ETV Bharat / state

ನಾರಾಯಣಮೂರ್ತಿ, ಅಂಬಾನಿ ಡೀಪ್​ಫೇಕ್ ಬಳಸಿ ಲಕ್ಷಾಂತರ ರೂ ದೋಚಿದ ವಂಚಕರು! - 86 LAKH FRAUD

ಸೈಬರ್​ ವಂಚಕರು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 86 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Nov 5, 2024, 8:38 PM IST

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಡೀಪ್​ ಫೇಕ್​ ವಿಡಿಯೋ, ಫೋಟೋ ಸೃಷ್ಟಿಸಿ ವಂಚಕರು ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ನಾರಾಯಣಮೂರ್ತಿ ಡೀಪ್​ ಫೇಕ್ ಬಳಸಿ 6.71 ಲಕ್ಷ ವಂಚನೆ: ಎಫ್​ಎಕ್ಸ್ ರೋಡ್ ಪ್ಲಾಟ್​ಫಾರ್ಮ್ ಟ್ರೇಡಿಂಗ್ ಬಗ್ಗೆ ನಾರಾಯಣಮೂರ್ತಿ ಅವರು ಮಾಹಿತಿ ನೀಡಿದಂತೆ ವಂಚಕರು ಡೀಪ್​ ಫೇಕ್ ವಿಡಿಯೋ ಸೃಷ್ಟಿಸಿ, ಅದನ್ನು ವೀಣಾ ಎಂಬುವರಿಗೆ ಇ - ಮೇಲ್ ಮೂಲಕ ಕಳುಹಿಸಿದ್ದಾರೆ. ನಂತರ ಟ್ರೇಡಿಂಗ್​ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ಸಿಗುತ್ತದೆ ಎಂದು ನಂಬಿಸಿ ಮಹಿಳೆಯಿಂದ ಮೊದಲು 1.39 ಲಕ್ಷ ಹಣ ವರ್ಗಾಯಿಸಿಕೊಂಡು ಅದಕ್ಕೆ ಪ್ರತಿಯಾಗಿ 8 ಸಾವಿರ ಲಾಭ ನೀಡಿದ್ದಾರೆ. ಇದೇ ರೀತಿ ಹಂತ - ಹಂತವಾಗಿ 6.71 ಲಕ್ಷ ಹಣ ವರ್ಗಾಯಿಸಿಕೊಂಡು ಬಳಿಕ ವಂಚಿಸಿದ್ದಾರೆ.

ಮತ್ತೆ 57 ಲಕ್ಷ ವಂಚನೆಗೊಳಗಾದ ಮಹಿಳೆ: ಇದಾದ ಕೆಲ ದಿನಗಳ ಬಳಿಕ ವರ್ಕ್ ಫ್ರಮ್ ಹೋಮ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಲಿಂಕ್ ಒತ್ತಿದ ಇದೇ ಮಹಿಳೆಗೆ ಟೆಲಿಗ್ರಾಮ್ ಮೂಲಕ ಸಂಪರ್ಕಿಸಿದ ವಂಚಕರು, ಎಎಸ್​ಒಎಸ್ ಪ್ಲಾಟ್​ಫಾರ್ಮ್​ನಲ್ಲಿ ಪ್ರಾಡಕ್ಟ್​ಗಳಿಗೆ ರೇಟಿಂಗ್ ನೀಡಿ ಹಣ ಸಂಪಾದಿಸಬಹುದು ಎಂದು ಹೇಳಿ ಆರಂಭದಲ್ಲಿ ಲಾಭಾಂಶ ನೀಡಿ ಬಳಿಕ ಮಹಿಳೆಗೆ 57 ಲಕ್ಷ ವಂಚಿಸಿದ್ದಾರೆ. ಈ ಎರಡು ಪ್ರಕರಣದ ಸಂಬಂಧ ಸೆನ್​ ಪೊಲೀಸ್​ ಠಾಣೆಗೆ ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದಾರೆ.

ಅಂಬಾನಿ ಡೀಪ್​ ಫೇಕ್ ಫೋಟೋ ಬಳಸಿ ವಂಚನೆ: ಮುಖೇಶ್ ಅಂಬಾನಿಯ ಡೀಪ್​ ಫೇಕ್​ ಫೋಟೋ ಬಳಿಸಿದ ವಂಚಕರು, ಸಾಮಾಜಿಕ ಮಾಧ್ಯಮದ ಮೂಲಕ ಲಿಂಕ್ ