ETV Bharat / state

ನನ್ನ ಗೆಲುವಿಗೆ ಬಿಜೆಪಿ ಎಷ್ಟು ಕಾರಣವೋ ಜೆಡಿಎಸ್ ಕೂಡ ಅಷ್ಟೇ ಕಾರಣ: ವಿ. ಸೋಮಣ್ಣ - v somanna

ತುಮಕೂರು ಕ್ಷೇತ್ರದ ವಿಜೇತ ಅಭ್ಯರ್ಥಿ ವಿ. ಸೋಮಣ್ಣ ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದರು.

ಕುಮಾರಸ್ವಾಮಿ ಭೇಟಿಯಾದ ಸೋಮಣ್ಣ
ಕುಮಾರಸ್ವಾಮಿ ಭೇಟಿಯಾದ ಸೋಮಣ್ಣ (ETV Bharat)
author img

By ETV Bharat Karnataka Team

Published : Jun 5, 2024, 3:15 PM IST

ಬೆಂಗಳೂರು: ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮಾಜಿ ಪ್ರಧಾನಿ ಹೆಚ್ ಡಿ​ ದೇವೇಗೌಡ, ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ, ಅಮಿತ್ ಶಾ ಕಾರಣರಾಗಿದ್ದಾರೆ. ನನ್ನ ಗೆಲುವಿಗೆ ಬಿಜೆಪಿ ಎಷ್ಟು ಕಾರಣವೋ ಜೆಡಿಎಸ್ ಕೂಡ ಅಷ್ಟೇ ಕಾರಣ ಎಂದು ತುಮಕೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ವಿ.ಸೋಮಣ್ಣ ತಿಳಿಸಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ತುಮಕೂರಿನಿಂದ ಬೆಂಗಳೂರಿಗೆ ವಾಪಸಾದ ವಿಜೇತ ಅಭ್ಯರ್ಥಿ ವಿ. ಸೋಮಣ್ಣ ಜೆ.ಪಿ. ನಗರ ನಿವಾಸದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಚುನಾವಣೆಯಲ್ಲಿ ನೀಡಿದ ಸಹಕಾರಕ್ಕೆ ಧನ್ಯವಾದ ಸಲ್ಲಿಸಿ ಗೌರವಿಸಿದರು.

ನಂತರ ಕೆಲ ಕಾಲ ರಾಜಕೀಯ ವಿಚಾರಗಳ ಕುರಿತು ಮಾತುಕತೆ ನಡೆಸಿದರು. ಇಂದು ಸಂಜೆ ಬಿಜೆಪಿ ಜೆಡಿಎಸ್ ನಾಯಕರು ಭೇಟಿಗೆ ನಿರ್ಧರಿಸಲಾಗಿತ್ತಾದರೂ ಕುಮಾರಸ್ವಾಮಿ ದೆಹಲಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಕುಮಾರಸ್ವಾಮಿ ಅವರನ್ನು ಸೋಮಣ್ಣ ಭೇಟಿಯಾದರು.

ಕುಮಾರಸ್ವಾಮಿ ಭೇಟಿಯಾದ ಸೋಮಣ್ಣ
ಕುಮಾರಸ್ವಾಮಿ ಭೇಟಿಯಾದ ಸೋಮಣ್ಣ (ETV Bharat)

ಹೆಚ್​ಡಿಕೆ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ, ರಾಜ್ಯದಲ್ಲಿ ಈಗ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಜನ ಯಾರಾರಿಗೆ ಯಾವ ರೀತಿ ಗೌರವ ಕೊಡಬೇಕೋ ಕೊಟ್ಟಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ನಾವು ಹೆಜ್ಜೆ ಹಾಕಬೇಕಿದೆ. ತುಮಕೂರಿನಲ್ಲಿ ನಾನು ಚುನಾವಣೆಗೆ ನಿಲ್ಲಲು ಮೂಲ ಕಾರಣ ದೇವೇಗೌಡರು ಹಾಗೂ ಕುಮಾರಸ್ವಾಮಿ ಮತ್ತು ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ಅಮಿತ್ ಶಾ, ಅವರ ಜೊತೆ ಯಡಿಯೂರಪ್ಪ, ವಿಜಯೇಂದ್ರ ಸಹಕಾರದಿಂದ ಗೆದ್ದಿದ್ದೇನೆ. ಜನ ಕೆಲಸಗಾರರಿಗೆ ಯಾವ ರೀತಿ ಗೌರವಿಸಲಿದ್ದಾರೆ ಎನ್ನುವುದಕ್ಕೆ ನನ್ನ ಗೆಲುವೇ ಒಂದು ಸಂದೇಶವಾಗಿದೆ ಎಂದರು.

