ETV Bharat / state

ಮಲೆನಾಡ ಹೆಬ್ಬಾಗಿಲಿನಲ್ಲಿದೆ ಬೇಡಿದ ವರವ ಕೊಡುವ ಇಡಗುಂಜಿ ಗಣಪ - Shivamogga Idagunji Ganapa - SHIVAMOGGA IDAGUNJI GANAPA

ಏಳು ದಶಕಗಳ ಹಿಂದೆ ವೀರದಾಸ ಎನ್ನುವವರು ನಿರ್ಮಿಸಿದ ಇಡಗುಂಜಿ ಮಾದರಿಯ ಈ ದೇವಾಲಯವನ್ನು ಅವರ ಮೂರನೇ ತಲೆಮಾರಿನವರು ನಡೆಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ಗಣಪ ಭಕ್ತರ ಇಷ್ಟಾರ್ಥವನ್ನೆಲ್ಲ ಈಡೇರಿಸುವ ದೇವರಾಗಿ ಪ್ರಸಿದ್ಧಿಯಾಗಿದ್ದಾನೆ.

Idagunji Ganapa of Shivamogga
ಮಲೆನಾಡ ಹೆಬ್ಬಾಗಿಲಿನಲ್ಲಿದೆ ಬೇಡಿದ ವರವ ಕೊಡುವ ಇಡಗುಂಜಿ ಗಣಪ (ETV Bharat)
author img

By ETV Bharat Karnataka Team

Published : Sep 10, 2024, 8:43 AM IST

Updated : Sep 10, 2024, 9:41 AM IST

ಶಿವಮೊಗ್ಗ: ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಇಡಗುಂಜಿ ಗಣಪನಂತೆ, ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ಭಕ್ತರು ಬೇಡಿದ್ದನ್ನು ಕೊಡುವ ಇಡಗುಂಜಿ ಗಣೇಶನಿದ್ದಾನೆ. ಶಿವಮೊಗ್ಗದ ಹೊರವಲಯ ತ್ರಿಮೂರ್ತಿ ನಗರದಲ್ಲಿ ಶಿಕಾರಿಪುರ ರಸ್ತೆಗೆ ಅಂಟಿಕೊಂಡಂತೆ ಈ ದೇವಾಲಯವಿದೆ.

ಮಲೆನಾಡ ಹೆಬ್ಬಾಗಿಲಿನಲ್ಲಿದೆ ಬೇಡಿದ ವರವ ಕೊಡುವ ಇಡಗುಂಜಿ ಗಣಪ (ETV Bharat)

ದೇಗುಲವನ್ನು ತ್ರಿಮೂರ್ತಿ ನಗರದ ನಿವಾಸಿ ವೀರದಾಸ ಎಂಬವರು ಸುಮಾರು 70 ವರ್ಷಗಳ ಹಿಂದೆ ನಿರ್ಮಿಸಿದ್ದರು. ಮಹಾನ್ ದೈವಭಕ್ತರಾಗಿದ್ದ ವೀರದಾಸ ಪ್ರತಿಯೊಂದು ದೇವಾಲಯಗಳಿಗೂ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರಂತೆ. ಒಮ್ಮೆ ಇಡಗುಂಜಿಯಲ್ಲಿ ಗಣಪನ ದರ್ಶನ ಪಡೆದು ವಾಪಸಾಗಿದ್ದ ಅವರಿಗೆ ಇದ್ದಕ್ಕಿದ್ದಂತೆ ದೈವ ಪ್ರೇರಣೆಯಾಗಿ ಈ ದೇವಾಲಯವನ್ನು ಇಡಗುಂಜಿ ಮಾದರಿಯಲ್ಲಿಯೇ ಕಟ್ಟಿಸಿದ್ದಾರೆ. ಇಡಗುಂಜಿ ಮಾದರಿಯಲ್ಲಿಯೇ ಗಣಪನನ್ನು ಮಾಡಿಸಿ, ಪ್ರತಿಷ್ಠಾಪಿಸಿ ಪೂಜಿಸಿಕೊಂಡು ಬಂದಿದ್ದರು. ಈಗ ವೀರದಾಸ ದೈವಾಧೀನರಾಗಿದ್ದು, ಮೊಮ್ಮಗ ದೇವಾಲಯವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಕೇಂದ್ರ: ಶಿವಮೊಗ್ಗದ ಇಡಗುಂಜಿ ಗಣಪ, ಭಕ್ತರ ಇಷ್ಟಾರ್ಥವನ್ನು ಈಡೇರಿಸಿಕೊಂಡು ಬಂದಿದ್ದಾನೆ‌. ಈ ಗಣಪನಲ್ಲಿ ಬೇಡಿಕೊಂಡ ಹರಕೆಗಳೆಲ್ಲವೂ ಈಡೇರುವುದು ಇಲ್ಲಿನ ವಿಶೇಷತೆ. ತಮ್ಮ ಇಷ್ಟಾರ್ಥ ಈಡೇರಿದರೆ ಭಕ್ತರು ಇಲ್ಲಿಗೆ ಬಂದು ಸರಳವಾಗಿ, ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಕೆಲವರು ಬೆಣ್ಣೆ ಅಲಂಕಾರ ಮಾಡುತ್ತಾರೆ. ಇವೆರಡೂ ಈ ದೇವರಿಗೆ ಅತಿ ಪ್ರಿಯವಾದ ಸೇವೆಗಳು. ಶಿವಮೊಗ್ಗದಿಂದ ಶಿಕಾರಿಪುರ, ನ್ಯಾಮತಿ ಭಾಗಕ್ಕೆ ಓಡಾಡುವವರು ಇಲ್ಲಿನ ಖಾಯಂ ಭಕ್ತರು.

