ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. ಈ ವೇಳೆ ಅಡ್ಡ ಮತದಾನ ನಡೆದರೆ ಮಾತ್ರ ಅನಿರೀಕ್ಷಿತ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳಿವೆ. ಹೀಗಾಗಿ ಅಡ್ಡಮತದಾನ ಭೀತಿ ಎಲ್ಲರಲ್ಲೂ ಮೂಡಿದೆ. ಹೀಗಾಗಿ ಆಯಾ ಪಕ್ಷಗಳು ಕಠಿಣ ನಿಯಮಗಳನ್ನು ತೆಗೆದುಕೊಂಡಿವೆ. ಅದರಂತೆ ಕಾಂಗ್ರೆಸ್ ಪಕ್ಷವು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅಡ್ಡ ಮತದಾನ ಮಾಡಿದ್ರೆ ಸ್ಪೀಕರ್ಗೆ ದೂರು ಕೊಟ್ಟು, ಶಾಸಕ ಸ್ಥಾನದಿಂದ ವಜಾಗೊಳಿಸುತ್ತೇವೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲಾ ಶಾಸಕರಿಗೂ ವಿಪ್ ಕೊಟ್ಟಿದ್ದೇವೆ. ಅಡ್ಡ ಮತದಾನ ಮಾಡಿದ್ರೆ ಸ್ಪೀಕರ್ಗೆ ದೂರು ಕೊಡಲಾಗುವುದು. ಅಷ್ಟೇ ಅಲ್ಲ, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸ್ತೀವಿ, ಕ್ರಮ ಕೈಗೊಳ್ಳುತ್ತೇವೆ. ಸಂಜೆ 6 ಗಂಟೆಗೆ ಹಿಲ್ಟನ್ ಹೋಟೆಲ್ಗೆ ಕಡ್ಡಾಯವಾಗಿ ಹಾಜರಾಗಲು ಹೇಳಿದ್ದೇವೆ. ವಾಟ್ಸಪ್ಗೆ ಸಂದೇಶ ಕಳಿಸಿದ್ದೇವೆ. ವೈಯಕ್ತಿಕವಾಗಿ ಕರೆ ಮಾಡಿ ಹೇಳಿದ್ದೇವೆ. ಎಲ್ಲಾ ಶಾಸಕರು ರಾತ್ರಿ ಅಲ್ಲೇ ಉಳ್ಕೊತ್ತೇವೆ. ಲಗೇಜ್ ಸಮೇತ ಎಲ್ಲಾ ಶಾಸಕರು ಬರುತ್ತಿದ್ದಾರೆ. ನಾಳೆ ಬೆಳಗ್ಗೆ ಎಲ್ಲಾ ಶಾಸಕರು ಹೋಟೆಲ್ನಿಂದ ಬಸ್ನಲ್ಲಿ ವಿಧಾನಸೌಧಕ್ಕೆ ಬರುತ್ತೇವೆ ಎಂದಿರುವ ಬಗ್ಗೆ ಮಾಹಿತಿ ನೀಡಿದರು.
ಎಲ್ಲಾ ವ್ಯವಸ್ಥೆ ಆಗಿದೆ. ಎಲ್ಲರೂ ಒಟ್ಟಿಗೆ ಬಂದ್ ವೋಟ್ ಹಾಕಿ ಹೋಗುತ್ತೇವೆ. ವೋಟಿಂಗ್ ಪ್ಯಾಟ್ರನ್ ಟ್ರೈನಿಂಗ್ ಕೊಡೋಕೆ ಯಾವ ರೀತಿ ಮಾರ್ಕ್ ಮಾಡಬೇಕು ಅಂತಲೇ CLP ಸಭೆ ಕರೆದಿದ್ದೇವೆ ಎಂದರು.
ಓದಿ: ಸಂಸದ ಅನಂತಕುಮಾರ್ ಹೆಗಡೆ ಮನುಷ್ಯನೇ ಅಲ್ಲ: ಸಚಿವ ಕೆ.ಎನ್.ರಾಜಣ್ಣ