ETV Bharat / state

ಕೆಫೆ ಸ್ಫೋಟ: ಆರೋಪಿಯ ಮಾಹಿತಿ ಸಿಕ್ಕಿದೆ, ಆದಷ್ಟು ಬೇಗ ಬಂಧನ- ಗೃಹ ಸಚಿವ ಪರಮೇಶ್ವರ್ - ಬೆಂಗಳೂರು ಕೆಫೆ ಸ್ಫೋಟ​ ಪ್ರಕರಣ

ಕೆಫೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯ ಕುರಿತು ಬೆಂಗಳೂರಿನಲ್ಲಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿದರು.

Bengaluru Blast case  Home Minister G Parameshwar  accused identified  ಬೆಂಗಳೂರು ಬ್ಲಾಸ್ಟ್​ ಪ್ರಕರಣ  ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್ ಹೇಳಿಕೆ
author img

By ETV Bharat Karnataka Team

Published : Mar 3, 2024, 1:33 PM IST

ಗೃಹ ಸಚಿವ ಪರಮೇಶ್ವರ್ ಹೇಳಿಕೆ

ಬೆಂಗಳೂರು: ಕೆಫೆಯಲ್ಲಿ ಬಾಂಬ್ ಸ್ಫೋಟ ಮಾಡಿದ ವ್ಯಕ್ತಿಯ ಮಾಹಿತಿ ಸಿಕ್ಕಿದೆ. ಆರೋಪಿಯನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, 8 ತಂಡಗಳನ್ನು ರಚನೆ ಮಾಡಿದ್ದೇವೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದೇವೆ ಎಂದರು.

ವಿಧಿ ವಿಜ್ಞಾನ ಸಿಬ್ಬಂದಿ ಈಗಾಗಲೇ ಮಾದರಿ ಸಂಗ್ರಹಿಸಿ ತಾಂತ್ರಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಒಂದೆರಡು ದಿನ ತಡವಾದ್ರೂ ಖಂಡಿತವಾಗಿ ಆರೋಪಿಯನ್ನು ಬೆಂಗಳೂರು ಕೆಫೆ ಸ್ಫೋಟ: ತನಿಖೆಗೆ ಸವಾಲಾದ ಆರೋಪಿ ಬಳಸಿಕೊಂಡ ಸಮಯ ಹಿಡಿಯುತ್ತೇವೆ. ಆತ ಯಾವುದಾದರೂ ಸಂಘಟನೆಗೆ ಸೇರಿದ್ದಾನೋ ಅಥವಾ ಬೇರೆ ಕಾರಣಗಳಿಂದ ಈ ಸ್ಫೋಟ​ ನಡೆಸಿದ್ದಾನೋ ಎಂದು ತನಿಖೆ ಮಾಡುತ್ತೇವೆ ಎಂದು ಹೇಳಿದರು.

ಹೊಟೇಲ್​ನವರು ಈ ವ್ಯವಹಾರದಲ್ಲಿ ಯಶಸ್ವಿಯಾಗಿದ್ದಾರೆ. 11 ಕಡೆ ಹೊಟೇಲ್ ಪ್ರಾರಂಭ ಮಾಡಿದ್ದಾರೆ. 12ನೇ ಕಡೆ ಓಪನ್ ಮಾಡುತ್ತಿದ್ದರು. ಇದನ್ನು ಸಹಿಸಲಾರದವರು ಈ ರೀತಿ ಮಾಡಿರಬಹುದು ಅಂತ ಜನ ಹೇಳುತ್ತಿದ್ದಾರೆ. ಆ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಇದಲ್ಲದೆ ಚುನಾವಣೆ ಹತ್ತಿರ ಬರುತ್ತಿದೆ. ಯಾವುದಾದರೂ ಸಂಘಟನೆ ಬೆಂಗಳೂರನ್ನು ಅನ್‌ಸೇಫ್ ನಗರ ಮಾಡಬೇಕು ಅಂತ ಹೀಗೆ ಮಾಡಿದ್ರಾ ಎಂದು ತನಿಖೆಯಾಗಬೇಕು. ಬೆಂಗಳೂರಿಗೆ ಹೂಡಿಕೆದಾರರು ಬರ್ತಿದ್ದಾರೆ. ಈ ಸಂದರ್ಭದಲ್ಲಿ ಹೀಗಾದರೆ ಬಂಡವಾಳ ಹಾಕುವವರು ಬರಲ್ಲ. ಈ ರೀತಿಯ ಅನುಮಾನವೂ ಕಾಡುತ್ತಿದೆ ಎಂದರು.

ಈ ಸ್ಫೋಟಕ್ಕೂ ಬೇರೆ ಸ್ಫೋಟಕ್ಕೂ ಸಾಮ್ಯತೆ ಇದೆಯೇ ಎಂಬ ಪ್ರಶ್ನೆಗೆ, ಮಂಗಳೂರು ಕುಕ್ಕರ್ ಸ್ಫೋಟಕ್ಕೂ ಈ ಸ್ಫೋಟಕ್ಕೂ ಸಾಮ್ಯತೆ ಇದೆ. ಹಾಗಂತ ಅವರೇ ಮಾಡಿದ್ದಾರೆ ಎಂಬುದು ಇದರರ್ಥವಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆ ‌ಕೊಡ್ತಿದ್ದಾರೆ. ಈ ಬಗ್ಗೆ ಸಿಎಂ ಅಥವಾ ನಾನು ಹೇಳಿದ್ರೆ ಮಾತ್ರ ಅಧಿಕೃತ ಹೇಳಿಕೆ ಅಂತ ಪರಿಗಣಿಸಬೇಕು ಎಂದು ಹೇಳಿದರು.

NIA, NSG ವತಿಯಿಂದಲೂ ತನಿಖೆ: NIA, NSGಯವರು ಬಂದು ತನಿಖೆ ಮಾಡ್ತಿದ್ದಾರೆ. ರಾಷ್ಟ್ರೀಯ ಸಂಘಟನೆಯ ಕೈವಾಡ ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅವರಿಗೆ ಇಂತಹ ಘಟನೆ ಬಗ್ಗೆ ಯಾವ ಸಂಘಟನೆ ಅಂತ ಮಾಹಿತಿ ಇರುತ್ತದೆ. ಬಾಂಬ್ ತೀವ್ರತೆ ಬಹಳ ಕಡಿಮೆ ಇದೆ. ಹೀಗಾಗಿ‌ ದೊಡ್ಡ ಅನಾಹುತ ಆಗಿಲ್ಲ ಎಂದರು.

FSL ವರದಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ: ಪಾಕಿಸ್ತಾನ ಪರ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿ, FSL ರಿಪೋರ್ಟ್ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಕಾಲದಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಹೇಳಿದ್ರೆ ಸುಮ್ಮನೆ ರಾಜಕೀಯ ಆಗುತ್ತದೆ.‌ ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಆಯ್ತು, ಅವಾಗ ಯಾರಿದ್ರು?. 2008ರಲ್ಲಿ ಸೀರಿಸ್ ಬ್ಲಾಸ್ಟ್ ಆಯ್ತು, ಯಾರಿದ್ರು?. ಹೇಳಬೇಕು ಅಂದ್ರೆ ನಾವು ಹೇಳ್ತೀವಿ ಆದರೆ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬೆಂಗಳೂರು ಕೆಫೆ ಸ್ಫೋಟ: ತನಿಖೆಗೆ ಸವಾಲಾದ ಆರೋಪಿ ಬಳಸಿಕೊಂಡ ಸಮಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.