ETV Bharat / state

ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ: ರಸ್ತೆಗಳ ಗುಂಡಿ ಮುಚ್ಚಲು ಬಂತು ಮತ್ತೊಂದು ನಾವೀನ್ಯ ಕಾಯಕಲ್ಪ - ENGINEERING STUDENTS NEW INVENTION

ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲು ವಿದ್ಯಾರ್ಥಿಗಳು 'ಕೋಲ್ಡ್‌ ಪಾಟ್‌ ಹೋಲ್‌ ಮಿಕ್ಸ್‌' ಎಂಬ ಹೊಸ ತಂತ್ರ ಆವಿಷ್ಕರಿಸಿದ್ದು, ಅನುಕೂಲತೆಗಳ ಕುರಿತು 'ಈಟಿವಿ ಭಾರತ್' ಶಿವಮೊಗ್ಗ ಪ್ರತಿನಿಧಿ ಕಿರಣ್​ ಕುಮಾರ್​ ನೀಡಿದ ವಿಶೇಷ ವರದಿ ಇಲ್ಲಿದೆ.

Convenience Of Cold Pothole Mix
ರಸ್ತೆಗಳ ಗುಂಡಿ ಮುಚ್ಚಲು ಬಂತು ಮತ್ತೊಂದು ನಾವೀನ್ಯ ಕಾಯಕಲ್ಪ (ETV Bharat)
author img

By ETV Bharat Karnataka Team

Published : Nov 15, 2024, 1:56 PM IST

ಶಿವಮೊಗ್ಗ: ರಸ್ತೆಯಲ್ಲಿ ಹೋಗುವಾಗ ಎದುರಾಗುವ ಗುಂಡಿಗಳು ಅದೆಷ್ಟು ಸಂದರ್ಭದಲ್ಲಿ ವಾಹನ ಸವಾರರಿಗೆ ಅಪಘಾತವಾಗುವಂತೆ ಮಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಗುಂಡಿಗಳನ್ನು‌ ಕಂಡು ಹಿಡಿಶಾಪ ಹಾಕುವವರೇ ಹೆಚ್ಚು. ಇಂತಹ ಸವಾಲುಗಳನ್ನು ಅರಿತ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಂಗಸಂಸ್ಥೆಯಾದ ಜವಾಹರ‌್ ಲಾಲ್ ನೆಹರು ರಾಷ್ಟ್ರೀಯ ಎಂಜಿನಿಯರಿಂಗ್‌ ಕಾಲೇಜಿನ (ಜೆಎನ್​​ಎನ್​ಸಿಇ) ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ, 'ಕೋಲ್ಡ್​​ ಪಾಟ್ ಹೋಲ್‌ ಮಿಕ್ಸ್' ಕಂಡುಹಿಡಿದಿದ್ದಾರೆ. ಇದಕ್ಕೆ 'ಜೆಎನ್​​ಎನ್​ಸಿಇ ಕೋಲ್ಡ್ ಪಾಟ್ ಹೋಲ್ ಮಿಕ್ಸ್' ಎಂದು ಹೆಸರಿಟ್ಟಿದ್ದಾರೆ. ಇದರ ಕುರಿತು ಪೇಟೆಂಟ್ ಸಹ ಪಡೆದುಕೊಂಡಿದ್ದಾರೆ.

ಆವಿಷ್ಕರಿಸಿರುವ ಈ ಕೋಲ್ಡ್ ಪ್ಯಾಚ್ ಮಿಶ್ರಣವನ್ನು ಗುಂಡಿ ಬಿದ್ದ ರಸ್ತೆಗಳಲ್ಲಿ ಸುರಿದು ಸಲೀಸಾಗಿ ಮುಚ್ಚಬಹುದಾಗಿದೆ. ಮಳೆಗಾಲ ಸೇರಿದಂತೆ ಯಾವುದೇ ಕಾಲದಲ್ಲಿಯೂ ದಟ್ಟ ವಾಹನ ಸಂಚಾರದ ನಡುವೆ ಈ ಮಿಶ್ರಣವನ್ನು ಗುಂಡಿ ಮುಚ್ಚಲು ಉಪಯೋಗಿಸಬಹುದು. ರಸ್ತೆಗೆ ಹಾಕಿದ ಕೆಲವೇ ಕ್ಷಣದಲ್ಲಿ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿದೆ.

Invention Of Cold Pothole Mix By Students Of Civil Department Of Engineering College
ಆವಿಷ್ಕರಿಸಲಾದ ಪಾಟ್ ಹೋಲ್ ಮಿಕ್ಸ್ (ETV Bharat)

ಸಾಮಾನ್ಯವಾಗಿ, ಡಾಂಬರ್‌ ಅನ್ನು ರಸ್ತೆ ಮತ್ತು ಹೆದ್ದಾರಿಗಳನ್ನು ನಿರ್ಮಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಕಾರಣ ಈ ಡಾಂಬರಿಗೆ ಅಧಿಕ ಸಂಚಾರ ಹೊರ ತಡೆದುಕೊಳ್ಳುವ ಶಕ್ತಿ ಇರುತ್ತದೆ. ಅದಾಗಿಯೂ ತಾಪಮಾನ ಹೆಚ್ಚಾದಾಗ ಅಲ್ಲಲ್ಲಿ ವ್ಯತ್ಯಾಸ ಕಂಡುಬರುವುದು ಸಹಜ. ಇನ್ನು ಕೆಲವೆಡೆ ರಸ್ತೆಯ ಅಸಮರ್ಪಕ ವಿನ್ಯಾಸ, ವಾಹನಗಳ ದಟ್ಟಣೆ ಮತ್ತು ಭಾರವನ್ನು ತಡೆದುಕೊಳ್ಳದೇ ಹಾಳಾಗುವುದು, ಒಳಚರಂಡಿ ನೀರು ಹರಿದು ರಸ್ತೆಯ ಅಲ್ಲಲ್ಲಿ ಬಿರುಕು ಮೂಡುವುದು, ಜಲ್ಲಿ ಮಿಶ್ರಣ ಕಿತ್ತು ಬರುವುದು ಸಾಮಾನ್ಯ.

ಇಂತಹ ಗುಂಡಿಗಳ ದುರಸ್ತಿಗೆ ಪರಿಹಾರವೆಂದು ಹೇಳಿಕೊಳ್ಳುವ ಅನೇಕ ಬಿಟಮಿನ್ ಕೋಲ್ಡ್ ಡಾಂಬರ್ ಪ್ಯಾಚಿಂಗ್ ವಸ್ತುಗಳು ಮಾರುಕಟ್ಟೆಯಲ್ಲಿ ವರ್ಷಗಳಿಂದ ಇವೆ. ಆದರೆ ಈ ಉತ್ಪನ್ನಗಳು ಮಳೆ ಬೀಳುವ ಪ್ರದೇಶಗಳಿಗೆ ಹೆಚ್ಚು ಉಪಯುಕ್ತವಾಗಿಲ್ಲ. ಜೊತೆಯಲ್ಲಿ ಕೋಲ್ಡ್ ಡಾಂಬರ್ ಪ್ಯಾಚಿಂಗ್ ಸಾಮಗ್ರಿಗಳ ಸಂಗ್ರಹಣೆ, ದಾಸ್ತಾನು, ರಸ್ತೆಯಲ್ಲಿನ ತೇವಾಂಶ, ಮಿಶ್ರಣದ ಸಂದರ್ಭದಲ್ಲಿ ಅಸಮಂಜಸ ಕಲಬೆರಕೆ ಸೇರಿ ಅನೇಕ ಸಮಸ್ಯೆಗಳಿವೆ. ಬೆಲೆಯಲ್ಲಿಯೂ ದುಬಾರಿಯಾಗಿದೆ. ರಸ್ತೆಯಲ್ಲಿನ ಗುಂಡಿ ಮುಚ್ಚುವುದಕ್ಕೆ ಪ್ರಸ್ತುತ ಹಾಟ್‌ ಮಿಕ್ಸ್‌ (ಜಲ್ಲಿ ಡಾಂಬಾರು) ಬಳಸಲಾಗುತ್ತದೆ. ಆದರೆ, ಮಳೆಗಾಲದಲ್ಲಿ ಈ ಹಾಟ್‌ ಮಿಕ್ಸ್​ಗಳನ್ನು ಬಳಸಿ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಹೆಚ್ಚು ಕಾಲ ಬಾಳಿಕೆಯೂ ಬರುವುದಿಲ್ಲ.

