ETV Bharat / state

ಹೆಚ್​ಎಎಲ್​ ಹೆಲಿಕಾಪ್ಟರ್​ಗೆ ಶಕ್ತಿ ತುಂಬಲು 'ಅರಾವಳಿ' ಎಂಜಿನ್‌ ಅಭಿವೃದ್ಧಿ - HAL Partners With SAFHAL

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ ಹೆಲಿಕಾಪ್ಟರ್​ಗೆ ಶಕ್ತಿ ತುಂಬಲು 'ಅರಾವಳಿ' ಎಂಜಿನ್‌ ಅಭಿವೃದ್ಧಿಗೊಳಿಸಲಾಗುತ್ತಿದೆ.

HAL partners with SAFHAL to develop and manufacture 'Aravalli' helicopter engines
ಒಪ್ಪಂದಕ್ಕೆ ಸಹಿ ಹಾಕಿದ ಕ್ಷಣ (ETV Bharat)
author img

By ETV Bharat Karnataka Team

Published : Aug 30, 2024, 10:11 PM IST

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್​ಎಎಲ್​) ಮತ್ತು ಸಫಲ್ ಹೆಲಿಕಾಪ್ಟರ್ ಇಂಜಿನ್ಸ್ ಪ್ರೈವೇಟ್ ಒಪ್ಪಂದಕ್ಕೆ ಸಹಿ ಹಾಕಿದೆ. ಸಫಲ್ 13-ಟನ್ ಮಧ್ಯಮ ಲಿಫ್ಟ್ ಕ್ಲಾಸ್ ಇಂಡಿಯನ್ ಮಲ್ಟಿ-ರೋಲ್ ಹೆಲಿಕಾಪ್ಟರ್ "ಅರಾವಳಿ" ಹೆಸರಿನ ಹೊಸ ಪೀಳಿಗೆಯ ಹೈಪವರ್ ಎಂಜಿನ್‌ನ ಜಂಟಿ ವಿನ್ಯಾಸ, ಅಭಿವೃದ್ಧಿ, ತಯಾರಿಕೆ, ಪೂರೈಕೆ ಮತ್ತು ಬೆಂಬಲವನ್ನು ಡೆಕ್-ಬೇಸ್ಡ್ ಮಲ್ಟಿ-ರೋಲ್ ಹೆಲಿಕಾಪ್ಟರ್​ಗೆ ಪೂರೈಸಲು ಮುಂದಾಗಿದೆ. ಭಾರತದ ಪ್ರಬಲ ಪರ್ವತ ಶ್ರೇಣಿಯಿಂದ ಪಡೆದ ಹೆಸರು ಅರಾವಳಿಯಾಗಿದ್ದು, ಎಂಜಿನ್ ತಂತ್ರಜ್ಞಾನಗಳಲ್ಲಿ ಆತ್ಮನಿರ್ಭತೆಯನ್ನು ಸಾಧಿಸುವಲ್ಲಿ ದೇಶದ ಆಕಾಂಕ್ಷೆಗಳನ್ನು ಸಂಕೇತಿಸಲಿದೆ.

ಈ ಕುರಿತು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ. ಅನಂತಕೃಷ್ಣನ್ ಮಾತನಾಡಿ, ಸಫಲ್ ಜೊತೆಗಿನ ಈ ಪಾಲುದಾರಿಕೆಯು ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ತಾಂತ್ರಿಕ ಸ್ವಾವಲಂಬನೆಯನ್ನು ಸಾಧಿಸುವ ನಮ್ಮ ಪ್ರಯಾಣದ ಪ್ರಮುಖ ಮೈಲಿಗಲ್ಲಾಗಿದೆ. ಇದು ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳ ಸ್ಥಳೀಯ ಅಭಿವೃದ್ಧಿಯ ವಿಶಾಲ ಗುರಿಗೆ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.