ರಾಜ್ಯದಲ್ಲಿ ಹಳೇ ಮೈಸೂರು ಬೇರೆ ಪ್ರಾಂತ್ಯ ಎನ್ನುವುದೇನಿಲ್ಲ. ಚುನಾವಣಾ ಪೂರ್ವ ಬಿಜೆಪಿ- ಜೆಡಿಎಸ್ ಮೈತ್ರಿ, ನಂತರ ಉಭಯ ಪಕ್ಷಗಳ ನಾಯಕರು ಸೇರಿಕೊಂಡು ಸಾಧಿಸಿದ ಸಮನ್ವಯತೆ ವರ್ಕೌಟ್ ಆಗಿದೆ. ನಾವೆಲ್ಲಾ ಜನತಾದಳದಲ್ಲಿದ್ದವರು, ತುಮಕೂರಿನ ರೀತಿ ಸಮನ್ವಯತೆ ಎಲ್ಲಾ ಕಡೆ ಆಗಿದ್ದರೆ 28 ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುತ್ತಿದ್ದೆವು. ಆದರೆ ಸಮಯ ಆಗಲಿಲ್ಲ, ನಾನು ಅದನ್ನು ಚೆನ್ನಾಗಿ ಉಪಯೋಗಿಸಿಕೊಂಡೆ. ದೇವೇಗೌಡ, ಕುಮಾರಸ್ವಾಮಿ ಮತ್ತು ನಮ್ಮ ಪಕ್ಷದ ನಾಯಕರು ಕುಳಿತು ಚರ್ಚೆ ಮಾಡಿದ್ದರೆ ಇನ್ನೂ ಕೆಲವು ಸ್ಥಾನಗಳನ್ನು ಗೆಲ್ಲಬಹುದಾಗಿತ್ತು. ಆದರೆ ಈಗ ಎಲ್ಲವೂ ಆಗಿದೆ, ಬಂದಿದ್ದನ್ನು ಸ್ವೀಕಾರ ಮಾಡೋಣ, ಮುಂದಿನ ದಿನಗಳಲ್ಲಿ ಬರುವ ಸವಾಲುಗಳನ್ನು ಎದುರಿಸೋಣ ಎಂದು ಸೋಮಣ್ಣ ಹೇಳಿದರು.

ತುಮಕೂರಿನ ರೀತಿ ಬೇರೆ ಕಡೆ ಸಮನ್ವಯತೆ ಆಗದಿರುವುದಕ್ಕೆ ಕಾರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ದೇವೇಗೌಡರ ಗರಡಿಯಲ್ಲಿ 30 ವರ್ಷ ಪಳಗಿದವನು. ಎಲ್ಲರೂ ಸೋಮಣ್ಣ ಆಗಲು ಸಾಧ್ಯವಾ?. ನಾನು ಒಬ್ಬ ಸಾಮಾನ್ಯ ಕುಟುಂಬದಿಂದ ಬಂದವನು, ಅವಕಾಶಕ್ಕಾಗಿ ಬಂದವನಲ್ಲ, ರಾಜಕಾರಣ ಒಂದು ಅವಕಾಶ ಅಷ್ಟೇ. ಅದನ್ನು ಉಪಯೋಗಿಸಿಕೊಂಡು ಜನರ ಜೊತೆ ಇದ್ದರೆ ಜನ ತೀರ್ಮಾನ ಮಾಡಲಿದ್ದಾರೆ. ನನ್ನ ಸೋಲಿಗೆ ಯಾರೇ ಷಡ್ಯಂತ್ರ ಮಾಡಿದ್ದರೂ ಅದು ಅವರಿಗೆ ತಿರುಗುಬಾಣವಾಗಲಿದೆ. ಇಂದು ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ, ದೇವೇಗೌಡರನ್ನು ಭೇಟಿ ಮಾಡಿದ ನಂತರ ನಾಳೆ ದೆಹಲಿಗೆ ಹೋಗಲಿದ್ದೇನೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಬಿ.ಎಸ್‌.ಯಡಿಯೂರಪ್ಪ ನಿವಾಸಕ್ಕೆ ಬಿಜೆಪಿ ವಿಜೇತ ಅಭ್ಯರ್ಥಿಗಳ ಭೇಟಿ - B S Yediyurappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.