ಈ ಎಲ್ಲಾ ಅಂಶಗಳನ್ನು ಮನಗಂಡ ಜೆಎನ್​​ಎನ್​ಸಿಇ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ, ಡಾಂಬರ್ ಇಲ್ಲದ ಈ ಕೋಲ್ಡ್ ಪ್ಯಾಚ್ ಮಿಶ್ರಣವನ್ನು ಆವಿಷ್ಕರಿಸಿ ಸಾರ್ವಜನಿಕರಿಗೆ ಅರ್ಪಿಸಿದೆ. ಇದು ಸಿದ್ಧಪಡಿಸಿದ ಮಿಶ್ರಣವಾಗಿದ್ದು, ಮಳೆಗಾಲ ಸೇರಿದಂತೆ ಯಾವುದೇ ಕಾಲದಲ್ಲಿಯಾದರೂ, ದಟ್ಟ ವಾಹನ ಸಂಚಾರದ ನಡುವೆಯೂ ಈ ಮಿಶ್ರಣವನ್ನು ಗುಂಡಿ ಮುಚ್ಚಲು ಉಪಯೋಗಿಸಬಹುದು. ನಾವೀನ್ಯ ಕಾಯಕಲ್ಪ ಇದಾಗಿದ್ದು, ಇದರಿಂದ ಹಲವು ಅನುಕೂಲಗಳುಂಟು.

ಕೋಲ್ಡ್‌ ಮಿಕ್ಸ್‌ ಹೇಗೆ ವಿಭಿನ್ನವಾಗಿದೆ:

  • ಹಾಟ್‌ ಮಿಕ್ಸ್​ಗಳನ್ನು ಮಳೆಗಾಲ ಹೊರತಾದ ಕಾಲಾವಧಿಯಲ್ಲಿ ಬಳಸಬಹುದು. ಆದರೆ, ಕೋಲ್ಡ್‌ ಮಿಕ್ಸ್‌ ಯಾವುದೇ ಕಾಲದಲ್ಲಿ ಬೇಕಾದರೂ ಬಳಸಬಹುದು.
  • ಬೇರೆಯ ಕಂಪನಿಗಳಲ್ಲಿ ಲಭ್ಯವಿರುವ ಕೋಲ್ಡ್‌ ಮಿಕ್ಸ್‌ ಮಾದರಿಯ ಪರಿಕರಗಳು 50 ಕೆಜಿಗೆ 1700 ರೂ. ಇದೆ. ಆದರೆ, ಈ ನೂತನ ಆವಿಷ್ಕಾರಕ್ಕೆ ಕೇವಲ 800 ರೂ ಆಗಲಿದೆ.
  • ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಬಾಳಿಕೆ ಬರುವ ಈ ನೂತನ ಉತ್ಪನ್ನ ಬಳಸಿ ಗುಂಡಿ ಮುಚ್ಚಬಹುದು.
  • ಹಾಟ್‌ ಮಿಕ್ಸ್‌ ಬಳಸಿ ಗುಂಡಿ ಮುಚ್ಚಲು ಬೇಕಾಗುವಂತೆ ಹೆಚ್ಚು ಮಾನವ ಸಂಪನ್ಮೂಲ, ಇತರೆ ಯಂತ್ರೋಪಕರಣಗಳು ಬೇಕಾಗಿಲ್ಲ.

