ETV Bharat / state

ಕೋಲಾರ: ಉದ್ಘಾಟನೆಗೂ ಮೊದಲೇ ಅವನತಿಯ ಹಾದಿ ಹಿಡಿದ ಪಾರ್ಕ್​

ಮಾಲೂರು ಪಟ್ಟಣದ ಹೊರವಲಯದ ಹೊಸೂರು ರಸ್ತೆಯ ಕೊರೊಂಡಹಳ್ಳಿ ಗ್ರಾಮದ ಬಳಿಯಿರುವ ಪಾರ್ಕ್‌ನ ಅನುಕೂಲ ಸಾರ್ವಜನಿಕರಿಗೆ ಸಿಗುತ್ತಿಲ್ಲ.

ಕೋಲಾರ
ಕೋಲಾರ
author img

By ETV Bharat Karnataka Team

Published : Feb 7, 2024, 6:31 PM IST

Updated : Feb 7, 2024, 6:47 PM IST

ಡಿಎಫ್​ಓ ಏಡುಕೊಂಡಲು

ಕೋಲಾರ: ಅದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಹೆಸರಲ್ಲಿ ನಿರ್ಮಾಣವಾದ ಪಾರ್ಕ್​. ಆದರೆ ಇನ್ನೂ ಪಾರ್ಕ್‌ನ ಅನುಕೂಲ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಊರೊಂದು ಕಡೆಯಾದರೆ, ಪಾರ್ಕ್​ ಮತ್ತೊಂದೆಡೆ ಇದೆ. ಅರಣ್ಯಾಧಿಕಾರಿಗಳ ಎಡವಟ್ಟಿನಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಪಾರ್ಕ್​ ಉದ್ಘಾಟನೆಗೂ ಮುನ್ನವೇ ಅವನತಿ ಹಾದಿ ಹಿಡಿದಿದೆ. ಮಾಲೂರು ಪಟ್ಟಣಕ್ಕೆ ಹೊಂದಿಕೊಂಡಂತೆ ಮಾಲೂರು ಪಟ್ಟಣದ ಹೊರವಲಯದ ಹೊಸೂರು ರಸ್ತೆಯ ಕೊರೊಂಡಹಳ್ಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ ಈ ಪಾರ್ಕ್​ ನಿರ್ಮಿಸಿದೆ.

ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾರ್ಕ್​ ನಿರ್ಮಾಣವಾಗಿ ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಇದಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಆಟವಾಡಲು ಮಕ್ಕಳಾಗಲೀ, ವೃದ್ದರಾಗಲೀ, ಪೋಷಕರಾಗಲೀ ಯಾರೂ ಬರುತ್ತಿಲ್ಲ. ಇದಕ್ಕೆ ಕಾರಣ ಇದು ಮಾಲೂರು ಪಟ್ಟಣಕ್ಕಿಂತ ಬಹಳ ದೂರದಲ್ಲಿದೆ. ಇದರ ಜೊತೆಗೆ ಅಲ್ಲಿಗೆ ಬರಲು ಸರಿಯಾದ ವ್ಯವಸ್ಥೆ ಇಲ್ಲ ಅನ್ನೋದು ಒಂದೆಡೆಯಾದ್ರೆ, ಅಲ್ಲಿ ಪಾರ್ಕ್​ ಮಾಡಿರುವುದೇ ಎಷ್ಟೋ ಜನಕ್ಕೆ ಗೊತ್ತಿಲ್ಲ!.

ಹೀಗಾಗಿ ಪಾರ್ಕ್ ನಿರ್ಮಾಣವಾಗಿ ಉದ್ಘಾಟನೆಯಾಗುವ ಮೊದಲೇ ಅಲ್ಲಿನ ಉಪಕರಣಗಳೆಲ್ಲವೂ ತುಕ್ಕು ಹಿಡಿಯುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಾರ್ಕ್​ ನಿರ್ಮಿಸಿ ಅದಕ್ಕೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರ ಹೆಸರಿಟ್ಟು, ಕೊನೆಗೆ ಅವರ ಹೆಸರಿಗಾದರೂ ಸಾರ್ಥಕತೆ ಬರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಡೆದುಕೊಳ್ಳಬೇಕಿತ್ತು. ಆದರೆ, ಪಾರ್ಕ್​ ನಿರ್ಮಾಣ ಮಾಡಿ ನಾಲ್ಕು ವರ್ಷಗಳೇ ಕಳೆದರೂ ಇದರ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ.

