ETV Bharat / state

ರಾಜ್ಯಪಾಲರಿಂದ ಇಸ್ರೋ ಅಧ್ಯಕ್ಷ ಸೋಮನಾಥ್​ಗೆ ಗೌರವ ಡಾಕ್ಟಾರೇಟ್ ಪ್ರದಾನ - ಸೋಮನಾಥ್​ಗೆ ಗೌರವ ಡಾಕ್ಟಾರೇಟ್

ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಇಸ್ರೋ ಅಧ್ಯಕ್ಷ ಸೋಮನಾಥ್​ಗೆ ಗೌರವ ಡಾಕ್ಟಾರೇಟ್

author img

By ETV Bharat Karnataka Team

Published : Feb 22, 2024, 6:41 AM IST

ಬೆಂಗಳೂರು: ರಾಜಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ನೀಡಲಾಗಿರುವ ಗೌರವ ಡಾಕ್ಟಾರೇಟ್ ಪ್ರದಾನ ಮಾಡಿದರು.

ಇಸ್ರೋ ಅಧ್ಯಕ್ಷ ಸೋಮನಾಥ್​ಗೆ ಗೌರವ ಡಾಕ್ಟಾರೇಟ್
ಇಸ್ರೋ ಅಧ್ಯಕ್ಷ ಸೋಮನಾಥ್​ಗೆ ಗೌರವ ಡಾಕ್ಟಾರೇಟ್

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ ಸಮಾರಂಭದಲ್ಲಿ, ದೇಶದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ ಭಾರತದ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ಗೌರವ ಪದವಿಯನ್ನು ಘೋಷಿಸಲಾಗಿತ್ತು. ಕೆಲವು ಕಾರಣಗಳಿಂದ ಅವರು ಸಮಯದಲ್ಲಿ ಘಟಿಕೋತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈ ದಿನ ಗೌರವ ಪದವಿಯನ್ನು ನೀಡಿ ಗೌರವಿಸಲಾಗಿದೆ. ಈ ಗೌರವ ಪದವಿಯನ್ನು ಅವರು ಅಲಂಕರಿಸುವ ಮೂಲಕ ಗೌರವ ಪದವಿಯ ಮೌಲ್ಯವೂ ಹೆಚ್ಚಿದೆ ಎಂದು ಹೇಳಿದರು.

ಸೋಮನಾಥ್ ಅವರು ಲಾಂಚರ್ ರಾಕೆಟ್‌ಗಳ ಸಿಸ್ಟಮ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪರಿಣತರಾಗಿದ್ದಾರೆ. ಪಿ.ಎಸ್.ಎಲ್.ವಿ ಮತ್ತು ಜಿ.ಎಸ್.ಎಲ್.ವಿ ಸೇರಿದಂತೆ ಒಟ್ಟಾರೆ ಆರ್ಕಿಟೆಕ್ಚರ್, ಪ್ರೊಪಲ್ಷನ್ ಹಂತದ ವಿನ್ಯಾಸ ಮತ್ತು ರಚನಾತ್ಮಕ ಡೈನಾಮಿಕ್ಸ್ ವಿನ್ಯಾಸಗಳು, ಬೇರ್ಪಡಿಕೆ ವ್ಯವಸ್ಥೆಗಳು, ರಾಕೆಟ್ ಏಕೀಕರಣ ಮತ್ತು ಅದರ ಪ್ರಕ್ರಿಯೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅವರ ನಾಯಕತ್ವದಲ್ಲಿ, ಇಸ್ರೋ ಗಮನಾರ್ಹ ಸಾಧನೆಗಳನ್ನು ಮಾಡಿದೆ. ವಿಶೇಷವಾಗಿ ಚಂದ್ರಯಾನ-3 ಮಿಷನ್‌ನ ಹಿಂದಿನ ಪ್ರೇರಕ ಶಕ್ತಿಯಾಗಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಮತ್ತು ಇಸ್ರೋ ಕೈಗೊಂಡ ವಿವಿಧ ದೊಡ್ಡ ಪ್ರಮಾಣದ ಯೋಜನೆಗಳಲ್ಲಿ ಪ್ರಮುಖ ಪಾತ್ರಗಳೊಂದಿಗೆ, ಸೋಮನಾಥ್ ಅವರ ಕೊಡುಗೆ ಅಪಾರ. ಅವರ ನಾಯಕತ್ವ ಮತ್ತು ದೃಷ್ಟಿ ಭಾರತದ ಬಾಹ್ಯಾಕಾಶ ಪರಿಶೋಧನಾ ಕಾರ್ಯಕ್ರಮಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸೋಮನಾಥ್ ಅವರಿಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಗೌರವಿಸಲಾಗಿದೆ. ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಸಾಧನೆಗಳು ಮತ್ತು ಕೊಡುಗೆಗಳು ಅಭಿನಂದನೆಗೆ ಅರ್ಹವಾಗಿದೆ. ಆದ್ದರಿಂದ ದೇಶಕ್ಕಾಗಿ ಅವರ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು.

