ರಾಯಚೂರು: ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಇಡಪನೂರು ಪಿಎಸ್‌ಐ ಅವಿನಾಶ ಕಾಂಬ್ಳೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬಳ್ಳಾರಿ ವಲಯ ಐಜಿಪಿ ಬಿ. ಎಸ್. ಲೋಕೇಶ್ ಕುಮಾರ ಆದೇಶಿಸಿದ್ದಾರೆ.
ಪ್ರಸುತ್ತ ಅವಿನಾಶ ಕಾಂಬ್ಳೆ ರಾಯಚೂರು ತಾಲೂಕಿನ ಇಡಪನೂರು ಪಿಎಸ್‌ಐಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದಲ್ಲಿ ಬೇಜವಾಬ್ದಾರಿತನ, ಸಾರ್ವಜನಿಕರ ದೂರುಗಳ ನಿರ್ಲಕ್ಷ್ಯ ಹಾಗೂ ಘಟನಾ ಸ್ಥಳಗಳಿಗೆ ಸೂಕ್ತ ಸಮಯದಲ್ಲಿ ಭೇಟಿ ನೀಡದ ಆರೋಪ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಐಪಿಸಿ ಕಲಂ 189(2), 191(2), 191(3), 61(1), 115(2), 118(1), 118(2), 109, 103, 352 ಸಹಿತ 190 ಬಿಎನ್‌ಎಸ್ ಕಾಯಿದೆ 2023 ಅಡಿ ಕರ್ತವ್ಯ ಬೇಜವಾಬ್ದಾರಿತನ, ಅಸಡ್ಡೆ ಮತ್ತು ಅತೀವ ನಿರ್ಲಕ್ಷ್ಯ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕುರಿತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ನೀಡಿದ ಪ್ರಾಥಮಿಕ ತನಿಖೆ ವರದಿ ಆಧಾರದ ಮೇಲೆ ಷರತ್ತುಗಳೊಂದಿಗೆ 2024ರ ಡಿ.5ರಂದು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
2024ರ ಸೆಪ್ಟೆಂಬರ್ನಲ್ಲಿ ರಾಯಚೂರು ತಾಲೂಕಿನ ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಿರ್ಜಾಪುರ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಮೇಲೆ ಪಿಎಸ್‌ಐ ಅವಿನಾಶ್ ಕಾಂಬ್ಳೆ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ತುಮಕೂರು ಲೋಕ ಅದಾಲತ್ನಲ್ಲಿ 75ಕ್ಕೂ ಹೆಚ್ಚು ಕೌಟುಂಬಿಕ ಕಲಹಗಳ ಪ್ರಕರಣ ಇತ್ಯರ್ಥ