ETV Bharat / state

ತಗ್ಗದ ಮಳೆಯ ಅಬ್ಬರ - ಹಳ್ಳದಲ್ಲಿ ಕೊಚ್ಚಿಹೋದ ಕಾರು; ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಯೆಲ್ಲೋ ಅಲರ್ಟ್ - BENGALURU RAINS

ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಮತ್ತೆ ಯೆಲ್ಲೋ ಅಲರ್ಟ್ ಘೋಷಿಸಿದೆ.

BENGALURU RAINS
ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆ (IANS - ETV Bharat)
author img

By ETV Bharat Karnataka Team

Published : Oct 22, 2024, 10:10 AM IST

Updated : Oct 22, 2024, 11:16 AM IST

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ,ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ.

ನಗರದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕು ದಿನ ಇನ್ನಷ್ಟು ಬಿರುಸಾಗಿ ಸುರಿಯಲಿದೆ. 22ರಿಂದ 24ರವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್​ನಲ್ಲೂ ಮಳೆಯಾಗಲಿದೆ.

ಕದ್ರಾ, ಕುಂದಾಪುರ, ಮುಂಡಗೋಡು, ಹಿರೇಕೆರೂರು, ಹೊನ್ನಾಳಿ, ಕಾರವಾರ, ಶಿವಮೊಗ್ಗ, ಚಿತ್ರದುರ್ಗ, ಆನವಟ್ಟಿ, ಕಿರವತ್ತಿ, ಹೊನ್ನಾವರ, ಹುಂಚದಕಟ್ಟೆ, ಶ್ರವಣಬೆಳಗೊಳ, ದಾವಣಗೆರೆ, ಕುಣಿಗಲ್, ಬನವಾಸಿ, ಜಯಪುರ, ಶ್ರೀರಂಗಪಟ್ಟಣ, ತರೀಕೆರೆ, ನಾಯಕನಹಟ್ಟಿ, ಎನ್​ಆರ್​ಪುರ, ತರೀಕೆರೆ, ಗೇರುಸೊಪ್ಪ, ಗೋಕರ್ಣದಲ್ಲಿ ಉತ್ತಮ ಮಳೆಯಾಗಿದೆ.

ಎಲ್ಲೆಲ್ಲಿ ಎಷ್ಟು ಉಷ್ಣಾಂಶ?: ಬೆಂಗಳೂರಿನಲ್ಲಿ ಹೆಚ್​ಎಎಲ್​ನಲ್ಲಿ 29.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.2ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30.1 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹಳ್ಳದಲ್ಲಿ ಕೊಚ್ಚಿಹೋದ ಕಾರು: ಚಿತ್ರದುರ್ಗ ಜಿಲ್ಲೆಯ ಹಲವೆಡೆ ಕಳೆದ ರಾತ್ರಿ ಭಾರೀ ಮಳೆ ಸುರಿದಿದೆ. ಜಿಲ್ಲೆಯ ನಾಯಕನಹಟ್ಟಿ ಗ್ರಾಮದ ಬಳಿಯ ಐತಿಹಾಸಿಕ ಚಿಕ್ಕಕೆರೆ ಕೋಡಿಬಿದ್ದ ಪರಿನಾಮ ಹಳ್ಳದಲ್ಲಿ ಕಾರೊಂದು ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಕಾರಲ್ಲಿದ್ದ ತಿಪ್ಪೇಸ್ವಾಮಿ, ನಿತಿನ್, ಮಲ್ಲಿಕಾರ್ಜುನ, ಬೋರೇಶ ಎಂಬ ನಾಲ್ವರು ಯುವಕರು ಬಚಾವಾಗಿದ್ದಾರೆ. ಮಳೆಯಿಂದ ನಾಯಕನಹಟ್ಟಿ- ದೇವರಹಟ್ಟಿ ಹಾಗೂ ನಾಯಕನಹಟ್ಟಿ-ಜಗಳೂರು ನಡುವಿನ ಸಂಪರ್ಕ ಕಡಿತಗೊಂಡಿದೆ.

ಭಾರೀ ಮಳೆಗೆ ನಾಯಕನಹಟ್ಟಿಯ ಪೊಲೀಸ್ ಠಾಣೆ ಕೂಡ ಜಲಾವೃತವಾಗಿದೆ. ಠಾಣೆ ಆವರದಲ್ಲಿ ನಿಂತ ಪೊಲೀಸರ ಜೀಪ್ ಅರ್ಧಭಾಗ ಮುಳುಗಿದೆ. ಪೊಲೀಸ್ ಠಾಣೆಯ ಒಳಗೂ ಮಳೆ ನೀರು ನುಗ್ಗಿದ್ದು, ಠಾಣೆಯೊಳಗಿನ ಕುರ್ಚಿ, ಟೇಬಲ್ ಸ್ಥಳಾಂತರಿಸಲು ಪೊಲೀರು ಹರಸಾಹಸ ಪಡುತ್ತಿದ್ದಾರೆ. ತಿಪ್ಪೇರುದ್ರಸ್ವಾಮಿ ಹೊರಮಠ ಕೂಡ ಜಲಾವೃತವಾಗಿದೆ.

ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರ: ಈರುಳ್ಳಿ, ಶೇಂಗಾ, ಹತ್ತಿ ಬೆಳೆ ಮಣ್ಣುಪಾಲು

Last Updated : Oct 22, 2024, 11:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.