ಪೇಟೆಂಟ್‌ ಪಡೆದುಕೊಂಡ ಕಾಲೇಜು: ಸುಮಾರು ನಾಲ್ಕು ವರ್ಷಗಳ ನಿರಂತರ ಸಂಶೋಧನೆ ಪ್ರಯತ್ನದ ನಂತರ ಉತ್ಪನ್ನದ ಪೇಟೆಂಟ್‌ ಪ್ರಕ್ರಿಯೆಯಲ್ಲಿ ಈಗಾಗಲೇ ಪೇಟೆಂಟ್‌ ಪ್ರಕಟಗೊಂಡಿದ್ದು, ಮುಂದಿನ ವರ್ಷದೊಳಗೆ ಪೇಟೆಂಟ್‌ ದೊರೆಯುವ ನಿರೀಕ್ಷೆಯಿದೆ.

ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ: 2021ರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಇದರಿಂದ ಉತ್ಪನ್ನ ಸೇರಿದಂತೆ ಸಿವಿಲ್‌ ವಿಭಾಗದ ಅನೇಕ ಸಂಶೋಧನಾ ಚಟುವಟಿಕೆಗಳಿಗೆ ಪೂರಕ ಶಕ್ತಿ ದೊರೆತಂತಾಗಿತ್ತು.

ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಅನ್ನು ಪ್ರಾಯೋಗಿಕವಾಗಿ, ನಗರದ ಸವಳಂಗ ರಸ್ತೆಯ ಬಳಿಯ ಪ್ಲೈಓವರ್ ಬ್ರಿಡ್ಜ್ ಬಳಿಯ ಗುಂಡಿಗೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ ಅವರು ಗುರುವಾರ ರಸ್ತೆಯ ಗುಂಡಿಗಳಿಗೆ ಉತ್ಪನ್ನಗಳನ್ನು ಹಾಕಿ ಪರಿಶೀಲಿಸಿದರು. ಇದನ್ನು ಹಾಕಿದ ತಕ್ಷಣ ಇದರ ಮೇಲೆ ಕಾರನ್ನು ಚಲಾಯಿಸಿ ಪರೀಕ್ಷೆ ಸಹ ನಡೆಸಲಾಯಿತು. ಅದಕ್ಕೂ ಮುನ್ನ ಈ ಉತ್ಪನ್ನವನ್ನು ಸಂಸದರು ಬಿಡುಗಡೆ ಮಾಡಿದರು.

ಬಿಡುಗಡೆ ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳ ನವೀನ ಚಿಂತನೆಗಳನ್ನು ಯೋಜನೆಯಾಗಿ ರೂಪಿಸುವಲ್ಲಿ ವಿದ್ಯಾಸಂಸ್ಥೆ ನೀಡುತ್ತಿರುವ ಶಿಕ್ಷಣ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಹಾಗೂ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಈ ಉತ್ಪನ್ನದ ಕುರಿತಾಗಿ ಚರ್ಚಿಸಿ ರಾಷ್ಟ್ರಮಟ್ಟದಲ್ಲಿ ಉತ್ಪನ್ನವನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುವುದು ಎಂದರು. ಅಲ್ಲದೆ ಈ ಉತ್ಪನ್ನ ತಯಾರು ಮಾಡಿದ ವಿದ್ಯಾರ್ಥಿ ಹಾಗೂ ತಂಡವನ್ನು ಗಡ್ಕರಿ ಅವರನ್ನು ಭೇಟಿ ಮಾಡಿಸುವುದಾಗಿಯೂ ತಿಳಿಸಿದರು.

