ETV Bharat / state

ಶಾಲಾ ಪ್ರವೇಶದಲ್ಲಿ ಅವಕಾಶ ನೀಡುವುದು ಒಂದು ಸ್ಥಾಪಿತ ಹಕ್ಕು ಎಂದು ಪರಿಗಣಿಸಲಾಗದು: ಹೈಕೋರ್ಟ್ - HIGH COURT

ಶಾಲಾ ಪ್ರವೇಶಾತಿಯಲ್ಲಿ ಅವಕಾಶ ನೀಡುವುದನ್ನು ಒಂದು ಸ್ಥಾಪಿತ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

HIGH COURT
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Nov 14, 2024, 6:48 PM IST

ಬೆಂಗಳೂರು: ಶಾಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದನ್ನು ಒಂದು ಆದ್ಯತೆಯ ಹಕ್ಕು ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಏಕಸದಸ್ಯ ಪೀಠದ ಅಭಿಪ್ರಾಯವನ್ನು ಅಂಗೀಕರಿರುವ ಹೈಕೋರ್ಟ್, ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್​ಸಿ) ನಿವೃತ್ತ ನೌಕರರ ಮೊಮ್ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶಕ್ಕೆ ಅವಕಾಶ ನಿರಾಕರಿಸಿರುವ ಕ್ರಮ ಎತ್ತಿಹಿಡಿದಿದೆ.

ಐಐಎಸ್​ಸಿಯ ನಿವೃತ್ತ ನೌಕರರ ಮೊಮ್ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶಕ್ಕೆ ಅವಕಾಶ ನೀಡದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ, ಮಾಸ್ಟರ್ ಶಮಂತ್ ಮತ್ತಿತರರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಮೇಲ್ಮನವಿದಾರರ ಅಂಶ ಪರಿಗಣಿಸಲಾಗದು: 2023 - 24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಾಜಿ ನೌಕರರರ ಮೊಮ್ಮಕ್ಕಳನ್ನು ಕೇಂದ್ರೀಯ ವಿದ್ಯಾಲಯಕ್ಕೆ ಸೇರಿಸಿಕೊಳ್ಳುವುದಕ್ಕೆ ಅವಕಾಶವಿತ್ತು ಎಂಬ ಅರ್ಜಿದಾರರ ಮನವಿ ತಿರಸ್ಕರಿಸಿರುವ ನ್ಯಾಯಪೀಠ, ಹಿಂದಿನ ವರ್ಷದ ಮಾರ್ಗಸೂಚಿಗಳಲ್ಲಿ ಹೊಸದಾಗಿ ಹೊರಡಿಸಿರುವ(2024-25ನೇ ಸಾಲಿನ) ಮಾರ್ಗಸೂಚಿಗಳಲ್ಲಿ ಅದಕ್ಕೆ ಅವಕಾಶ ಇಲ್ಲದಿದ್ದಾಗ ಮೇಲ್ಮನವಿದಾರರು ಕೋರಿರುವ ಅಂಶಗಳನ್ನು ಪರಿಗಣಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ಹೇಳಿದೆ.

2024-25ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಿಯಂತ್ರಿಸುವ ಮಾರ್ಗಸೂಚಿಗಳಲ್ಲಿ ಅಂತಹ ಆದ್ಯತೆಯನ್ನು ನಿರ್ದಿಷ್ಟವಾಗಿ ಒದಗಿಸದಿದ್ದಾಗ ಮೇಲ್ಮನವಿದಾರರ ಪ್ರವೇಶವನ್ನು 2023-24ರ ಮಾರ್ಗಸೂಚಿಗಳ ಅಡಿ ಪರಿಗಣಿಸಲಾಗುವುದಿಲ್ಲ ಎಂದು ಪೀಠ ಹೇಳಿದೆ.

