ETV Bharat / state

ರಾಜ್ಯದಲ್ಲಿ ಸೈಬರ್ ಅಪರಾಧ ನಿಯಂತ್ರಣಕ್ಕೆ ಸೈಬರ್ ಸೆಕ್ಯುರಿಟಿ ಪಾಲಿಸಿ ಜಾರಿ: 40 ಸಾವಿರ ಜನರಿಗೆ ತರಬೇತಿ - cyber security policy - CYBER SECURITY POLICY

ಸೈಬರ್​ ಅಪರಾಧಗಳನ್ನು ತಡೆಯಲು ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದ್ದು, ಸೈಬರ್​ ಸೆಕ್ಯುರಿಟಿ ಪಾಲಿಸಿಯನ್ನು ಜಾರಿಗೆ ತಂದಿದೆ. ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್​ ಖರ್ಗೆ ಅವರು ಪಾಲಿಸಿಯನ್ನು ಬಿಡುಗಡೆ ಮಾಡಿದರು.

ಸೈಬರ್ ಸೆಕ್ಯುರಿಟಿ ಪಾಲಿಸಿ ಜಾರಿ
ಸೈಬರ್ ಸೆಕ್ಯುರಿಟಿ ಪಾಲಿಸಿ ಜಾರಿ (ETV Bharat)
author img

By ETV Bharat Karnataka Team

Published : Aug 1, 2024, 5:29 PM IST

ಬೆಂಗಳೂರು: ಹೆಚ್ಚುತ್ತಿರುವ ಸೈಬರ್ ಅಪರಾಧವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 'ಕರ್ನಾಟಕ ಸೈಬರ್ ಸೆಕ್ಯುರಿಟಿ ಪಾಲಿಸಿ-2024' ಜಾರಿಗೆ ತಂದಿದೆ. ಸೈಬರ್ ಸೆಕ್ಯುರಿಟಿ ನೀತಿಯ ಜೊತೆಗೆ ಸಿಸ್ಕೋ(CISCO) ಸಹಯೋಗದೊಂದಿಗೆ 'ಸೈಬರ್ ಸೆಕ್ಯುರಿಟಿ ' ಕೌಶಲ್ಯ ತರಬೇತಿ ಕಾರ್ಯಕ್ರಮವನ್ನೂ ಪ್ರಾರಂಭಿಸಿದೆ.

ಇಲ್ಲಿನ ವಿಕಾಸಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೈಬರ್ ಸೆಕ್ಯುರಿಟಿ ಪಾಲಿಸಿಯನ್ನು ಬಿಡುಗಡೆ ಮಾಡಿದರು.

ಸರ್ಕಾರಿ- ಖಾಸಗಿ ಪಾಲುದಾರಿಕೆ: ನಂತರ ಮಾತನಾಡಿದ ಸಚಿವರು, ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಗೃಹ ಇಲಾಖೆ ಹಾಗೂ ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲಾ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚಿಸಿ ಈ ನೀತಿಯನ್ನು ಜಂಟಿಯಾಗಿ ರಚಿಸಲಾಗಿದೆ. ಈ ನೀತಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಪರಿಶೀಲಿಸಿದೆ. ಕೆ-ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯುರಿಟಿ (CYSECK) ಕೇಂದ್ರವು ಕೂಡ ನೀತಿಯ ಭಾಗವಾಗಿದೆ ಎಂದರು.

ಸಾರ್ವಜನಿಕ, ಶೈಕ್ಷಣಿಕ, ಉದ್ಯಮ, ಸ್ಟಾರ್ಟ್​ಆಪ್ ಮೇಲೆ ನಿಗಾ ವಹಿಸಿದರೆ, ಐಟಿ ಸ್ವತ್ತುಗಳು ಸೇರಿದಂತೆ ಸಮಾಜದ ಎಲ್ಲಾ ವಿಭಾಗಗಳಲ್ಲಿ ಬಲವಾದ ಸೈಬರ್ ಭದ್ರತಾ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ನೀತಿಯು ಎರಡು ಭಾಗಗಳನ್ನು ಹೊಂದಿದೆ. ಮೊದಲ ಭಾಗವು ಸಾರ್ವಜನಿಕ ಕ್ಷೇತ್ರದಲ್ಲಿದ್ದರೆ, ಎರಡನೇ ಭಾಗವು ರಾಜ್ಯದ ಐಟಿ ತಂಡ ಮತ್ತು ಇಲಾಖೆಗಳಲ್ಲಿ ಐಟಿ ಅನುಷ್ಠಾನಗಳ ಕುರಿತು ಕೇಂದ್ರಿಕೃತವಾಗಿರುತ್ತದೆ. ಈ ನೀತಿಯನ್ನು 5 ವರ್ಷಗಳವರೆಗೆ ಅನುಷ್ಠಾನಕ್ಕಾಗಿ 103.87 ಕೋಟಿ ರೂಪಾಯಿ ಅನುದಾನ ಇದೆ ಎಂದು ತಿಳಿಸಿದರು.

ಉದ್ಯೋಗವಾಕಾಶ ಹೆಚ್ಚಳ: ಸಿಸ್ಕೋ ಜೊತೆಗಿನ ಈ ಪಾಲುದಾರಿಕೆಯು ಸುರಕ್ಷಿತ ಡಿಜಿಟಲ್ ಪರಿಸರವನ್ನು ಬೆಳೆಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡುವ ಮೂಲಕ 40,000 ಜನರಿಗೆ ತರಬೇತಿ ನೀಡುವ ಮೂಲಕ ಟೆಕ್ ವಲಯದಲ್ಲಿ ಉದ್ಯೋಗವಕಾಶವನ್ನು ಹೆಚ್ಚಿಸಲಿದ್ದೇವೆ ಎಂದು ಹೇಳಿದರು.

ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಏಕ್‌ರೂಪ್ ಕೌರ್ ಮಾತನಾಡಿ, ಸೈಬರ್ ಸ್ಪೇಸ್ ಭವಿಷ್ಯದಲ್ಲಿ ಹೆಚ್ಚು ಸಂಕೀರ್ಣವಾಗುವ ನಿರೀಕ್ಷೆಯಿದೆ. ನೆಟ್‌ವರ್ಕ್ ಮತ್ತು ಅದಕ್ಕೆ ಸಂಪರ್ಕಗೊಂಡಿರುವ ಸಾಧನಗಳಲ್ಲಿ ಹಲವು ಪಟ್ಟು ಹೆಚ್ಚಳವಾಗಲಿದೆ. ಹಾಗಾಗಿ, ಈ ಕ್ರಮಗಳನ್ನು ಸೈಬರ್ ಭದ್ರತಾ ನೀತಿಯ ಅಡಿಯಲ್ಲಿ ಏಕೀಕರಿಸುವ ಅವಶ್ಯಕತೆ ಇದೆ. ಅದು ರಾಷ್ಟ್ರೀಯ ಸೈಬರ್ ಭದ್ರತಾ ನೀತಿಗೆ ಅನುಗುಣವಾಗಿರುತ್ತದೆ ಎಂದರು.

ನೀತಿಯ ಪ್ರಮುಖ ಅಂಶಗಳು: ಕರ್ನಾಟಕ ಮೂಲದ ಪದವಿಪೂರ್ವ ಮತ್ತು ಸ್ನಾತಕೋತ್ತರ ಇಂಟರ್ನ್‌ಗಳಿಗೆ ಗರಿಷ್ಠ 3 ತಿಂಗಳವರೆಗೆ ತಿಂಗಳಿಗೆ 10 ಸಾವಿರ ರೂಪಾಯಿ, 15 ಸಾವಿರ ರೂಪಾಯಿ ಗೌರವಧನ ನೀಡಲಾಗುತ್ತದೆ. ಪಾಲಿಸಿ ಅವಧಿಯಲ್ಲಿ 600 ಸ್ನಾತಕಪೂರ್ವ ಇಂಟರ್ನಿಗಳು ಮತ್ತು 120 ಸ್ನಾತಕೋತ್ತರ ಇಂಟರ್ನ್‌ಗಳಿಗೆ ಅನುಕೂಲ ಕಲ್ಪಿಸುವುದು ಗುರಿಯಾಗಿದೆ.

ಕರ್ನಾಟಕ ಮೂಲದ ಸ್ಟಾರ್ಟ್ಅಪ್‌ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಸೈಬ‌ರ್ ಸೆಕ್ಯುರಿಟಿಯ ಕ್ಷೇತ್ರದ R&D ಯೋಜನೆಗಳಿಗೆ ವೆಚ್ಚದ ಗರಿಷ್ಠ ಶೇಕಡಾ 50ರಷ್ಟು ಹೊಂದಾಣಿಕೆ ಅನುದಾನ ಅಥವಾ 50 ಲಕ್ಷ ರೂಪಾಯಿ ಒದಗಿಸಲಾಗುತ್ತದೆ.

ಸೈಬರ್ ಭದ್ರತಾ ಲೆಕ್ಕಪರಿಶೋಧನೆಗಾಗಿ ಕರ್ನಾಟಕ ಸ್ಟಾರ್ಟ್ಅಪ್ ಸೆಲ್​ನಲ್ಲಿ ನೋಂದಾಯಿಸಲಾದ ಸ್ಟಾರ್ಟ್ಅಪ್‌ಗಳಿಂದ ಕರ್ನಾಟಕ ಮೂಲದ, ಸಿಇಆರ್‌ಟಿ-ಇನ್ ಎಂಪನೆಲ್ಸ್ (CERT-in empaneled vendors) ಸೇವಾ ಪೂರೈಕೆದಾರರ ತೊಡಗಿಸಿಕೊಳ್ಳುವಿಕೆಗೆ ಗರಿಷ್ಠ 1 ಲಕ್ಷ ರೂಪಾಯಿವರೆಗಿನ ವೆಚ್ಚವನ್ನು ಮರುಪಾವತಿ ಮಾಡಲಾಗುತ್ತದೆ.

ಒಪ್ಪಂದ: ಸೈಬರ್ ಸೆಕ್ಯುರಿಟಿ ವೃತ್ತಿಪರರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು ಕಾರ್ಯತಂತ್ರದ ಕ್ರಮದಲ್ಲಿ ಸರ್ಕಾರವು 40 ಸಾವಿರ ವಿಧ್ಯಾರ್ಥಿ/ಪದವೀಧರರಿಗೆ ಸೈಬ‌ರ್ ಸುರಕ್ಷತೆ ಕೌಶಲ್ಯ ಮತ್ತು ಜಾಗೃತಿ ತರಬೇತಿ ನೀಡಲು CISCOದೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ.

ಇದನ್ನೂ ಓದಿ: ಹುಬ್ಬಳ್ಳಿ ಶ್ರೀಸಿದ್ದಾರೂಢ ಮಠದ ಧರ್ಮದರ್ಶಿಯಿಂದ ದರ್ಶನ್​​​​​ಗೆ ಸಿದ್ದಾರೂಢರ ಚರಿತ್ರೆ ಪುಸ್ತಕ ರವಾನೆ - Siddharoodha Charitre to Darshan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.