ETV Bharat / state

ಗೋವಾದಿಂದ ಆಂಧ್ರಕ್ಕೆ ಅಕ್ರಮ ಮದ್ಯ: ಯಮಕನಮರಡಿಯಲ್ಲಿ ₹28 ಲಕ್ಷ ಮೌಲ್ಯದ ಮಾಲು ವಶಕ್ಕೆ - Illegal Liquor Seized - ILLEGAL LIQUOR SEIZED

ಆಂಧ್ರಪ್ರದೇಶಕ್ಕೆ ಸಾಗಣೆಯಾಗುತ್ತಿದ್ದ ಭಾರೀ ಪ್ರಮಾಣದ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಮದ್ಯ ಸಾಗಾಟದ ಲಾರಿ
ಅಕ್ರಮ ಮದ್ಯ ಸಾಗಾಟದ ಲಾರಿ (ETV Bharat)
author img

By ETV Bharat Karnataka Team

Published : May 12, 2024, 10:10 AM IST

ಚಿಕ್ಕೋಡಿ: ಗೋವಾದಿಂದ ಆಂಧ್ರಪ್ರದೇಶಕ್ಕೆ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ವಾಹನವನ್ನು ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋವಾದಿಂದ ಬೆಳಗಾವಿ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ವಾಹನವನ್ನು ಮಕನಮರಡಿ ಪೊಲೀಸರು ತಪಾಸಣೆ ಮಾಡಿದಾಗ 28 ಲಕ್ಷ ಮೌಲ್ಯದ 16,848 ಲೀಟರ್ ಅಕ್ರಮ ಮದ್ಯ ದೊರೆತಿದೆ. ಈ ಕುರಿತು ಇಬ್ಬರು ಆರೋಪಿಗಳಾದ ಸಂತೋಷ ಹಲಗೇ, ಸವಾಶಿವ ಗೇರಡೆ ಎಂಬುವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಹಾರ್ಡ್‌ವೇರ್ ವಸ್ತು ಸಾಗಾಟ ಮಾಡುತ್ತೇವೆ ಎಂದು ಲಾರಿ ಮಾಲೀಕ ಲೈಸನ್ಸ್ ಪಡೆದಿದ್ದು, ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಬೆಳಗಾವಿ ಎಸ್‌ಪಿ ಭೀಮಶಂಕರ್ ಗುಳೇದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಲೋಕಸಭೆ ಚುನಾವಣೆ ಹಾಗೂ ಆಂಧ್ರಪ್ರದೇಶ ವಿಧಾನಸಭೆಯ ಚುನಾವಣೆಗೆ ಸೋಮವಾರ ಮತದಾನ ನಡೆಯಲಿದೆ. ಹಾಗೆಯೇ ತೆಲಂಗಾಣ ಸೇರಿದಂತೆ 10 ರಾಜ್ಯಗಳಲ್ಲಿ 96 ಲೋಕಸಭೆ ಕ್ಷೇತ್ರಗಳಿಗೆ ಅಂದೇ ಮತದಾನ ನಡೆಯಲಿದೆ.

ಇದನ್ನೂ ಓದಿ: ಲಾರಿ-ಟಾಟಾ ಏಸ್​ ಮಧ್ಯೆ ಅಪಘಾತ, ಕಂತೆ-ಕಂತೆ ಹಣ ಕಂಡ ಗಾಬರಿಗೊಂಡ ಸ್ಥಳೀಯರು! - HUGE CASH FOUND

ETV Bharat Logo

Copyright © 2024 Ushodaya Enterprises Pvt. Ltd., All Rights Reserved.