ETV Bharat / state

ಪಕ್ಷ, ವರಿಷ್ಠರು ತೀರ್ಮಾನಿಸಿದರೆ ಲೋಕಸಭೆಗೆ ಸ್ಪರ್ಧಿಸಲು ಸಿದ್ಧ: ಜಗದೀಶ್​​ ಶೆಟ್ಟರ್​​ - Jagadish Shettar ticket

ಪಕ್ಷ ಮತ್ತು ವರಿಷ್ಠರು ನಿರ್ಧಾರ ಮಾಡಿದರೆ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತಯಾರಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಮಾಜಿ ಸಿಎಂ ಜಗದೀಶ್​ ಶೆಟ್ಟರ್​
ಮಾಜಿ ಸಿಎಂ ಜಗದೀಶ್​ ಶೆಟ್ಟರ್​
author img

By ETV Bharat Karnataka Team

Published : Mar 13, 2024, 10:42 AM IST

Updated : Mar 13, 2024, 12:24 PM IST

ಜಗದೀಶ್​​ ಶೆಟ್ಟರ್​​

ಹುಬ್ಬಳ್ಳಿ: 'ಪಕ್ಷ ಮತ್ತು ವರಿಷ್ಠರು ತೀರ್ಮಾನ ಮಾಡಿದರೆ ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸಲು ತಯಾರಿದ್ದೇನೆ' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, 'ಪಕ್ಷದವರು ಮತ್ತು ವರಿಷ್ಠರು ಇವತ್ತು ಜಗದೀಶ್​ ಶೆಟ್ಟರ್​ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಅಂದರೆ ಮಾಡುತ್ತೇನೆ. ಇಲ್ಲ, ಚುನಾವಣಾ ಪ್ರಚಾರ ಮಾಡಬೇಕು ಎಂದರೆ ಅದನ್ನೂ ಮಾಡುತ್ತೇನೆ. ಆದರೆ, ಸ್ಪಷ್ಟವಾಗಿ ಹೇಳುತ್ತೇನೆ, ಯಾವ ಕ್ಷೇತ್ರ ಅಂತ ಇದುವರೆಗೂ ಚರ್ಚೆ ಮಾಡಿಲ್ಲ' ಎಂದು ತಿಳಿಸಿದರು.

'ನನಗೆ ಹಾವೇರಿ, ಬೆಳಗಾವಿ ಬೇರೆ ಬೇರೆ ತಾಲೂಕಿನಿಂದ ನಮ್ಮಲ್ಲಿಗೆ ಬನ್ನಿ ಎಂಬ ಬೆಂಬಲದ ಕರೆ ಬರುತ್ತಿದೆ. ಹಾಗೆಯೇ ಧಾರವಾಡದಲ್ಲಿಯೇ ನಾನು ಇರಬೇಕೆಂಬುದು ಇಲ್ಲಿನ ನಾಗರಿಕರು, ನಮ್ಮ ಪಕ್ಷದ ಕಾರ್ಯಕರ್ತರ ಒತ್ತಡವೂ ಆಗಿದೆ. ಹೀಗಾಗಿ ಇದೆಲ್ಲವನ್ನೂ ನಾನು ಪಕ್ಷದ ವರಿಷ್ಠರಿಗೆ ಬಿಡುತ್ತೇನೆ. ಎಲ್ಲಿ ಸ್ಪರ್ಧೆ ಮಾಡಬೇಕು, ಬೇಡ ಎನ್ನುವುದು ಅವರಿಗೆ ಬಿಟ್ಟಿದ್ದು' ಎಂದರು.

'ರಾಜಕೀಯದಲ್ಲಿ ಹೇಗೆಲ್ಲಾ ಬದಲಾವಣೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಿಂದೆ 2-3 ಸಲ ಲೋಕಸಭೆಗೆ ಹೋಗಲು ಅವಕಾಶ ಬಂದಾಗ ನಾನು ಹೋಗಲಿಲ್ಲ. 1991ರಲ್ಲಿ ನಾನು ರಾಜಕೀಯಕ್ಕೆ ಪ್ರವೇಶಿಸಿ 3 ವರ್ಷ ಕಳೆದ ಸಮಯದಲ್ಲೇ ನನಗೆ ಟಿಕೆಟ್​ ಕೊಟ್ಟಿದ್ದರು. ಆಗ ಹಿರಿಯ ಮುಖಂಡ ಬಂದರೂ ಹೇಳಿ ಅವರಿಗೆ ಟಿಕೆಟ್​ ನೀಡಿದ್ದರು. ಕೂಡಲೇ ನಾನು ಅದರಿಂದ ಹಿಂದೆ ಸರಿದೆ. ಅದಾಗಿ 2004ರಲ್ಲಿ ಚುನಾವಣೆಗೆ ಅವಕಾಶ ಬಂದಿತ್ತು. ಆದರೆ ಆಗ ನಾನು ಆಸಕ್ತಿ ತೋರಿಸಿರಲಿಲ್ಲ. ಇದೇ ರೀತಿ ಬೇರೆ ಸಂದರ್ಭದಲ್ಲಿಯೂ ಅವಕಾಶಗಳು ಬಂದಿದ್ದವು. ಆಗ ನಾನು ಲೋಕಸಭೆಗೆ ಹೋಗುವ ನಿರ್ಧಾರ ಮಾಡಿರಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಜನರ ಒತ್ತಡವಿದೆ. ಏನು ಆಗುತ್ತದೆ ಅನ್ನುವುದನ್ನು ಮುಂದೆ ನೋಡೋಣ'' ಎಂದು ಹೇಳಿದರು.

ತ್ರಿಚಕ್ರ ವಾಹನ ವಿತರಣೆ
ತ್ರಿಚಕ್ರ ವಾಹನ ವಿತರಣೆ

ತ್ರಿಚಕ್ರ ವಾಹನ ವಿತರಣೆ: ವಿಧಾನಪರಿಷತ್​ ಸದಸ್ಯ ಪ್ರದೀಪ್​ ಶೆಟ್ಟರ್​ ಅವರು ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ 2021-22 ನೇ ಸಾಲಿನ ವಿಶೇಷಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಧಾರವಾಡ ಜಿಲ್ಲೆಯ 12, ಹಾವೇರಿ ಜಿಲ್ಲೆಯ ಇಬ್ಬರು ಹಾಗೂ ಗದಗ ಜಿಲ್ಲೆಯ ಇಬ್ಬರು ವಿಶೇಷಚೇತನರಿಗೆ ವಾಹನ ವಿತರಿಸಲಾಯಿತು. ವಿಶೇಷಚೇತನರಿಗೆ ಉದ್ಯೋಗ, ಇನ್ನಿತರೆ ಕಾರ್ಯಗಳಿಗೆ ಅನುಕೂಲವಾಗಲಿ ಎಂದು ವಿಧಾನಪರಿಷತ್​ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದರು.

ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್, ನಾಗೇಶ್ ಕಲಬುರ್ಗಿ, ಮಲ್ಲಿಕಾರ್ಜುನ್ ಸಾವಕಾರ, ಮಹೇಶ ದ್ಯಾವಪ್ಪನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಗ್ಯಾರಂಟಿ ವಿಫಲ, ಮೋದಿ ಗ್ಯಾರಂಟಿ‌ ಬಗ್ಗೆ ಜನರಿಗೆ ವಿಶ್ವಾಸ: ದೇವೇಂದ್ರ ಫಡ್ನವಿಸ್

Last Updated : Mar 13, 2024, 12:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.