ಕೊನೇಯ ಪಕ್ಷ ನಾವು ನಿರ್ಮಾಣ ಮಾಡಿದ ಪಾರ್ಕ್​ ಹೇಗಿದೆ ಅನ್ನೋದನ್ನೂ ಕೂಡಾ ನೋಡಿಲ್ಲ. ಜನರಿಗೆ ಇಲ್ಲೊಂದು ಪಾರ್ಕ್​ ನಿರ್ಮಾಣ ಮಾಡಿದ್ದೇವೆ ಎಂದು ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಉದ್ಘಾಟನೆಯನ್ನೂ ಮಾಡಿಲ್ಲ. ಇದರ ಪರಿಣಾಮ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಾಣ ಮಾಡಿದ ಪಾರ್ಕ್ ಸಂಪೂರ್ಣ ಅವನತಿ ಹಾದಿ ಹಿಡಿದಿದೆ. ಅಲ್ಲಿ ನಿರ್ಮಾಣ ಮಾಡಿದ್ದ ಎಲ್ಲಾ ಮಕ್ಕಳ ಆಟಿಕೆ ಹಾಗೂ ಉಪಕರಣ ತುಕ್ಕು ಹಿಡಿಯುತ್ತಿವೆ.

ಟ್ರಿ ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ : ಈ ಬಗ್ಗೆ ಡಿಎಫ್​ಓ ಏಡುಕೊಂಡಲು ಮಾತನಾಡಿದ್ದು, ''ಟ್ರಿ ಪಾರ್ಕ್ ಪುನಶ್ಚೇತನ ಮಾಡಿ ಅದನ್ನು ಬೆಳವಣಿಗೆ ಮಾಡುತ್ತೇವೆ. ಕೋಲಾರದಲ್ಲಿ ಐದು ಟ್ರಿ ಪಾರ್ಕ್​, ಒಂದು ದೇವವನಗಳಿವೆ. ಮಾಲೂರಿನ ಪಾರ್ಕ್ ಹೊರತುಪಡಿಸಿ ಜನರು ಉಳಿದ ಪಾರ್ಕ್​ಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಎಲ್ಲಾ ಸವಲತ್ತುಗಳನ್ನು ಉಪಯೋಗಿಸುತ್ತಿದ್ದಾರೆ".

"ಟ್ರಿ ಪಾರ್ಕ್​ ಮಾಲೂರು ಪಟ್ಟಣಕ್ಕಿಂತ ದೂರವಿದೆ. ಹಾಗಾಗಿ ಅಲ್ಲಿಗೆ ಜನ ಬರ್ತಿಲ್ಲ. ಹಾಗಾಗಿ ಮಾಲೂರು ಪಟ್ಟಣದ ಸಮೀಪ ಮತ್ತೊಂದು ಪಾರ್ಕ್​ ನಿರ್ಮಾಣ ಮಾಡುತ್ತೇವೆ. ಸಾಧ್ಯವಾದರೆ ಇಲ್ಲಿನ ಉಪಕರಣಗಳನ್ನೇ ಹೊಸ ಪಾರ್ಕ್​ಗೆ ಬದಲಾಯಿಸುತ್ತೇವೆ. ಇಲ್ಲದಿದ್ದರೆ ಸಿಟಿಯ ಜನಸಂಖ್ಯೆಗೆ ಹತ್ತಿರವಾಗುವ ರೀತಿಯಲ್ಲಿ ಪಾರ್ಕ್​ ನಿರ್ಮಿಸಲು ಜಾಗ ಸಿಕ್ಕರೆ ಸೂಕ್ತ ಜಾಗವನ್ನು ಆಯ್ಕೆ ಮಾಡಿಕೊಂಡು ನಾವು ಟ್ರಿ ಪಾರ್ಕ್​ ಅಭಿವೃದ್ದಿ ಮಾಡುತ್ತೇವೆ'' ಎಂದರು.

ಇದನ್ನೂ ಓದಿ: ಆನೆಗಳು ಮನುಷ್ಯನ ಮೇಲೆ ಏಕಾಏಕಿ ದಾಳಿಯನ್ನ ಏಕೆ ಮಾಡುತ್ತವೆ ?: ವನ್ಯಜೀವಿ ತಜ್ಞರ ಸಂದರ್ಶನ

Last Updated : Feb 7, 2024, 6:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.