ETV Bharat / state

ಹೆಚ್​.ಡಿ.ರೇವಣ್ಣ ಬಂಧನ: ಜೆಡಿಎಸ್​ ಪ್ರಮುಖರೊಂದಿಗೆ ಹೆಚ್.​ಡಿ.ಕುಮಾರಸ್ವಾಮಿ ಸಭೆ - JDS Meeting

ಹೆಚ್.ಡಿ.ರೇವಣ್ಣ ಅವರನ್ನು ಎಸ್​​ಐಟಿ ಬಂಧಿಸಿದ್ದು ಜೆಡಿಎಸ್​ ಪಕ್ಷದ ಪ್ರಮುಖ ನಾಯಕರೊಂದಿಗೆ ಹೆಚ್.ಡಿ.ಕುಮಾರಸ್ವಾಮಿ ಶನಿವಾರ ಮಹತ್ವದ ಸಭೆ ನಡೆಸಿದರು.

ಹೆಚ್​.ಡಿ.ರೇವಣ್ಣ ಬಂಧನ
ಹೆಚ್​.ಡಿ.ರೇವಣ್ಣ ಬಂಧನ (ETV Bharat)
author img

By ETV Bharat Karnataka Team

Published : May 5, 2024, 7:03 AM IST

ಬೆಂಗಳೂರು: ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟ ಗಂಭೀರ ಆರೋಪ ಪ್ರಕರಣದಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಈ ಬೆಳವಣಿಗೆಯ ಬಳಿಕ ಜೆಡಿಎಸ್​​ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಪ್ರಮುಖ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚಿಸಿದ್ದಾರೆ.

ನಡೆಯದ ಅಮಿತ್ ಶಾ-ಹೆಚ್‌ಡಿಕೆ ಭೇಟಿ: ಕಲಬುರಗಿ ಜಿಲ್ಲೆಯಲ್ಲಿ ಲೋಕಸಭೆ ಚುನಾವಣಾ ಮತ ಪ್ರಚಾರದಲ್ಲಿದ್ದ ಕುಮಾರಸ್ವಾಮಿ ಶನಿವಾರ ಮಧ್ಯಾಹ್ನದ ನಂತರ ಬೆಂಗಳೂರಿಗೆ ಆಗಮಿಸಿದ್ದರು. ನಂತರ ಸಂಜೆಯವರೆಗೂ ತಾಜ್​​​ ವೆಸ್ಟೆಂಡ್ ಹೋಟೆಲ್​​ನಲ್ಲಿದ್ದು ಪಕ್ಷದ ಕೋರ್​ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಸಿ‌.ಎಸ್.ಪುಟ್ಟರಾಜು ಹಾಗು ಮತ್ತಿತರ ನಾಯಕರೊಂದಿಗೆ ಮಾತುಕತೆ ಮಾಡಿದ್ದಾರೆ. ವಿಶ್ರಾಂತಿ ಪಡೆಯಲು ಇದೇ ಹೋಟೆಲ್​ಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಕುಮಾರಸ್ವಾಮಿ ಯತ್ನಿಸಿದ್ದು, ಶಾ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.

ನಂತರ ರಾತ್ರಿ ವೇಳೆ ಕುಮಾರಸ್ವಾಮಿ ಪದ್ಮನಾಭ ನಗರದಲ್ಲಿರುವ ನಮ್ಮ ತಂದೆ ಹೆಚ್.​ಡಿ.ದೇವೇಗೌಡರ ನಿವಾಸಕ್ಕೆ ಆಗಮಿಸಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ದೇವೇಗೌಡರ ಪುತ್ರಿ ಅನುಸೂಯ ಹಾಗೂ ಮತ್ತೊಬ್ಬ ಪುತ್ರ ಬಾಲಕೃಷ್ಣ ಅವರೂ ಸಹ ಆಗಮಿಸಿದ್ದರು.

ಜೆಡಿಎಸ್‌ನಿಂದ ರೇವಣ್ಣ ಅಮಾನತಿಗೆ ಕ್ರಮ?: ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ.ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಆರೋಪ ಪ್ರಕರಣಗಳು ಜೆಡಿಎಸ್​​ಗೆ ತೀವ್ರ ಮುಜುಗರ ತಂದಿವೆ. ಈಗಾಗಲೇ ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ರೇವಣ್ಣ ಅವರ ಬಂಧನವಾಗಿದೆ. ಹೀಗಾಗಿ, ರೇವಣ್ಣನವರನ್ನೂ ಜೆಡಿಎಸ್‌ನಿಂದ ಅಮಾನತು ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹೆಚ್​.ಡಿ.ರೇವಣ್ಣ ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹೇಳಿದ್ದೇನು? - KIDNAP CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.