ETV Bharat / state

ರಾಜ್ಯವನ್ನು ವಾಮ ಮಾರ್ಗ, ಮೋಸದಿಂದ ಸ್ಥಿರಗೊಳಿಸುವ ಸರ್ಕಾರ ಕಾಂಗ್ರೆಸ್​: ಹೆಚ್​.ಡಿ. ಕುಮಾರಸ್ವಾಮಿ

ರಾಜ್ಯ ಕಾಂಗ್ರೆಸ್​ ಸರ್ಕಾರ ಪತ್ರಿಕೆಯಲ್ಲಿ ನೀಡಿದ ಜಾಹೀರಾತನ್ನು ಟೀಕಿಸಿರುವ ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಅವರು ಕರ್ನಾಟಕವನ್ನು ವಾಮ ಮಾರ್ಗ, ಮೋಸದಿಂದ ಸ್ಥಿರಗೊಳಿಸುವ ಸರ್ಕಾರ ಕಾಂಗ್ರೆಸ್ ಎಂದು ಆರೋಪಿಸಿದ್ದಾರೆ.

author img

By ETV Bharat Karnataka Team

Published : 4 hours ago

Etv Bharat
Etv Bharat (Etv Bharat)

ಮೈಸೂರು: ಕೇಂದ್ರ ಸಚಿವರಾದ ಬಳಿಕ ಎರಡನೇ ಬಾರಿ ಹೆಚ್​.ಡಿ. ಕುಮಾರಸ್ವಾಮಿ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. "ಇವತ್ತು ನವರಾತ್ರಿಯ ಕೊನೆಯ ದಿನ. ತಾಯಿ ಚಾಮುಂಡೇಶ್ವರಿ ಅಮ್ಮನ ದರ್ಶನ ಪಡೆದು, ನಾಡಿನ ಜನತೆಗೆ ಒಳ್ಳೆಯದಾಗಲು ಮತ್ತು ಬಡವರ ಪರವಾಗಿ ಉತ್ತಮ ಕೆಲಸವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಶಕ್ತಿ ನೀಡುವಂತೆ ಕೇಳಿದ್ದೇನೆ" ಎಂದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್​ಡಿಕೆ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯ್ದರು.

ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆ. (ETV Bharat)

ರಾಜ್ಯವನ್ನು ವಾಮ ಮಾರ್ಗ, ಮೋಸದಿಂದ ಸ್ಥಿರಗೊಳಿಸುವ ಸರ್ಕಾರ ಇದು: "ರಾಜ್ಯ ಕಾಂಗ್ರೆಸ್​ ಪಕ್ಷ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪತ್ರಿಕೆಗಳಲ್ಲಿ ದೊಡ್ಡದಾಗಿ ಜಾಹೀರಾತುಗಳನ್ನು ಹಾಕಿದ್ದಾರೆ. ದುಷ್ಟ ಶಕ್ತಿಯ ಎದುರು ಸತ್ಯತೆಯ ಜಯ. ಕರ್ನಾಟಕ ರಾಜ್ಯವನ್ನು ವಾಮ ಮಾರ್ಗ ಹಾಗೂ ಮೋಸದಿಂದ ಅಸ್ಥಿರಗೊಳಿಸುವ ಸರ್ಕಾರ ಅಂತ ಇದೆ. ಆದರೆ ನನ್ನ ಅಭಿಪ್ರಾಯದಲ್ಲಿ ರಾಜ್ಯವನ್ನು ವಾಮ ಮಾರ್ಗ, ಮೋಸದಿಂದ ಸ್ಥಿರಗೊಳಿಸುವ ಸರ್ಕಾರ ಇದು. ಯಾವ ಸತ್ಯ ಧರ್ಮವನ್ನು ಉಳಿಸಿದ್ದೀರಿ? ಇದನ್ನು ಸಿದ್ದರಾಮಯ್ಯ ಅವರಿಗೆ ಕೇಳಲು ಬಯಸುತ್ತೇನೆ" ಎಂದು ಪ್ರಶ್ನಿಸಿದರು.

