ETV Bharat / state

ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಇಬ್ಬರ ಒಟ್ಟು ಆಸ್ತಿ ವಿವರ ಹೀಗಿದೆ - Geetha Shivaraj Kumar Assets - GEETHA SHIVARAJ KUMAR ASSETS

ನಟ ಶಿವರಾಜ್​ ಕುಮಾರ್​ ಮತ್ತು ಪತ್ನಿ ಗೀತಾ ತಮ್ಮ ಒಟ್ಟು ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ.

ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಇಬ್ಬರ ಒಟ್ಟು ಆಸ್ತಿ ಎಷ್ಟುಗೊತ್ತಾ?

author img

By ETV Bharat Karnataka Team

Published : Apr 15, 2024, 10:46 PM IST

ಶಿವಮೊಗ್ಗ: ನಟ ಶಿವರಾಜ್ ಕುಮಾರ್ ಹಾಗು ಪತ್ನಿ ಗೀತಾ ಇಬ್ಬರೂ ಕೋಟ್ಯಧಿಪತಿಗಳು. ಗೀತಾ ಶಿವರಾಜ್ ಕುಮಾರ್ ಒಟ್ಟು 40 ಕೋಟಿ 04 ಲಕ್ಷದ 36 ಸಾವಿರದ 321 ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ. ಶಿವರಾಜ್ ಕುಮಾರ್ ಹೆಸರಿನಲ್ಲಿ 49 ಕೋಟಿ 82 ಸಾವಿರದ 893 ರೂ ಮೌಲ್ಯದ ಆಸ್ತಿ ಇದೆ.

ಗೀತಾ ಶಿವರಾಜ್ ಕುಮಾರ್ ಕೈಯಲ್ಲಿ 3 ಲಕ್ಷ ನಗದು ಇದೆ. ಶಿವರಾಜ್ ಕುಮಾರ್ ಬಳಿ 22 ಲಕ್ಷದ 58 ಸಾವಿರದ 338 ರೂ ನಗದು ಇದೆ.

ಸಾಲ: ಗೀತಾ ಶಿವರಾಜ್ ಕುಮಾರ್ 7 ಕೋಟಿ 14 ಲಕ್ಷದ 95 ಸಾವಿರ ರೂ ಸಾಲ ಮಾಡಿದ್ದಾರೆ. ಶಿವರಾಜ್ ಕುಮಾರ್ 17 ಕೋಟಿ 01 ಲಕ್ಷದ 12 ಸಾವಿರ ರೂ ಸಾಲ ಹೊಂದಿದ್ದಾರೆ.

ಚಿನ್ನಾಭರಣಗಳು: ಗೀತಾ ಶಿವರಾಜ್ ಕುಮಾರ್ ಬಳಿ 11, 542 ಗ್ರಾಂ ಚಿನ್ನಾಭರಣವಿದ್ದು, ಇದು 3 ಕೋಟಿ 50 ಲಕ್ಷ ಮೌಲ್ಯದ್ದಾಗಿದೆ. 30 ಕೆ.ಜಿ ಬೆಳ್ಳಿ ಹೊಂದಿದ್ದಾರೆ.

ಕಾರುಗಳು: ಗೀತಾ ಹೆಸರಿನಲ್ಲಿ 1 ಕೋಟಿ 07 ಲಕ್ಷ ರೂ ಮೌಲ್ಯದ ಟೊಯೋಟಾ ಹೈಬ್ರಿಡ್ ಕಾರು ಇದೆ. ಅದೇ ರೀತಿ ಶಿವರಾಜ್ ಕುಮಾರ್ ಬಳಿ 87 ಲಕ್ಷ 70 ಸಾವಿರ ರೂ ಮೌಲ್ಯದ ನಾಲ್ಕು ವಿವಿಧ ಕಂಪನಿಯ ಕಾರುಗಳಿವೆ. ಅವುಗಳೆಂದರೆ, ಟೊಯೋಟಾ ಫಾರ್ಚುನರ್, ಮಾರುತಿ ಎರಿಟಿಗಾ, ವೊಲ್ವೋ.

ಕೃಷಿ ಭೂಮಿ ವಿವರ: ಗೀತಾ ಶಿವರಾಜ್ ಕುಮಾರ್ ಹೆಸರಿನಲ್ಲಿ ಕನಕಪುರ ಬಳಿ 05 ಎಕರೆ 05 ಗುಂಟೆ ಕೃಷಿ ಭೂಮಿ ಇದೆ. ಶಿವರಾಜ್ ಕುಮಾರ್ ಹೆಸರಿನಲ್ಲಿ ಬೆಂಗಳೂರಿನ ಕೋರಮಂಗಲ ಬಳಿ 03 ಎಕರೆ 26 ಗುಂಟೆ ಜಮೀನು ಇದೆ. ಶಿವರಾಜ್ ಕುಮಾರ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಾಸದ ಮನೆ ಇದೆ.

ಗೀತಾ ಶಿವರಾಜ್ ಕುಮಾರ್ ಹೆಸರಿನಲ್ಲಿ 05 ಕೋಟಿ 54 ಲಕ್ಷದ ಚರಾಸ್ಥಿ ಇದ್ದರೆ ಶಿವರಾಜ್ ಕುಮಾರ್ 18 ಕೋಟಿ 82 ಲಕ್ಷದ ಚರಾಸ್ಥಿ ಹೊಂದಿದ್ದಾರೆ. ಗೀತಾ ಹೆಸರಿನಲ್ಲಿ 5 ಕೋಟಿ 92 ಲಕ್ಷ ರೂ ಸ್ಥಿರಾಸ್ತಿ ಇದ್ದರೆ, ಶಿವರಾಜ್ ಕುಮಾರ್ 4 ಕೋಟಿ 37 ಲಕ್ಷ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿಕೊಂಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್​ರಿಂದ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಕೆ - Gayathri Siddeshwara

ETV Bharat Logo

Copyright © 2025 Ushodaya Enterprises Pvt. Ltd., All Rights Reserved.