ಜೆಎನ್​ಸಿಸಿ ಕಾಲೇಜು ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಂಗಸಂಸ್ಥೆಯಾಗಿದೆ.‌ ಇದರಿಂದ ಸಿವಿಎಲ್ ಇಂಜಿನಿಯರಿಂಗ್ ವಿಭಾಗವು ಸಾಮಾಜಿಕ ಕಳಕಳಿ ಇಟ್ಟುಕೊಂಡು ಸಂಶೋಧನೆ ನಡೆಸುತ್ತಿದೆ. ಇದರ ಫಲವಾಗಿಯೇ ಜೆಎನ್​ಸಿಸಿ ಪಾಟ್ ಹೋಲ್ ಮಿಕ್ಸ್ ತಯಾರಿಸಲಾಗಿದೆ. ಮಳೆ ಬಂದಾಗ ರಸ್ತೆಯಲ್ಲಿ ಗುಂಡಿಗಳು ಸಹಜವಾಗಿಯೇ ಬಿಳುತ್ತದೆ. ನೀರು ಬಿದ್ದಾಗ ಟಾರ್ ಬೇಗ ಹೀಟ್ ಆಗುವುದಿಲ್ಲ. ಇದರಿಂದ ವಾಹನ ಸಂಚಾರ ಹೆಚ್ಚಾಗಿ ಟಾರ್ ರಸ್ತೆಯಲ್ಲಿ ಗುಂಡಿ ಕಾಣಿಸುತ್ತದೆ. ನಮ್ಮ ಪಾಟ್ ಹೋಲ್ ಮಿಕ್ಸ್​ನ ವಿಶೇಷತೆ ಅಂದ್ರೆ, ಮಳೆಗಾಲದಲ್ಲೂ ಸಹ ಇದನ್ನು ಬಳಸಬಹುದು. ನಮ್ಮ ಮಿಕ್ಸ್ ಹಾಕಿದ ಮೇಲೆ ಬೊಲ್ಡೋಜರ್ ಬೇಕಾಗಿಲ್ಲ. ಇದು 25 ಕೆ.ಜಿ ಪ್ಯಾಕ್​ನಲ್ಲಿ ಬರುತ್ತದೆ. 1 ಮೀಟರ್ ಅಗಲ, 1 ಮೀಟರ್ ಉದ್ದಕ್ಕೆ 300-400 ರೂ. ಆಗುತ್ತದೆ ಎಂದು ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಕಾರ್ತಿಕ್ ಬಿ.ಸಿ ಅವರು ಈಟಿವಿ ಭಾರತಕ್ಕೆ ತಿಳಿಸಿದರು.

ರಸ್ತೆಯ ಗುಂಡಿಗಳಿಗೆ ಉತ್ಪನ್ನಗಳನ್ನು ಹಾಕಿ ಪರಿಶೀಲಿಸಿದ ಕ್ಷಣ (ETV Bharat)