ಇದನ್ನೂ ಓದಿ: ಚಂದ್ರನ ಮೇಲಿನ ಮಣ್ಣು ಭೂಮಿಗೆ ತರಲು ಇಸ್ರೋದಿಂದ ಚಂದ್ರಯಾನ-4 ಯೋಜನೆ​?

ಕರ್ನಾಟಕ ರಾಜ್ಯ ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಪ್ರಮುಖ ರಾಜ್ಯವಾಗಿದೆ. ಇಲ್ಲಿ ಅನೇಕ ವಿಶ್ವ ದರ್ಜೆಯ ಸಂಶೋಧನಾ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿವೆ, ಅದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ಒಂದು. ಈ ವಿಶ್ವವಿದ್ಯಾಲಯವು ಭಾರತದ ಆಧುನಿಕತೆ, ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಸಂಪರ್ಕ ಹೊಂದಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಮತ್ತು ಮಹತ್ವದ ಕೊಡುಗೆ ನೀಡುವ ಮೂಲಕ "ಜ್ಞಾನ್ ವಿಜ್ಞಾನ ಸಾಹಿತ್ಯಂ" ಎಂಬ ಧ್ಯೇಯವಾಕ್ಯವನ್ನು ಅರ್ಥಪೂರ್ಣಗೊಳಿಸುತ್ತಿದೆ ಎಂದು ಶ್ಲಾಘಿಸಿದರು.

ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಬಳಿಕ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್‌ ಮಾತನಾಡಿ, ಈ ಡಾಕ್ಟರೇಟ್ ಗೌರವ ನನಗಲ್ಲ ಇಸ್ರೋ ಸಂಸ್ಥೆಗೆ ಸಲ್ಲಬೇಕಿದೆ. ಇಸ್ರೋ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಇದೆ. ಚಂದ್ರಯಾನದ ಯಶಸ್ಸು, ಸಾಧನೆ ನನ್ನೊಬ್ಬನದಲ್ಲ, ಅದು ಇಡೀ ಇಸ್ರೋ ವಿಜ್ಞಾನಿಗಳ ಯಶಸ್ಸು ಮತ್ತು ಸಾಧನೆಯಾಗಿದೆ. ಇಂದು ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿರುವುದು ಮತ್ತಷ್ಟು ಖುಷಿ ನೀಡಿದೆ. 35 ವರ್ಷಗಳಿಂದ ಬೆಂಗಳೂರು ನೋಡ್ತಿದ್ದೇನೆ. ಬೆಂಗಳೂರಿನ ಗಲ್ಲಿ ಗಲ್ಲಿಯನ್ನು ನಾನು ಬಲ್ಲೆ. ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಬೆಂಗಳೂರಿನಲ್ಲಿ ಇರುವುದರಿಂದ ಇಂದು ನಾನು ಈ ಸ್ಥಾನದಲ್ಲಿ ನಿಂತಿದ್ದೇನೆ. ಬೆಂಗಳೂರು ಮತ್ತು ಕರ್ನಾಟಕ ಬಾಹ್ಯಕಾಶ, ವಿಜ್ಞಾನ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಬೆಂಗಳೂರು ವಿಶ್ವವಿದ್ಯಾಲಯ ಕೂಡ ಅದಕ್ಕೆ ಕೊಡುಗೆ ನೀಡುತ್ತಾ ಬಂದಿರುವುದು ಮತ್ತಷ್ಟು ಹೆಮ್ಮೆ ತರುವ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯ ದೇಶಕ್ಕೆ ಕೀರ್ತಿ ತಂದ ಸೋಮನಾಥ್‌ರನ್ನು ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ. ಭಾರತ ವಿಜ್ಞಾನ, ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಅಗ್ರಗಣ್ಯ ಸ್ಥಾನ ತಲುಪಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಸಾಧನೆಗೆ ಅಡಿಪಾಯ ಹಾಕಿದ ಅಬ್ದುಲ್ ಕಲಾಂ ಅವರನ್ನು ನೆನೆಯಬೇಕಿದೆ. ದೇಶಕ್ಕೆ ಅಬ್ದುಲ್ ಕಲಾಂ ಮತ್ತು ಎಸ್.ಸೋಮನಾಥ್‌ ಅವರಂಥ ವಿಜ್ಞಾನಿಗಳ ಅವಶ್ಯಕತೆ ಇದೆ. ಮತ್ತಷ್ಟು ಯುವಕರು ಇವರ ಸಾಧನೆಯ ಸ್ಫೂರ್ತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಶ್ರೀಕರ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಸ್.ಎಂ. ಜಯಕರ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮಾನವ ಸಹಿತ ಗಗನಯಾನಕ್ಕೆ ಕ್ರಯೋಜೆನಿಕ್ ಎಂಜಿನ್ ಸಿದ್ಧ; ಇಸ್ರೋ ಮತ್ತೊಂದು ಮೈಲಿಗಲ್ಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.