ಮೇಲ್ಮನವಿದಾರರು 2024-25ರ ಮಾರ್ಗಸೂಚಿಗಳನ್ನು ಪ್ರಶ್ನಿಸಿಲ್ಲ. ಹೀಗಾಗಿ, ಮೊಮ್ಮಕ್ಕಳನ್ನು ಆದ್ಯತೆಯಿಂದ ಹೊರಗಿಡುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಹಸ್ತಕ್ಷೇಪದ ಅಗತ್ಯವಿಲ್ಲ: ಅಲ್ಲದೇ, ಪ್ರವೇಶಕ್ಕೆ ಪರಿಗಣನೆಗೆ ಪಟ್ಟಭದ್ರ ವಿಷಯವೆಂದು ಹೇಳಲಾಗುವುದಿಲ್ಲ ಮತ್ತು 2024-25ನೇ ಸಾಲಿಗೆ ಹೊರಡಿಸಿದ ಮಾರ್ಗಸೂಚಿಗಳಲ್ಲಿ ಅಂತಹ ಆದ್ಯತೆ ಒದಗಿಸದಿದ್ದಾಗ ಕೋಟಾ ವಿಸ್ತರಿಸಲಾಗುವುದಿಲ್ಲ ಎಂದು ಏಕಸದಸ್ಯ ಪೀಠ ತಿಳಿಸಿದೆ. ಅಲ್ಲದೇ, ಏಕಸದಸ್ಯ ಪೀಠ 2024-25ರ ಮಾರ್ಗಸೂಚಿಗಳಲ್ಲಿನ ಬದಲಾವಣೆ ಸಂಬಂಧ ನೀಡಿರುವ ಆದೇಶದಲ್ಲಿ ಯಾವುದೇ ದೋಷವಿಲ್ಲ. ಈ ನಿಟ್ಟಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: 2023-24ನೇ ಸಾಲಿನಲ್ಲಿ ಅಜ್ಜಿ-ತಾತಂದಿರ ಪ್ರಾಯೋಜಕ ಕೋಟಾದಲ್ಲಿ (ಗ್ರ್ಯಾಂಡ್ ಪೇರೆಂಟ್ಸ್ ಕೋಟಾ) ಕೇಂದ್ರೀಯ ವಿದ್ಯಾಲಯಕ್ಕೆ ಪ್ರವೇಶದಲ್ಲಿ ಆದ್ಯತೆ ನೀಡಲಾಗಿತ್ತು. ಅದೇ ರೀತಿಯಲ್ಲಿ 2024-25ನೇ ಶೈಕ್ಷಣಿಕ ವರ್ಷಕ್ಕೆ ಅಜ್ಜಿ- ತಾತಂದಿರ ಪ್ರಾಯೋಜಕ ಕೋಟಾದಲ್ಲಿ (ಗ್ರ್ಯಾಂಡ್ ಪೇರೆಂಟ್ಸ್ ಕೋಟಾ) ಕೇಂದ್ರೀಯ ವಿದ್ಯಾಲಯಕ್ಕೆ ಪ್ರವೇಶದಲ್ಲಿ ಆದ್ಯತೆ ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.

ವಿಚಾರಣೆ ವೇಳೆ ಮೇಲ್ಮನವಿ ಅರ್ಜಿದಾರರ ಪರ ವಕೀಲರು, ''2023-24ರ ಶೈಕ್ಷಣಿಕ ವರ್ಷದ ಮಾರ್ಗಸೂಚಿಗಳ ಪ್ರಕಾರ ಐಐಎಸ್​ಸಿ ನಿವೃತ್ತ ನೌಕರರ ಮೊಮ್ಮಕ್ಕಳಿಗೆ ಶಾಲೆ ಪ್ರವೇಶಕ್ಕೆ ಆದ್ಯತೆ ಒದಗಿಸಲಾಗಿದೆ. ಅದೇ ರೀತಿಯಲ್ಲಿ 2024-25ನೇ ಸಾಲಿನಲ್ಲಿಯೂ ಅವಕಾಶ ಕಲ್ಪಿಸಬೇಕು'' ಎಂದು ಕೋರಿದರು.

ಅಲ್ಲದೆ, ಹಿಂದಿನ ಶೈಕ್ಷಣಿಕ ವರ್ಷಗಳನ್ನು ಕೇಂದ್ರೀಯ ವಿದ್ಯಾಲಯದ ನಿಯಂತ್ರಿಸುವ ಮಾರ್ಗಸೂಚಿಗಳಲ್ಲಿ ಸೇವೆಯಲ್ಲಿರುವ ನಿವೃತ್ತ ಉದ್ಯೋಗಿಗಳ ಮೊಮ್ಮಕ್ಕಳಿಗೆ ಆದ್ಯತೆ ನೀಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಮೇಲ್ಮನವಿದಾರರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರದ ಪರ ವಕೀಲರು, ''ವರ್ಗಾವಣೆಯಾಗಬಹುದಾದ ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ಶೈಕ್ಷಣಿಕ ಅಗತ್ಯತೆಗಳನ್ನು ಒದಗಿಸಲಾಗಿದೆ. ಮತ್ತು ಇತರ ಉದ್ದೇಶಗಳನ್ನು ಪೂರೈಸಲಾಗಿದೆ'' ಎಂದು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದರು.

''ದೇಶದಾದ್ಯಂತ ಪ್ರಸಿದ್ದ ಶಿಕ್ಷಣ ತಜ್ಞರು ಮತ್ತು ಆಡಳಿತಾರರನ್ನು ಒಳಗೊಂಡಿರುವ ಆಡಳಿತ ಮಂಡಳಿ ಸಲಹೆಯನ್ನು ಆಧರಿಸಿ ಮಾರ್ಗಸೂಚಿಗಳನ್ನು ರಚನೆ ಮಾಡಿದ್ದು, 2023-24 ಮತ್ತು 2024-25ರ ಮಾರ್ಗಸೂಚಿಗಳನ್ನು ಬದಲಾಯಿಸಲಾಗಿದೆ. ಅದರಂತೆ ನಿವೃತ್ತ ನೌಕರರರ ಮೊಮ್ಮಕ್ಕಳಿಗೆ ಆದ್ಯತೆ ನೀಡಲಾಗಿಲ್ಲ. ಹೀಗಾಗಿ, ಮೇಲ್ಮನವಿ ವಜಾಗೊಳಿಸಬೇಕು'' ಎಂದು ಕೋರಿದ್ದರು.

ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌: ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆ ನ.23ಕ್ಕೆ ನಿಗದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.