ನಂತರ ಮಾತನಾಡಿದ ಸಿವಿಲ್ ಇಂಜಿನಿಯರಿಂಗ್​ ವಿಭಾಗದ ಸಹಾಯಕ ಪ್ರಾಧ್ಯಾಪಕ ಅರುಣ್, "ನಾನು ಮತ್ತು ಅನಿರುದ್ದ ಅವರು 2016ನಿಂದ ಪಾಟ್ ಹೋಲ್ ಮಿಕ್ಸ್ ಮೇಲೆ ಸಂಶೋಧನೆ ಮಾಡಲು ಪ್ರಾರಂಭಿಸಿದೆವು.‌ ಪಾಟ್ ಹೋಲ್​ಗೆ ಅಂತಾನೇ ಅಗ್ರಿಗೇಟ್ ಗ್ರೇಡಿಯೇಷನ್ ಮಿಕ್ಸ್ ಮಾಡಿದ್ವಿ. ಇದರಲ್ಲಿ ಹಾಟ್ ಮಿಕ್ಸ್ ಅನ್ನೋದು ಏನಿಲ್ಲ. ಇದರಲ್ಲಿ ಎಮ್ಲಷೆನ್, ಕಟ್ ಪ್ಯಾಕ್ ಆ್ಯಂಟಿಗ್ ಶಿಪ್ಟ್ ಏಜೆಂಟ್ ಅಂತ ಮಿಕ್ಸ್ ಮಾಡಿ ಮಾಡಲಾಗಿದೆ. ಇದನ್ನು ನಾವು 50 ಕೆ.ಜಿ ಪ್ಯಾಕೇಟ್ ತಯಾರು ಮಾಡಲಾಗಿದೆ. ನೀವೇ ಪಾಟ್ ಹೋಲ್ ಇರುವ ಕಡೆ ಮಿಕ್ಸ್ ಹಾಕಿ‌ ನಿಮ್ಮ ಬೈಕ್ ಅಥವಾ ಕಾರು‌ ಓಡಿಸಿದ್ರೆ ಅದೇ ಸಾಕಾಗುತ್ತದೆ. ಈ ತರ ವಿದೇಶಗಳಲ್ಲಿ ಅನೇಕ ಉತ್ಪನ್ನಗಳಿವೆ. ಆದರೆ, ನಾವು ನಮ್ಮದೇ ಆದ ವಸ್ತುಗಳನ್ನು ಹಾಕಿ ತಯಾರು ಮಾಡಿದ್ದೇವೆ. ನಮ್ಮ ಮಲೆನಾಡಿನ ವಾತಾವರಣಕ್ಕೆ ಬೇಕಾದ ಕಂಡಿಷನ್​ನಲ್ಲಿ ಕೆಲಸ‌ ಮಾಡುವಂತಹ ವಸ್ತುಗಳನ್ನು ಹಾಕಿ ತಯಾರು ಮಾಡಿದ್ದೇವೆ. ಇದನ್ನು ಶಿವಮೊಗ್ಗದ ರಸ್ತೆಯಲ್ಲಿ ಹಾಕಿ ಪರೀಕ್ಷಿಸಿ, ನಂತರ ಇದರ ಕುರಿತು ಪೇಟೆಂಟ್ ಪಡೆದುಕೊಂಡಿದ್ದೇವೆ" ಎಂದರು.

"ನಮ್ಮ ವಿಭಾಗದ ಹೆಚ್​ಓಡಿ ಹಾಗೂ ಉಪನ್ಯಾಸಕರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ನಾವು ಈ ಪಾಟ್ ಹೋಲ್ ಮಿಕ್ಸ್ ಅನ್ನು ತಯಾರು ಮಾಡಿದ್ದೇವೆ. ಈ ಪ್ರಾಡಕ್ಟ್ ನಾವು ಅಂದು ಕೊಂಡಿದ್ದಕ್ಕಿಂತಲೂ ಬೇಗ ತಯಾರ ಆಯಿತು. ಪಾಟ್ ಹೋಲ್ ಮುಚ್ಚಲು ಇದು ಸಹಕಾರಿಯಾಗಿದೆ" ಎಂದು ವಿದ್ಯಾರ್ಥಿ ಚಂದನ್ ತಿಳಿಸಿದರು.

ಇದನ್ನೂ ಓದಿ:

ನಿನ್ನೆ ಸುರಿದ ಮಳೆಗೆ ರಸ್ತೆ ಬಂಡವಾಳ ಬಯಲು... ಅಂಜನಾದ್ರಿ ಹುಲಿಗಿ ರಸ್ತೆ ತುಂಬ ಗುಂಡಿಗಳದ್ದೇ ದರ್ಬಾರ್​.. ಜನತೆ ಹಿಡಿಶಾಪ

ವೈಜ್ಞಾನಿಕ ಸಂಶೋಧನೆಗೆ ಕೊಡುಗೆ ನೀಡಿರುವ 6 ಮಂದಿಗೆ ಇನ್ಫೊಸಿಸ್-2024 ಪ್ರಶಸ್ತಿ

ಬೆಳಗಾವಿ ಟು ಲಂಡನ್: ರಾಣಿ ಚನ್ನಮ್ಮ ವಿವಿಯ 5 ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸದ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.