ETV Bharat / state

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ; ಗಂಡನ ಮನೆಯವರ ವಿರುದ್ಧ ಪ್ರಕರಣ - Housewife suicide - HOUSEWIFE SUICIDE

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವವೊಂದು ಪತ್ತೆಯಾಗಿದ್ದು, ಗಂಡನ ಮನೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.

HOUSEWIFE SUICIDE
ಸಂಗ್ರಹ ಚಿತ್ರ (IANS)
author img

By ETV Bharat Karnataka Team

Published : May 17, 2024, 7:04 PM IST

ಬೆಂಗಳೂರು : ವಿವಾಹಿತ ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಗುರುವಾರ ರಾತ್ರಿ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ. ಸಂಧ್ಯಾ (31) ಮೃತ ಮಹಿಳೆಯಾಗಿದ್ದು, ಆಕೆಯ ಪತಿ ಜಯಪ್ರಕಾಶ್ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ.

ಐದು ವರ್ಷಗಳ ಹಿಂದೆ ಜಯಪ್ರಕಾಶ್ ಹಾಗೂ ಸಂಧ್ಯಾಗೆ ವಿವಾಹವಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗನಿದ್ದು, ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಇದೇ ಕಾರಣಕ್ಕೆ ಜಯಪ್ರಕಾಶ್ ಹಾಗೂ ಆತನ ಕುಟುಂಬದವರು ಸಂಧ್ಯಾಳನ್ನ ನಿಂದಿಸುತ್ತಿದ್ದರು ಎಂದು ಆರೋಪಿಸಲಾಗಿದೆ‌. ಅಲ್ಲದೇ ಕಳೆದ ಒಂದು ವರ್ಷದ ಹಿಂದೆ ಗರ್ಭಪಾತವಾಗಿದ್ದರಿಂದ ದೈಹಿಕವಾಗಿ ದಪ್ಪವಾಗಿದ್ದ ಸಂಧ್ಯಾಳನ್ನ ಆಕೆಯ ಪತಿ ಅವಮಾನಿಸುತ್ತಿದ್ದು, ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ಬೇಸತ್ತ ಸಂಧ್ಯಾ ಗುರುವಾರ ರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಜಯಪ್ರಕಾಶ್ ಹಾಗೂ ಆತನ ಕುಟುಂಬದವರ ಕಿರುಕುಳದಿಂದ ಸಂಧ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ತಂದೆ ಆರೋಪಿಸುತ್ತಿದ್ದಾರೆ.

ಮೃತಳ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರನಗರ ಠಾಣಾ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ‌.

ಇದನ್ನೂ ಓದಿ: ಮಕ್ಕಳಾಗಿಲ್ಲ ಎಂಬ ಕೊರಗಿನಿಂದ ದಾವಣಗೆರೆಯಲ್ಲಿ ವ್ಯಕ್ತಿ ಆತ್ಮಹತ್ಯೆ: ಚಾಮರಾಜನಗರದಲ್ಲಿ ಇಬ್ಬರ ಶವ ಪತ್ತೆ - Man Commits Suicide

ETV Bharat Logo

Copyright © 2025 Ushodaya Enterprises Pvt. Ltd., All Rights Reserved.