದ ಸಮಗ್ರ ಅಭಿವೃದ್ದಿಗೆ ರಾಜ್ಯ ಸರ್ಕಾರವು 185 ಕೋಟಿ ರೂ ಮೀಸಲಿಟ್ಟಿದೆ. ಕಾಮಗಾರಿಗೆ ಕೆಪಿಸಿಎಲ್ ಮೂಲಕ ಟೆಂಡರ್ ಆಗಿದೆ. ಈ ಟೆಂಡರ್ ಅನ್ನು ಶಂಕರ ನಾರಾಯಣ ಕನ್ಟ್ರಷನ್ ಕಂಪನಿಯು ಗುತ್ತಿಗೆ ಕಾಮಗಾರಿಯನ್ನು ತೆಗೆದುಕೊಂಡು ಕಾಮಗಾರಿಯನ್ನು ನಡೆಸುತ್ತಿದೆ.

jog-falls
ಅಭಿವೃದ್ದಿ ಕಾಮಗಾರಿ (ETV Bharat)

ಈ ಕಂಪನಿಯು 2021 ರಿಂದ ಜೋಗ ಜಲಪಾತದ ಸಮಗ್ರ ಮೂಲ ಅಭಿವೃದ್ದಿಗೆ ಬೇಕಾದ ಕಾಮಗಾರಿಗಳನ್ನು ಪ್ರಾರಂಭ ಮಾಡಿದ್ದಾರೆ. ಈ ಕಾಮಗಾರಿಗಳು 2024 ರ ನವೆಂಬರ್​ಗೆ ಮುಗಿಯಬೇಕಿತ್ತು. ಮಳೆ ಹೆಚ್ಚಾದ ಕಾರಣ ಕಾಮಗಾರಿಗೆ ತಡೆ ಉಂಟಾದ ಕಾರಣದಿಂದ ಕಾಮಗಾರಿ ಮುಕ್ತಾಯವಾಗಿಲ್ಲ. ಇದರಿಂದ ಕಂಪನಿಯು ಸರ್ಕಾರಕ್ಕೆ ಕಾಮಗಾರಿ ವಿಸ್ತರಣೆಗೆ ಕಾಲಾವಕಾಶ ಕೇಳಿದ್ದು, ಸರ್ಕಾರ ಇವರಿಗೆ 2025 ರ ನವೆಂಬರ್​ವರೆಗೂ ಕಾಲಾವಧಿಯನ್ನು ನೀಡಿದೆ. ಈ ಕಾಮಗಾರಿಗಳಿಗೆ ಸರ್ಕಾರವು 95 ಕೋಟಿ ರೂ ಹಣವನ್ನು ಬಿಡುಗಡೆ ಮಾಡಿದೆ. ಮೊದಲನೇ ಹಂತದ ಕಾಮಗಾರಿಯಲ್ಲಿ ವೀಕ್ಷಣ ಗೋಪುರ, ವಾಣಿಜ್ಯ ಮಳಿಗೆಗಳು ಸೇರಿದಂತೆ ಇತರೆ ಕಾಮಗಾರಿಯು ಶೇ. 85 ರಷ್ಟು ಮುಕ್ತಾಯವಾಗಿದೆ. ಉಳಿದ ಕಾಮಗಾರಿಯನ್ನು ಆದಷ್ಟು ಬೇಗನೆ ಮುಗಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ' ಎಂದರು.

jog-falls
ಜೋಗ ಜಲಪಾತ (ETV Bharat)

116 ಕೋಟಿ ರೂ ಒಪ್ಪಂದ : ಎರಡನೇ ಹಂತದ ಕಾಮಗಾರಿಯು ಸಹ ಪ್ರಾರಂಭವಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಸರ್ಕಾರವು ಪಿಪಿಪಿ‌ ಮಾಡೆಲ್​ನಲ್ಲಿ ಕೇಬಲ್ ಕಾರ್ ಹಾಗೂ ಸ್ಟಾರ್ ಹೋಟೆಲ್ ಅನ್ನು ಅನುಷ್ಠಾನಗೊಳಿಸಬೇಕಾಗಿದೆ. ಈ ಎರಡು ಕಾಮಗಾರಿಯನ್ನು ಭೂಮಿ ಪುತ್ರ ಕಂಪನಿಯು ವಹಿಸಿಕೊಂಡಿದೆ. ಇದರಿಂದ ಸರ್ಕಾರ ಹಾಗೂ ಭೂಮಿಪುತ್ರ ಕಂಪನಿಗಳೆರಡು ಒಪ್ಪಂದವನ್ನು ಮಾಡಿಕೊಂಡಿವೆ. ಇದಕ್ಕೆ 116 ಕೋಟಿ ರೂ ಒಪ್ಪಂದವಾಗಿದೆ. ಈ ಕಾಮಗಾರಿಯನ್ನು ಅರಣ್ಯ ಪ್ರದೇಶದಲ್ಲಿ ಮಾಡಬೇಕಿತ್ತು. ಇದಕ್ಕಾಗಿ ಅರಣ್ಯದ ಅನುಮತಿಯನ್ನು ಪಡೆದು ಅದಕ್ಕಾಗಿ ಎರಡರಷ್ಟು ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ. ಈ ಎರಡು ಕಾಮಗಾರಿಗೆ 2.39 ಮತ್ತು 2.23 ಅರಣ್ಯಭೂಮಿ ಅವಶ್ಯಕತೆ ಇತ್ತು. ಸಾಗರ ಮತ್ತು ಶಿರಸಿ ಅರಣ್ಯಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರವು ಸಹ ಅನುಮೋದನೆ ನೀಡಿದೆ. ಈ ಭೂಮಿಯನ್ನು ಕಾಮಗಾರಿಗಾಗಿ ಭೂಮಿಪುತ್ರ ಕಂಪನಿಗೆ ಹಸ್ತಾಂತರ ಮಾಡಲಾಗುವುದು ಎಂದು ಹೇಳಿದರು.

ಪಾರ್ಕಿಂಗ್ ಜಾಗದಲ್ಲಿ ಅನಧಿಕೃತವಾದ ಮನೆ ಇದ್ದು, ಅದರ ತೆರವಿಗೆ ಹೈಕೋರ್ಟ್ ಮೊರೆ ಹೋಗಿದ್ದು, ಅದು ಈಗ ಜೋಗ ಅಭಿವೃದ್ದಿ ಪ್ರಾಧಿಕಾರದ ಪರವಾಗಿದೆ. ಇದರಿಂದ ಮನೆಯನ್ನು ತೆರವು ಮಾಡಿ ಪಾರ್ಕಿಂಗ್ ಕಾಮಗಾರಿಗೆ ವೇಗ ನೀಡಲಾಗಿದೆ.

ಇದನ್ನೂ ಓದಿ : ಜೋಗ ಜಲಪಾತ ನೋಡೋದು ಇನ್ಮುಂದೆ ಬಲು ದುಬಾರಿ: ವೀಕ್ಷಣೆಗೆ ಎರಡು ಗಂಟೆ ಮಾತ್ರ ಅವಕಾಶ - Jog Falls entry price increase

ETV Bharat Logo

Copyright © 2025 Ushodaya Enterprises Pvt. Ltd., All Rights Reserved.