ಬೆಳಗಾವಿ: ಜಿಲ್ಲೆಯ ಸುತ್ತಮುತ್ತ ಧಾರಾಕಾರ ಮಳೆ ಆಗುತ್ತಿದ್ದು, ಬೆಳಗಾವಿ ತಾಲ್ಲೂಕಿನ ರಾಕಸಕೊಪ್ಪ ಜಲಾಶಯ ಭಾಗಶಃ ಭರ್ತಿಯಾಗಿದೆ. ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ಈ ಜಲಾಶಯ, 0.60 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಒಟ್ಟು 2,475 ಅಡಿ ಎತ್ತರವಿದೆ. ಇಂದಿನ ನೀರಿನ ಮಟ್ಟ 2471.4 ಅಡಿ ಇದೆ. ಇನ್ನು ನಾಲ್ಕು ಅಡಿ ನೀರು ಬಂದರೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುತ್ತದೆ.
ಇದೇ ರೀತಿ ಉತ್ತಮ ಮಳೆಯಾದರೆ ಕೇವಲ ಎರಡು ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದ್ದು, ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದು ಎಂಬುದು ಜನರ ಅಭಿಪ್ರಾಯ. ಜಲಾಶಯ ಪೂರ್ತಿ ಭರ್ತಿಯಾದರೆ ಮಾರ್ಕಂಡೇಯ ನದಿಗೆ ನೀರು ಬಿಡಬೇಕಾಗುತ್ತದೆ. ಹೀಗೆ ನೀರು ಬಿಡುಗಡೆಯಾದರೆ ನದಿ ಪಾತ್ರದ ಜನರಿಗೂ ಪ್ರವಾಹ ಭೀತಿ ಎದುರಾಗಲಿದೆ.
ಬೆಳಗಾವಿ ನಗರದ ಹೊರವಲಯದಲ್ಲೇ ಹರಿದು ಹೋಗುವ ಮಾರ್ಕಂಡೇಯ ನದಿ ತಟದಲ್ಲಿ ಸಾವಿರಾರು ಹೆಕ್ಟೇರ್ ಜಮೀನಿಗೆ ನೀರು ನುಗ್ಗುವ ಆತಂಕವಿದೆ. ನಗರದ ಹಲವು ಪ್ರದೇಶಗಳಿಗೂ ಪ್ರವಾಹ ಭೀತಿ ಇದೆ.
ಇದನ್ನೂ ಓದಿ: ತುಂಗಾ ಅಣೆಕಟ್ಟೆಗೆ 50 ಸಾವಿರ ಕ್ಯೂಸೆಕ್ ಒಳಹರಿವು: ಕಲ್ಲುಹಳ್ಳ ಸೇತುವೆಯ ಪಿಚ್ಚಿಂಗ್ ಕುಸಿತ - Tunga Dam