ETV Bharat / state

ಜರ್ಮನ್ ಶೆಫರ್ಡ್​ ಶ್ವಾನಗಳಿಗಾಗಿ ಮಾಲೀಕರು-ಸಾಕಿದವರ ನಡುವೆ ಗೊಂದಲ: ಪೊಲೀಸ್​ ಠಾಣೆಯಲ್ಲಿ ಸುಖಾಂತ್ಯ - German Shepherd Dogs - GERMAN SHEPHERD DOGS

ಜರ್ಮನ್ ಶೆಫರ್ಡ್ ಶ್ವಾನಗಳಿಗಾಗಿ ಮಾಲೀಕರು ಹಾಗೂ ಸಾಕಿದವರ ಗೊಂದಲ ನಡೆದು, ಪೊಲೀಸ್ ಠಾಣೆಯಲ್ಲಿ ಪ್ರಕರಣವು ಸುಖಾಂತ್ಯಗೊಂಡಿದೆ.

Haveri German Shepherd case
ಜರ್ಮನ್ ಶೆಫರ್ಡ್ ಶ್ವಾನಗಳೊಂದಿಗೆ ಮಾಲೀಕ (ETV Bharat)
author img

By ETV Bharat Karnataka Team

Published : Jul 14, 2024, 9:38 AM IST

ಹಾವೇರಿ ಜರ್ಮನ್ ಶೆಫರ್ಡ್ ಶ್ವಾನ ಪ್ರಕರಣ, ಪ್ರತಿಕ್ರಿಯೆ (ETV Bharat)

ಹಾವೇರಿ: ಶ್ವಾನ ಸಾಕಾಣಿಕೆ ಪ್ರಕರಣವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮದ ರಾಕೇಶ್ ಬಾರಂಗಿ ಎಂಬವರು ಕೆಲ ತಿಂಗಳ ಹಿಂದೆ ಜರ್ಮನ್ ಶೆಫರ್ಡ್ ಜಾತಿಯ ಎರಡು ನಾಯಿಮರಿಗಳನ್ನು ತಮ್ಮ ಗೆಳೆಯನಿಂದ ಪಡೆದಿದ್ದರು. ಅವುಗಳಿಗೆ ರಾಕ್ಷಿ ಮತ್ತು ಬ್ಲಾಕಿ ಎಂದು ಹೆಸರಿಟ್ಟು ಸಾಕುತ್ತಿದ್ದರು.

ಆದರೆ, ಚಿನ್ನಮುಳಗುಂದ ಗ್ರಾಮದಲ್ಲಿ ಚಿರತೆ ಕಾಟ ಶುರುವಾಯಿತು. ಹಾಗಾಗಿ, ರಾಕೇಶ್ ತಮ್ಮ ನಾಯಿಮರಿಗಳನ್ನು ಮತ್ತೊಬ್ಬ ಸ್ನೇಹಿತ ಹಾವೇರಿಯ ಮದನ ಎಂಬವರಿಗೆ ಸಾಕಲು ಕೊಟ್ಟರು. ಚಿರತೆ ಸಮಸ್ಯೆ ಮುಗಿಯುವವರೆಗೆ ಈ ಶ್ವಾನಗಳನ್ನು ಸಾಕು ಎಂದು ತಿಳಿಸಿದ್ದರು.

ಎರಡು ಶ್ವಾನಗಳನ್ನು ಪಡೆದ ಮದನ ಕೆಲ ದಿನಗಳ ಕಾಲ ಸಾಕಿ ಸಲಹಿದರು. ಬಳಿಕ ಅವೆರಡೂ ಶ್ವಾನಗಳನ್ನು ಸಾಕುವುದು ಕಷ್ಟ ಎಂದು ತಿಳಿದ ಮದನ, ತಮ್ಮ ಪರಿಚಿತ ಶ್ವಾನಪ್ರಿಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ಚಂದ್ರಶೇಖರ್‌ ಎಂಬವರಿಗೆ ನೀಡಿದರು. ಕಳೆದ ಕೆಲ ಸಮಯದಿಂದ ಈ ಶ್ವಾನಗಳನ್ನು ಚಂದ್ರಶೇಖರ್ ಅವರು ಸಾಕುತ್ತಿದ್ದರು. ಅವುಗಳಿಗೆ ರಕ್ಷಿತಾ ಮತ್ತು ರಾಣಾ ಎಂದು ಹೆಸರಿಟ್ಟಿದ್ದರು. ಚಂದ್ರಶೇಖರ್​​ಗೆ ಈ ಶ್ವಾನಗಳು ರಾಕೇಶ್ ಅವರದ್ದು ಎಂಬುದು ಗೊತ್ತಿರಲಿಲ್ಲ. ಆದರೆ, ಅವುಗಳನ್ನು ಕಳೆದ 90 ದಿನಗಳಿಂದ ಸ್ವಂತ ಮಕ್ಕಳಂತೆ ಸಾಕಿದ್ದರು.

