ETV Bharat / state

ಬಾಣಂತಿಯರ ಸಾವು ಪ್ರಕರಣದ ತನಿಖೆ ಸಿಬಿಐಗೆ ವಹಿಸಿ: ಶ್ರೀರಾಮುಲು - FORMER MINISTER SRIRAMULU

ಬಾಣಂತಿಯರ ಸಾವಿನ ಪ್ರಕರಣ ಗಂಭೀರವಾಗಿದ್ದರೂ ಆರೋಗ್ಯ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ದೂರಿದರು.

Former Minister Sriramulu
ಮಾಜಿ ಸಚಿವ ಶ್ರೀರಾಮುಲು (ETV Bharat)
author img

By ETV Bharat Karnataka Team

Published : Dec 6, 2024, 4:34 PM IST

ಬಳ್ಳಾರಿ: "ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದೆ. ನಗರದ ಬೀಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿನ ಬಾಣಂತಿಯರ ಸರಣಿ ಸಾವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು" ಎಂದು ಮಾಜಿ ಸಚಿವ ಶ್ರೀರಾಮುಲು ಒತ್ತಾಯಿಸಿದ್ದಾರೆ.

ಇಂದು ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರ ಜೊತೆಗೆ ಮಾತನಾಡಿದ ಅವರು ಯೋಗಕ್ಷೇಮ ವಿಚಾರಿಸಿದರು.

ಮಾಜಿ ಸಚಿವ ಶ್ರೀರಾಮುಲು ಹೇಳಿಕೆ (ETV Bharat)

ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಜಿಲ್ಲಾಸ್ಪತ್ರೆ ಹೆರಿಗೆ ವಾರ್ಡ್ ಸಾವಿನ ಮನೆಯಂತಾಗಿದೆ. ಇಲ್ಲಿ ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಸಾವಿನ ಪ್ರಮಾಣ ದಿನೇ ದಿನೆ ಏರಿಕೆಯಾದರೂ ಬಾಣಂತಿಯರ ಸಾವಿನ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ವಹಿಸಿದೆ. ನ.9ರಿಂದ 11ವರೆಗೆ ನಾಲ್ಕು ಬಾಣಂತಿಯರ ಸಾವಾಗಿದೆ. ನಿನ್ನೆ ಸುಮ್ಹಯ್ಯಾ ಎಂಬ ಮತ್ತೊಬ್ಬ ಬಾಣಂತಿ ಸಾವಾಗಿದೆ. ಕಳೆದ ಏಳೆಂಟು ತಿಂಗಳಲ್ಲಿ ರಾಜ್ಯದಲ್ಲಿ 100ಕ್ಕೂ ಹೆಚ್ಚು ಬಾಣಂತಿಯರ ಸಾವಾಗಿದೆ. ರಾಜ್ಯದ ಆರೋಗ್ಯ ಮಂತ್ರಿ ಏನು ಮಾಡುತ್ತಿದ್ದಾರೆ ಗೊತ್ತಿಲ್ಲ" ಎಂದು ಹೇಳಿದರು.

"ಜವಾಬ್ದಾರಿಯುತ ಆರೋಗ್ಯ ಮಂತ್ರಿಯಾಗಲಿ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲಿ ಆಸ್ಪತ್ರೆ ಭೇಟಿ ನೀಡಿಲ್ಲ. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕಿತ್ತು. ಆದರೆ ಅವರು ಬೆಂಗಳೂರಿನಲ್ಲಿ ಪ್ರಪಂಚ ನೋಡುತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರ ಸಾವಿಗೆ ಕಾರಣವೇನು ಎನ್ನುವುದನ್ನು ಆರೋಗ್ಯ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ತಿಳಿದುಕೊಂಡಿಲ್ಲ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದದರು.

"ಜಮೀರ್ ಅಹ್ಮದ್ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಏನೂ ಪ್ರಯೋಜನವಿಲ್ಲ. ಬಾಣಂತಿಯರ ಸರಣಿ ಸಾವು ಸಂಭವಿಸಿದರೂ, ಇಲ್ಲಿಯತನಕ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಅವರಿಗೆ ಬಡವರ ಆರೋಗ್ಯ ಮುಖ್ಯವಲ್ಲ, ಅವರು ಮಠ ಮಾನ್ಯಗಳ ಹಾಗೂ ರೈತರ ಭೂಮಿಗಳನ್ನು ಕಬಳಿಸುವ, ಆ ಜಮೀನುಗಳ ಫಹಣಿಗಳಲ್ಲಿ ವಕ್ಫ್​ ಎಂದು ಉಲ್ಲೇಖ ಮಾಡುವ ಕೆಲಸದಲ್ಲಿ ಬ್ಯುಸಿ ಇದ್ದಾರೆ ಅಂತ ಕಾಣುತ್ತೆ. ಪಾಪ ಜಿಲ್ಲೆ ಜಿಲ್ಲೆಗಳಿಗೆ ಅಡ್ಡಾಡಿ ವಕ್ಫ್ ಅದಾಲತ್ ನಡೆಸಿ ರೈತರ, ಮಠಗಳ ಭೂಮಿಗಳನ್ನು ಲಪಟಾಯಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಹಾಗಾಗಿ ಅವರಿಗೆ ಬಳ್ಳಾರಿಗೆ ಭೇಟಿ ನೀಡಿ, ಆಸ್ಪತ್ರೆಗೆ ಬಂದು ಬಾಣಂತಿಯ ಯೋಗಕ್ಷೇಮ ವಿಚಾರಿಸುವಷ್ಟು ಸಮಯವಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಬಾಣಂತಿಯರ ಸರಣಿ ಸಾವುಗಳ ನಡುವೆಯೂ ರಾಜ್ಯ ಸರ್ಕಾರ ಸಾಧನೆಯ ಸಮಾವೇಶಗಳನ್ನು ನಡೆಸಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ?" ಎಂದು ಪ್ರಶ್ನಿಸಿದ ಶ್ರೀರಾಮುಲು, "ಸಮಾವೇಶಗಳನ್ನು ಮಾಡಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇಡಿ ಅಥವಾ ಸಿಬಿಐನವರು ಬಂಧಿಸಿದರೆ ನಮ್ಮ ಬಳಿ ಜನಶಕ್ತಿ ಇದೆ ಎಂದು ತೋರಿಸಲು ಸಮಾವೇಶಗಳನ್ನು ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.

"ತಾಯಿ ಮಗು ಉಳಿಸುವ ವಿಚಾರದಲ್ಲಿ ದೇಶದಲ್ಲಿ ನಾನು ಅರೋಗ್ಯ ಸಚಿವನಾಗಿದ್ದಾಗ ಎರಡನೇ ಸ್ಥಾನದಲ್ಲಿದ್ದೆವು. ಆದರೆ ಈಗ ದೇಶದಲ್ಲಿ ಕೊನೇ ಸ್ಥಾನಕ್ಕೆ ಬಂದಿದ್ದೇವೆ. ಮೃತ ಬಾಣಂತಿಯರ ಕುಟುಂಬಕ್ಕೆ ಸರಕಾರ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಹಾಗೂ ಬಾಣಂತಿಯರ ಸಾವಿನ ತನಿಖೆಯನ್ನು CBIಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಡಿಹೆಚ್​ಒ ರಮೇಶ್ ಬಾಬು, ರಾಜು, ಓಬಳೇಶ್ ಸೇರಿದಂತೆ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: 'ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ': ದಿನೇಶ್ ಗುಂಡೂರಾವ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.