ETV Bharat / state

ಬೆಳಗಾವಿಯಲ್ಲಿ ಖಾದಿ ಉತ್ಸವ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬಿಗ್ ರೆಸ್ಪಾನ್ಸ್: 4 ದಿನಗಳಲ್ಲಿ 1.3 ಕೋಟಿ ವ್ಯಾಪಾರ..! - KHADI FESTIVAL BELAGAVI

ಅಸ್ಮಿತೆ ಮಾರಾಟ ಮೇಳ, ಸರಸ್​​ ಮೇಳ 4 ದಿನಗಳಲ್ಲಿ 1.3 ಕೋಟಿ ವ್ಯಾಪಾರ ಮಾಡಿ ಕಳೆದ ಬಾರಿಯ ದಾಖಲೆ ಮುರಿದಿದೆ.

BELAGAVI  ASMITE SALE FAIR  SARAS FAIR IN BELAGAVI  ಬೆಳಗಾವಿಯಲ್ಲಿ ಖಾದಿ ಉತ್ಸವ
ಬೆಳಗಾವಿಯಲ್ಲಿ ಖಾದಿ ಉತ್ಸವ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬಿಗ್ ರೆಸ್ಪಾನ್ಸ್: 4 ದಿನಗಳಲ್ಲಿ 1.3 ಕೋಟಿ ವ್ಯಾಪಾರ..! (ETV Bharat)
author img

By ETV Bharat Karnataka Team

Published : Dec 31, 2024, 9:17 AM IST

ಬೆಳಗಾವಿ: ಕಾಂಗ್ರೆಸ್​​​​​​ ಅಧಿವೇಶನದ ಶತಮಾನೋತ್ಸವದ ನಿಮಿತ್ತ ಬೆಳಗಾವಿಯಲ್ಲಿ ಆಯೋಜಿಸಿರುವ ಅಸ್ಮಿತೆ ಮಾರಾಟ ಮೇಳ, ಸರಸ್​​ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರ ದಂಡೇ ಹರಿದು ಬರುತ್ತಿದೆ. 4 ದಿನಗಳಲ್ಲಿ ಬರೋಬ್ಬರಿ 1.03 ಕೋಟಿ ರೂ. ವ್ಯಾಪಾರ ವಹಿವಾಟು ಕಂಡು ಬಂದಿದೆ.

BELAGAVI  ASMITE SALE FAIR  SARAS FAIR IN BELAGAVI  ಬೆಳಗಾವಿಯಲ್ಲಿ ಖಾದಿ ಉತ್ಸವ
ಬೆಳಗಾವಿಯಲ್ಲಿ ಖಾದಿ ಉತ್ಸವ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ (ETV Bharat)

ಬೆಳಗಾವಿ ಸರ್ದಾರ ಮೈದಾನದಲ್ಲಿ ಡಿ.26ರಿಂದ ಜ. 4ರವರೆಗೆ ನಡೆಯುತ್ತಿರುವ ಸರಸ್ ಮೇಳ - ಖಾದಿ ಉತ್ಸವ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಜನಾಕರ್ಷಣೀಯ ಕೇಂದ್ರ ಬಿಂದುವಾಗಿ ಮಾರ್ಪಾಡಾಗಿದೆ. ಡಿ.26 ರಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಚಾಲನೆ ನೀಡಿದ್ದರು‌. ರಾಜ್ಯದ ಜಿಲ್ಲೆ, ತಾಲೂಕುಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸಿದ್ದು, ವ್ಯಾಪಾರದಲ್ಲಿ ತೊಡಗಿದ್ದಾರೆ. ಹೊರ ರಾಜ್ಯಗಳ ಖಾದಿ ಕಸಬುದಾರರು ತಮ್ಮ ಉತ್ಪನ್ನ ತಂದಿದ್ದಾರೆ. ಒಟ್ಟು 200 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, 150 ಸ್ವಸಹಾಯ ಸಂಘಗಳು, 50 ಖಾದಿ ಉತ್ಪನ್ನಗಳು ಮತ್ತು 10 ಆಹಾರ ಮಳಿಗೆಗಳು ವ್ಯಾಪಾರ ನಡೆಸುತ್ತಿವೆ.

ಸಂತಸ ಹಂಚಿಕೊಂಡ ವ್ಯಾಪಾರಿಗಳು (ETV Bharat)

ಪ್ರತಿಯೊಂದು ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ- ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳ ಮಹಾಪೂರವೇ ಹರಿದು ಬಂದಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಗ್ರಿಗಳು , ಮೊಳಕಾಲ್ಮೂರು ಸೀರೆಗಳು, ಇಳಕಲ್​ ಸೀರೆಗಳು, ರೇಷ್ಮೆ ಸೀರೆಗಳು, ವಿವಿಧ ನವಾಕರ್ಷಣೆಯ ಬಟ್ಟೆಗಳು, ನಾರಿನ ಉತ್ಪನ್ನದ ಬ್ಯಾಗ್​ಗಳು, ಮಸಾಲಾ ಉತ್ಪನ್ನಗಳು, ಸಿರಿ ಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು ಗ್ರಾಹಕರ ಸೆಳೆಯುತ್ತಿವೆ.