ಈ ಮಧ್ಯೆ ರಾಕೇಶ್ ಬಾರಂಗಿ ತಮ್ಮ ಶ್ವಾನಗಳನ್ನು ವಾಪಸ್ ನೀಡುವಂತೆ ಮದನ್‌ಗೆ ದುಂಬಾಲು ಬಿದ್ದಿದ್ದಾರೆ. ರಾಕೇಶ್‌ನನ್ನು ಕರೆದುಕೊಂಡು ಬಂದ ಮದನ್, ಶ್ವಾನಗಳು ಚಂದ್ರಶೇಖರ್ ಬಳಿ ಇರುವುದನ್ನು ತೋರಿಸಿದ್ದಾರೆ. ಈ ಮಧ್ಯೆ ರಾಕೇಶ್ ಶ್ವಾನಗಳನ್ನು ಕೊಡಿಸುವಂತೆ ಮದನ್‌ಗೆ ಒತ್ತಾಯ ಮಾಡಿದ್ದಾರೆ. ಇಬ್ಬರ ನಡುವೆ ಮನಸ್ತಾಪವಾಗಿದೆ. ಇದರಿಂದ ಕುಪಿತನಾದ ರಾಕೇಶ್, ಹಾವೇರಿ ಶಹರ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಶ್ವಾನಗಳು ಕಳ್ಳತನವಾಗಿದ್ದು, ಅವುಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಆಲಿಸಿದ ಹಾವೇರಿ ಶಹರ ಸಿಪಿಐ ಮೋತಿಲಾಲ್ ಪವಾರ್, ಪ್ರಕರಣ ದಾಖಲಿಸಿಕೊಳ್ಳದೇ ಸುಖಾಂತ್ಯಗೊಳಿಸಲು ಮುಂದಾದರು.

ಇದನ್ನೂ ಓದಿ: ಶಿಗ್ಗಾವಿ ಭೀಕರ ಅಪಘಾತಕ್ಕೆ ಚಾಲಕನ ಅತಿ ವೇಗವೇ ಕಾರಣ: ಹೆಚ್ಚುವರಿ ಎಸ್​​ಪಿ - Haveri Car Accident

ಈ ಕುರಿತಂತೆ ಸಿಪಿಐ ಅವರು ಚಂದ್ರಶೇಖರ್‌ ಅವರಿಗೆ ಫೋನ್ ಮಾಡಿ ಕರೆಸಿ ಪ್ರಕರಣದ ಕುರಿತಂತೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ರಾಕೇಶ್​ ಅವರಿಗೆ ಶ್ವಾನ ಮರಳಿಸುವಂತೆ ಚಂದ್ರಶೇಖರ್‌ಗೆ ಸೂಚಿಸಿದ್ದಾರೆ. ಪೊಲೀಸರ ಮನವಿ ಮೇಲೆ ಚಂದ್ರಶೇಖರ್‌, ಎರಡೂ ಶ್ವಾನಗಳನ್ನು ತಂದು ರಾಕೇಶ್‌ಗೆ ನೀಡಿದ್ದಾರೆ. ಶ್ವಾನಗಳನ್ನು ಸಲಹಿದ್ದ ಚಂದ್ರಶೇಖರ್‌ಗೆ ರಾಕೇಶ್ 10 ಸಾವಿರ ರೂ. ನೀಡಿ, ಅವುಗಳನ್ನು ವಾಪಸ್​ ಪಡೆದಿದ್ದಾರೆ. ಆದರೆ, ನನಗೆ ಹಣ ಮುಖ್ಯವಲ್ಲ, ಈ ಎರಡು ಶ್ವಾನಗಳ ಜೊತೆ 6 ಶ್ವಾನಗಳನ್ನು ನಾನು ಸಾಕಿದ್ದೆ. ಇದೀಗ ಅದರಲ್ಲಿ ಎರಡನ್ನು ವಾಪಸ್ ನೀಡುತ್ತಿರುವುದು ಮನಸ್ಸಿಗೆ ಬೇಸರ ತಂದಿದೆ ಎಂದು ಚಂದ್ರಶೇಖರ್​ ತಿಳಿಸಿದ್ದಾರೆ.

ಇದನ್ನೂ ಓದಿ: 'ಸಚಿವ ಸ್ಥಾನಕ್ಕಾಗಿ ಯಾರ ಮನೆಬಾಗಿಲಿಗೂ ಹೋಗುವುದಿಲ್ಲ': ಶಾಸಕ ಸವದಿ - Laxman Savadi

ಈ ಮಧ್ಯೆ ಪ್ರಕರಣ ಸುಖಾಂತ್ಯಗೊಂಡಿರುವುದು ಸಿಪಿಐ ಮೋತಿಲಾಲ್ ಪವಾರ್, ರಾಕೇಶ್ ಮತ್ತು ಮದನ್‌ಗೆ ಸಂತಸ ತಂದಿದೆ. ಏನೂ ತಿಳಿಯದ ಜರ್ಮನ್ ಶೆಪರ್ಡ್ ಜಾತಿಯ ಶ್ವಾನಗಳು ಮಾಲೀಕರ ತಿಕ್ಕಾಟದಿಂದ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.