ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಪರಿಷತ್ ಚುನಾವಣೆಯ ಇತಿಹಾಸದಲ್ಲಿ ಮೊದಲ ಪ್ರಾಶಸ್ತ್ಯ ಮತದಲ್ಲಿ ಜಯ ಸಾಧಿಸಿದ ಮೊದಲ ಅಭ್ಯರ್ಥಿ ಎಂಬ ದಾಖಲೆಯನ್ನೂ ಇವರು ಬರೆದಿದ್ದಾರೆ.
ಮೈತ್ರಿ ಅಭ್ಯರ್ಥಿ ವಿವೇಕಾನಂದ 10,823 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ 6,201 ಮತಗಳನ್ನು ಪಡೆದಿದ್ದಾರೆ. 4,622 ಮತಗಳ ಭಾರೀ ಅಂತರಿಂದ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ವಿವೇಕಾನಂದ ಗೆಲುವು ಸಾಧಿಸಿದ್ದಾರೆ. ಇನ್ನು, ವಾಟಾಳ್ ನಾಗರಾಜ್ ಅವರಿಗೆ 84 ಮತಗಳು ಬಂದಿವೆ. 1,049 ಮತಗಳು ತಿರಸ್ಕೃತಗೊಂಡಿವೆ.
ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರ ಬರುತ್ತದೆ. ಒಟ್ಟು 20,549 ಮತದಾರರ ಪೈಕಿ 18,979 ಮತಗಳು ಚಲಾವಣೆಯಾಗಿದ್ದವು.
ಈ ಚುನಾವಣೆಯಲ್ಲಿ ವಿವೇಕಾನಂದ ಹಾಗೂ ಮರೀತಿಬ್ಬೇಗೌಡ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.
ಇದನ್ನೂ ಓದಿ: ಪರಿಷತ್ ಚುನಾವಣೆ: ಮೈಸೂರಿನಲ್ಲಿ 3 ಕ್ಷೇತ್ರಗಳ ಮತ ಎಣಿಕೆ, ರಾತ್ರಿ ವೇಳೆಗೆ ಫಲಿತಾಂಶ