ಅಲ್ಲದೇ, ಬಾಳೆ ನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಔಷಧಿಯುತ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಕಂಬಳಿ, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಸೇರಿದಂತೆ ಅನೇಕ ಉತ್ಪನ್ನಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ.

ಡಿ.29ರವರೆಗೆ 4 ದಿನಗಳಲ್ಲಿ ಲಕ್ಷಕ್ಕೂ ಅಧಿಕ ಜನರು ವಸ್ತುಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು, ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಕೇವಲ 4 ದಿನಗಳಲ್ಲಿ ಒಟ್ಟು 1.03 ಕೋಟಿ ರೂ. ವ್ಯಾಪಾರ - ವಹಿವಾಟು ಆಗಿರೋದು‌ ದಾಖಲೆಯೇ ಸರಿ.

ಆಕರ್ಷಣೀಯ ಅಕ್ಕ ಕೆಫೆ: ರಾಜ್ಯ ಸರ್ಕಾರ ಬಜೆಟ್​​ನಲ್ಲಿ ಘೋಷಣೆ ಮಾಡಿರುವ ಅಕ್ಕ - ಕೆಫೆ ಕಾರ್ಯಕ್ರಮದ ಭಾಗವಾಗಿ ಈ ಮೇಳದ ಮೈದಾನದಲ್ಲಿ ಅಕ್ಕ-ಕೆಫೆ ಶೀರ್ಷಿಕೆಯಡಿ ಆಹಾರ ಕೋರ್ಟ್​ನ್ನು ತೆರೆಯಲಾಗಿದ್ದು, ಆಕರ್ಷಣೀಯವಾಗಿ ಕೇಂದ್ರವಾಗಿದೆ. ಈ ಆಹಾರ ಮಳಿಗೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾದ ಗಿರಮಿಟ್/ ಚುರುಮರಿ ಮಂಡಕ್ಕಿ, ಜೋಳದ ಖಡಕ್ ರೊಟ್ಟಿ ಸೇರಿದಂತೆ ಹೋಳಿಗೆ, ಮಂಗಳೂರು ನೀರ್‌ದೋಸೆ ಮತ್ತು ಬ್ಯಾಂಬು ಬಿರಿಯಾನಿ ಸೇರಿ ಮತ್ತಿತರ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿ ಕೊಡಲಾಗುತ್ತಿದೆ.

2 ಕೋಟಿ ನಿರೀಕ್ಷೆ: ಈಟಿವಿ ಭಾರತ ಜೊತೆಗೆ ಮಾತನಾಡಿದ ಜಿಪಂ ಸಿಇಒ ರಾಹುಲ್ ಶಿಂಧೆ, ಕಳೆದ ವರ್ಷ 10 ದಿನಗಳಲ್ಲಿ 1.30 ಕೋಟಿ ವಹಿವಾಟು ಆಗಿತ್ತು. ಆದರೆ, ಈ ಬಾರಿ ನಾಲ್ಕೇ‌ ದಿನಗಳಲ್ಲಿ 1.04 ಲಕ್ಷ ವ್ಯಾಪಾರ ಆಗಿದೆ.‌ ಇದರಲ್ಲಿ 50 ಲಕ್ಷ ರೂ. ಖಾದಿ ಉತ್ಪನ್ನಗಳೇ ಮಾರಾಟವಾಗಿವೆ. ಇದು ಮುಗಿಯುವ ವೇಳೆ 2 ಕೋಟಿ ವ್ಯಾಪಾರದ ನಿರೀಕ್ಷೆ ಇದೆ. ಪಶ್ಚಿಮ ಬಂಗಾಲ, ಜಮ್ಮು- ಕಾಶ್ಮೀರ, ಉತ್ತರಪ್ರದೇಶ, ಬಿಹಾರ ಸೇರಿ ಬೇರೆ ರಾಜ್ಯಗಳಿಂದಲೂ ವ್ಯಾಪಾರಿಗಳು ಬಂದಿದ್ದಾರೆ.