ದೇವಾಲಯದ ಅರ್ಚಕ ಗಜೇಂದ್ರ ಮಾತನಾಡಿ, "ಮೂರನೇ ತಲೆಮಾರಿನವರಾದ ನಾವು ಈಗ ದೇವಾಲಯವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಇಲ್ಲಿ ಸೋಮವಾರ, ಶನಿವಾರ, ಹುಣ್ಣಿಮೆ ದಿನ ವಿಶೇಷ ಪೂಜೆ ನಡೆಸಲಾಗುತ್ತಿದೆ. ಅನೇಕ ಕಡೆಯಿಂದ ಭಕ್ತರು ಆಗಮಿಸುತ್ತಾರೆ. ಹರಕೆಯ ರೂಪದಲ್ಲಿ ಅಭಿಷೇಕ ಹಾಗೂ ಬೆಣ್ಣೆ ಅಲಂಕಾರ ಮಾಡಿಸುತ್ತಾರೆ" ಎಂದರು.

ನಿವೃತ್ತ ಕಂದಾಯ ಅಧಿಕಾರಿ ಸಿದ್ದಪ್ಪ ಮಾತನಾಡಿ, "ಇಡಗುಂಜಿ ಗಣಪತಿ ಮಹಾಶಕ್ತಿ ಗಣಪತಿ.‌ ದೇವಾಲಯ ರಸ್ತೆ ಪಕ್ಕದಲ್ಲಿಯೇ ಇರುವುದರಿಂದ ಇಲ್ಲಿ ಓಡಾಡುವ ಎಲ್ಲರೂ ಬಂದು ದರ್ಶನ ಪಡೆದು ಹೋಗುತ್ತಾರೆ. ದೇವರ ದರ್ಶನದಿಂದಲೇ ನಮಗೆ ಒಳ್ಳೆಯದಾಗಿದೆ. ನಾವು ಬೇಡುವ ಮುನ್ನವೇ ಗಣಪ‌ ಕರುಣಿಸುತ್ತಿದ್ದಾನೆ" ಎಂದು ಹೇಳಿದರು.

"ಏನೇ ಹರಕೆ ಹೇಳಿಕೊಂಡರೂ ಈಡೇರುತ್ತದೆ. ಇಲ್ಲಿಗೆ ಬರುವುದರಿಂದ ಖುಷಿ ಜೊತೆಗೆ ನೆಮ್ಮದಿ ಸಿಗುತ್ತಿದೆ. ಭಕ್ತರು ಇಲ್ಲಿ ಕೋರಿಕೆಗಳನ್ನು ಬೇಡಿಕೊಂಡು ಹೋಗುತ್ತಾರೆ. ತಮ್ಮ ಬೇಡಿಕೆ ಈಡೇರಿದ ಬಳಿಕ ಅವರೇ ಖುಷಿಯಿಂದ ಬಂದು ದೇವರಿಗೆ ಪೂಜೆ ಅಭಿಷೇಕ ಮಾಡಿಸುತ್ತಾರೆ. ನಾವು ಪ್ರತಿ ದಿನ ಬಂದು ಗಣಪನಿಗೆ ಕೈ ಮುಗಿದುಕೊಂಡು ಹೋದರೆ, ಅದೇ ನಮಗೆ ನೆಮ್ಮದಿ" ಎನ್ನುತ್ತಾರೆ ಭಕ್ತ ಮಾರುತಿ.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶಮೂರ್ತಿ ಅದ್ಧೂರಿ ವಿಸರ್ಜನೆ: ಕುಣಿದು ಕುಪ್ಪಳಿಸಿದ ಜನ - ganesha idol lavishly dissolved

Last Updated : Sep 10, 2024, 9:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.