ETV Bharat / state

ಪಾಕ್​ನೊಂದಿಗೆ ಭಾರತ ಕ್ರಿಕೆಟ್ ಆಡಲೇಬಾರದು: ಯು.ಟಿ.ಖಾದರ್ - India vs Pak Match - INDIA VS PAK MATCH

ಪಾಕಿಸ್ತಾನದವರು ನಮ್ಮ ನಾಡಲ್ಲಿ ಬಂದು ಆಡುವುದನ್ನು ನಿಲ್ಲಿಸಲಾಗಿದೆ. ಹಾಗಿದ್ದಲ್ಲಿ ಬೇರೆ ದೇಶದಲ್ಲಿ ಹೋಗಿ ನಮ್ಮವರು ಪಾಕಿಸ್ತಾನದ ಜೊತೆಗೆ ಆಟ ಆಡಬೇಕೇ ಎಂದು ಸ್ಪೀಕರ್​ ಯು ಟಿ ಖಾದರ್​ ಪ್ರಶ್ನಿಸಿದ್ದಾರೆ.

Speaker U T Khadar
ಸ್ಪೀಕರ್​ ಯು ಟಿ ಖಾದರ್​ (ETV Bharat)
author img

By ETV Bharat Karnataka Team

Published : Jun 8, 2024, 7:40 PM IST

ಸ್ಪೀಕರ್​ ಯು ಟಿ ಖಾದರ್​ (ETV Bharat)

ಮಂಗಳೂರು: "ಪಾಕ್​ನೊಂದಿಗೆ ಭಾರತ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲೇಬಾರದು. ಇದು ನನ್ನ ವೈಯುಕ್ತಿಕ ಅಭಿಪ್ರಾಯ" ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಯಾರ್ಕ್​ನಲ್ಲಿ ಇಂಡಿಯಾ - ಪಾಕಿಸ್ತಾನದ ನಡುವೆ ಟಿ-20 ವರ್ಲ್ಡ್​ ಕಪ್ ಕ್ರಿಕೆಟ್ ಮ್ಯಾಚ್ ನಡೆಯಲಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, "ಹಿಂದೆ ಪಾಕಿಸ್ತಾನದವರು ಕ್ರಿಕೆಟ್ ಆಟವಾಡಲು ಬಂದ ವೇಳೆ ಪಿಚ್ ಅಗೆದಿದ್ದಾರೆ. ವಿನಾಕಾರಣ ಪ್ರತಿಭಟನೆ ಮಾಡಿದ್ದರು. ಆದ್ದರಿಂದ ಎಲ್ಲಿಯವರೆಗೆ ನಮಗೆ ಅವರು ತೊಂದರೆ ಕೊಡುತ್ತಾರೋ, ಅಲ್ಲಿಯವರೆಗೆ ನಾವು ಅವರೊಂದಿಗೆ ಆಟವಾಡಬಾರದು" ಎಂದು ಹೇಳಿದರು.

"ಎರಡೂ ದೇಶಗಳ ನಡುವೆ ಸಂಚಾರ ಮಾಡುವುದನ್ನೂ ನಿಲ್ಲಿಸಲಾಗಿದೆ. ಅಲ್ಲದೆ ಅವರು ನಮ್ಮಲ್ಲಿಗೆ ಬಂದು ಆಟವಾಡುವುದನ್ನೂ ನಿಲ್ಲಿಸಲಾಗಿದೆ. ಇಷ್ಟಾದ ಮೇಲೆ ಪಾಕಿಸ್ತಾನದ ಆಟಗಾರರನ್ನು ದುಬೈ, ನ್ಯೂಯಾರ್ಕ್​ಗೆ ಕರೆದೊಯ್ದು ಅಲ್ಲಿ ಅವರೊಂದಿಗೆ ಭಾರತದ ಆಟಗಾರರು ಆಡುವುದೆಂದರೆ ಏನರ್ಥ?. ಎಲ್ಲಿಯವರೆಗೆ ಪಾಕ್​ನವರು ಭಾರತ ಹೇಳುವುದನ್ನು ಕೇಳುವುದಿಲ್ಲವೋ ಅಲ್ಲಿಯವರೆಗೆ ಅವರೊಂದಿಗೆ ಆಟವಾಡುವುದು ಬೇಡ. ಅವರೊಂದಿಗೆ ಆಟವಾಡದಿದ್ದರೆ ಕ್ರಿಕೆಟ್ ಆಟ ಮುಂದೆ ಹೋಗುದಿಲ್ಲವೇ?" ಎಂದು ಪ್ರಶ್ನಿಸಿದರು.

"ಶಾಲಾ-ಕಾಲೇಜುಗಳ ದಿನಗಳಲ್ಲಿ ನಾನೂ ಓರ್ವ ಕ್ರಿಕೆಟ್ ಆಟಗಾರ. ಕ್ರಿಕೆಟ್ ಅಭಿಮಾನಿಯೂ ಹೌದು. ಆದ್ದರಿಂದ ಟಿ -20 ವರ್ಲ್ಡ್‌ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತದ ತಂಡ ಕಪ್ ಗೆಲ್ಲಬೇಕೆಂದು ಆಶಿಸಿ, ಪ್ರಾರ್ಥಿಸುತ್ತೇನೆ. ನಾಳೆ ಪಾಕ್​ನೊಂದಿಗೆ ನಡೆಯುವ ಪಂದ್ಯಾಟದಲ್ಲಿ ಭಾರತದ ತಂಡ ಗೆಲುವು ಸಾಧಿಸುವುದು ಮಾತ್ರವಲ್ಲ, ಇಡೀ ದೇಶಕ್ಕೆ ಗೌರವದ ಗೆಲುವನ್ನು ತರಬೇಕು. ಅದೇ ರೀತಿ ಪಾಕಿಸ್ತಾನವನ್ನು ಸೋಲಿಸುವುದು ಮಾತ್ರವಲ್ಲ, ಅತ್ಯಂತ ಹೀನಾಯ ಸೋಲನ್ನು ಅನುಭವಿಸುವಂತೆ ಮಾಡಲು ದೇವರು ನಮ್ಮ ಆಟಗಾರರಿಗೆ ಶಕ್ತಿ ತುಂಬಲಿ" ಎಂದು ಯು.ಟಿ. ಖಾದರ್ ಪ್ರಾರ್ಥಿಸಿದರು.

ಇದನ್ನೂ ಓದಿ: T20 World Cup: ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಐಸಿಸ್​ ​ಉಗ್ರರ ದಾಳಿ ಬೆದರಿಕೆ - INDIA VS PAK MATCH

ETV Bharat Logo

Copyright © 2024 Ushodaya Enterprises Pvt. Ltd., All Rights Reserved.