ವಸ್ತು ಪ್ರದರ್ಶನ ಜ.4 ರವರೆಗೆ ನಡೆಯಲಿದ್ದು, ಸ್ವಸಹಾಯ ಸಂಘ, ಕಿರು ಉದ್ಯಮಿಗಳಿಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಕೇಳಿಕೊಂಡರು. ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ನಿಧನರಾದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮೊಟಕುಗೊಳಿಸಲಾಗಿತ್ತು‌. ಜ.2ರಿಂದ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯಿಂದ ಬಂದಿದ್ದ ವ್ಯಾಪಾರಿ ರಘು ಮಾತನಾಡಿ, "ನವೆಂಬರ್ ತಿಂಗಳಲ್ಲಿ ದೆಹಲಿಗೆ ಹೋಗಿದ್ದೆವು. ಆದರೆ, ಅಲ್ಲಿ‌ ಅಷ್ಟೊಂದು ವ್ಯಾಪಾರ ಆಗಿರಲಿಲ್ಲ. ಇಲ್ಲಿ ಭಾರಿ ವಹಿವಾಟು ಆಗುತ್ತಿದೆ. ನಾಲ್ಕು ದಿನಕ್ಕೆ 40 ಸಾವಿರ ರೂ. ಆಗಿದೆ. ನಾವು ಮನೆಯಲ್ಲೇ ತಯಾರಿಸಿ ತಂದಿರುವ ಬಣ್ಣ ಬಣ್ಣದ ಆಟಿಕೆ ಸಾಮಾನುಗಳಿಗೆ ಜನರಿಂದ ಫುಲ್ ಡಿಮ್ಯಾಂಡ್ ಇದೆ" ಎಂದು ಹರ್ಷ ವ್ಯಕ್ತಪಡಿಸಿದರು.

ಬಾಗಲಕೋಟೆ ಜಿಲ್ಲೆ ತೇರದಾಳದಿಂದ ಬಂದಿದ್ದ ಶಿವಾನಂದ ಕೋಲೂರಮಠ ಮಾತನಾಡಿ, "ನಮ್ಮಲ್ಲಿನ ಖಾದಿ ಉತ್ಪ‌ನ್ನಗಳನ್ನು ಜನ‌ ತುಂಬಾ ಇಷ್ಟ ಪಟ್ಟು ಖರೀದಿಸುತ್ತಿದ್ದಾರೆ. ಶೇ.35ರಷ್ಟು ರಿಯಾಯಿತಿ ಇದೆ. 4 ದಿನಗಳಲ್ಲಿ 2.30 ಲಕ್ಷ ರೂ. ವ್ಯಾಪಾರ ಆಗಿದೆ. ಇದು ಒಳ್ಳೆಯ ವ್ಯಾಪಾರವೇ" ಎಂದು ಹೇಳಿದರು.

"ಸ್ವಸಹಾಯ ಸಂಘಗಳ ಮಹಿಳೆಯರು, ಅನಾಥ ಮಕ್ಕಳು ಮತ್ತು ದಿವ್ಯಾಂಗರು ತಮ್ಮ ಕೈಯ್ಯಾರೆ ತಯಾರಿಸಿದ ವಸ್ತುಗಳು ಇಲ್ಲಿ ಮಾರಾಟಕ್ಕಿವೆ. ಇಲ್ಲಿರುವ ವೈವಿಧ್ಯಮಯ ವಸ್ತುಗಳು ಬೇರೆ ಎಲ್ಲೂ ನಿಮಗೆ ಕಾಣ ಸಿಗುವುದಿಲ್ಲ. ನಾನು ಕಂಬಳಿ ಖರೀದಿಸಿದ್ದೇನೆ. ನಮ್ಮ ಪತಿ ಮತ್ತು‌ ಸ್ನೇಹಿತರ ಜೊತೆ ಮಾರಾಟ ಮೇಳಕ್ಕೆ ಬಂದಿದ್ದೇನೆ" ಎನ್ನುತ್ತಾರೆ ಸುನಂದಾ ಕರಲಿಂಗನವರ.

ಗುಡಿ ಕೈಗಾರಿಕೆಗಳಿಗೆ ಸಿಗುತ್ತಿದೆ ಪ್ರೋತ್ಸಾಹ: ಮಲ್ಲಿಕಾರ್ಜುನ ಎಂಬುವರು ಮಾತನಾಡಿ, "ರಾಜ್ಯದ ನಾನಾ ಮೂಲೆಗಳಿಂದ ಸ್ವಸಹಾಯ ಸಂಘಗಳ ಸದಸ್ಯರು ತಾವು ತಯಾರಿಸಿದ ಬಟ್ಟೆ, ಆಟಿಕೆ ಸಾಮಾನುಗಳು, ಹೂವಿನ ಕುಂಡಗಳು, ಅಲಂಕಾರಿಕ ವಸ್ತುಗಳ ಮಾರಾಟಕ್ಕೆ ಒಂದೇ ವೇದಿಕೆ ನಿರ್ಮಿಸಲಾಗಿದೆ. ಇದರಿಂದ ಜನರಿಗೆ ಅನುಕೂಲ ಆಗಿದೆ. ಗುಡಿ ಕೈಗಾರಿಕೆಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಇವರಿಗೆ ಸರ್ಕಾರ ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ" ಎಂದರು.

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: ಭದ್ರತೆ ಪರಿಶೀಲಿಸಿದ ಪೊಲೀಸ್ ಕಮಿಷನರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.