HAL partners with SAFHAL to develop and manufacture 'Aravalli' helicopter engines
ಒಪ್ಪಂದಕ್ಕೆ ಸಹಿ ಹಾಕಿದ ಕ್ಷಣ (ETV Bharat)

ಸಫ್ರಾನ್ ಹೆಲಿಕಾಪ್ಟರ್ ಇಂಜಿನ್‌ಗಳ ಸಿಇಒ ಸೆಡ್ರಿಕ್ ಗೌಬೆಟ್ ಮಾತನಾಡಿ, ಸಫ್ರಾನ್ ಮತ್ತು ಹೆಚ್​ಎಎಲ್ ನಡುವಿನ 25 ವರ್ಷಗಳ ಯಶಸ್ವಿ ಪಾಲುದಾರಿಕೆಯ ಪರಿಣಾಮದಿಂದ ಹೊಸ ಇಂಜಿನ್ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಹೆಜ್ಜೆ ಹೆಚ್​ಎಎಲ್ ಜೊತೆಗಿನ ಸಹಯೋಗವನ್ನು ಶ್ರೀಮಂತಗೊಳಿಸಲಿದೆ. ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರ ಕೂಡ ಕಾರ್ಯಕ್ರಮಗಳ ಯಶಸ್ಸನ್ನು ಖಚಿತಪಡಿಸಲಿದೆ ಎಂದಿದ್ದಾರೆ.

ಏನಿದು ಸಫ್ರಾನ್ ಹೆಲಿಕಾಪ್ಟರ್ ಇಂಜಿನ್‌ಗಳು?: ಸಫ್ರಾನ್ ಹೆಲಿಕಾಪ್ಟರ್ ಇಂಜಿನ್‌ಗಳು ಹೆಚ್​ಎಎಲ್ ನಡುವಿನ ಜಂಟಿ ಉದ್ಯಮವಾಗಿದ್ದು, ಭಾರತದಲ್ಲಿ ಹೊಸ ತಲೆಮಾರಿನ ಹೆಲಿಕಾಪ್ಟರ್ ಎಂಜಿನ್‌ಗಳ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ, ಮಾರಾಟ ಮತ್ತು ಬೆಂಬಲಕ್ಕೆ ಸಮರ್ಪಿತವಾಗಿದೆ. ಹೊಸ ಒಪ್ಪಂದದ ಅಡಿಯಲ್ಲಿ ಅತ್ಯುನ್ನತ ಜಾಗತಿಕ ಗುಣಮಟ್ಟವನ್ನು ಪೂರೈಸಲಿದೆ. ಅತ್ಯಾಧುನಿಕ ವಿನ್ಯಾಸ, ಸುಧಾರಿತ ಉತ್ಪಾದನಾ ಪ್ರಕ್ರಿಯೆಗಳು ಮತ್ತು ಕಠಿಣ ಪರೀಕ್ಷಾ ಪ್ರೋಟೋಕಾಲ್‌ಗಳನ್ನು ಒಳಗೊಂಡಿದೆ.

ಭಾರತೀಯ ಸಶಸ್ತ್ರ ಪಡೆಗಳ ಅವಶ್ಯಕತೆ ಪೂರೈಸಲು ವಿನ್ಯಾಸ: ಭಾರತೀಯ ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಿದ ಹೊಸ 13-ಟನ್ ಹೆಲಿಕಾಪ್ಟರ್ ಇದಾಗಿದೆ. ಕಡಲಾಚೆಯ ಕಾರ್ಯಾಚರಣೆಗಳು, ಉಪಯುಕ್ತತತೆ, ಸಾರಿಗೆ ಇತ್ಯಾದಿಗಳಿಗಾಗಿ ಇದನ್ನು ಬಳಸಲಾಗಲಿದೆ. ಸಫ್ರಾನ್ ಹೆಲಿಕಾಪ್ಟರ್ ಇಂಜಿನ್‌ಗಳು ಚೀತಾ ಮತ್ತು ಚೇತಕ್‌ನಲ್ಲಿ ಈಗಾಗಲೆ ಬಳಕೆಯಲ್ಲಿದೆ. ಪ್ರಸ್ತುತ ಸಹಯೋಗವು ಮಧ್ಯಮ ಲಿಫ್ಟ್ ಹೆಲಿಕಾಪ್ಟರ್‌ಗಳಲ್ಲಿ ಜಂಟಿ ವಿನ್ಯಾಸ ಮತ್ತು ಅಭಿವೃದ್ಧಿ ಪಡಿಸಲಾಗಿದೆ.

ಇದನ್ನೂ ಓದಿ: ಕಾರು ಖರೀದಿಗೆ ಹಣಕಾಸು ಸೌಲಭ್ಯ: ಯೂನಿಯನ್​ ಬ್ಯಾಂಕ್​ನೊಂದಿಗೆ ಟೊಯೋಟಾ ಒಪ್ಪಂದ - Agreement of Toyota And Union Bank

ETV Bharat Logo

Copyright © 2024 Ushodaya Enterprises Pvt. Ltd., All Rights Reserved.