ಚಾಮುಂಡಿ ತಾಯಿ ದರ್ಶನ ಪಡೆಯುತ್ತಿರುವ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ
ಚಾಮುಂಡಿ ತಾಯಿ ದರ್ಶನ ಪಡೆಯುತ್ತಿರುವ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ (ETV Bharat)

ಮುಡಾ ಸೈಟ್​​ ಸರ್ಕಾರದ್ದೇ ಹೊರತು ಅವರ ಮನೆಯದ್ದಲ್ಲ: "ಮುಡಾ ಪ್ರಕರಣದಲ್ಲಿ 15 'ಸರ್ಕಾರಿ' ಸೈಟನ್ನು ಸಿದ್ದರಾಮಯ್ಯ ಅವರು ವಾಪಸ್​​ ಮಾಡಿದ್ದಾರೆಯೇ ಹೊರತು ಅವರ ಮನೆಯದ್ದನ್ನಲ್ಲ. ಸರ್ಕಾರಕ್ಕೆ ಮೋಸ ಮಾಡಿ ಅವರು ತೆಗೆದುಕೊಂಡಿದ್ದರು. ಪರಿಸ್ಥಿತಿಗಳು ಯಾವಾಗ ಕೋರ್ಟ್​ನಲ್ಲಿ ವ್ಯತಿರಿಕ್ತವಾಗಿ ಬಂತೋ ಆಗ ಸೈಟ್​​ ಕೊಟ್ಟಿದ್ದೇವೆ ಅಂತ ತೋರಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇನಕಲ್ ಸಾಕಮ್ಮನ ಕೇಳಿದ್ರೆ ಗೊತ್ತಾಗುತ್ತದೆ" ಎಂದರು.

ಕೋವಿಡ್​ ಹಗರಣಕ್ಕೆ ಎಸ್​ಐಟಿ ವಿಚಾರ: "ನಿನ್ನೆ ಕ್ಯಾಬಿನೆಟ್​ನಲ್ಲಿ ಕೋವಿಡ್​ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತೇವೆ, ಎಸ್​ಐಟಿ ರಚನೆ ಮಾಡುತ್ತೇವೆ ಎಂದು ಕಾಂಗ್ರೆಸ್​​ ನಾಯಕರು ಎಂದಿದ್ದಾರೆ. ಅದಕ್ಕೆ ನನ್ನದೇನು ತಕರಾರು ಇಲ್ಲ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದಲ್ಲಿದ್ದಾಗ ಕೋವಿಡ್​ ಸಮಯದಲ್ಲಿ ಆದಂತಹ ವೈಫಲ್ಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಂತಹ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷ ಸರ್ಕಾರವಾಗಿ ರಚನೆ ಆಗಿ 15 ತಿಂಗಳುಗಳಾಯಿತು. ಇಲ್ಲಿಯವರೆಗೆ ಏನು ಮಾಡದೇ ಇದ್ದಂತವರು ಈಗ ತರಾತುರಿಯಲ್ಲಿ ಏನೇನೋ ಮಾಡಲು ಹೊರಟಿದ್ದಾರೆ. ಎಷ್ಟರ ಮಟ್ಟದಲ್ಲಿ ಸಫಲರಾಗುತ್ತಾರೆ ನೋಡೋಣ" ಎಂದು ಟೀಕಿಸಿದರು.

ಹೆಚ್​.ಡಿ. ಕುಮಾರಸ್ವಾಮಿಗೆ ದೇವಾಲಯಕ್ಕೆ ಭೇಟಿ ನೀಡುವ ವೇಳೆ ಹುಣಸೂರು ಶಾಸಕ ಹರೀಶ್ ಗೌಡ, ಎಂಎಲ್ಸಿ ಮಂಜೇಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್ ನಾಯಕರು ಸಾಥ್ ನೀಡಿದರು.

ಇದನ್ನೂ ಓದಿ: ಕೋವಿಡ್ ಅವ್ಯವಹಾರ: ಡಿಸಿಎಂ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿ ಸಿಎಂ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.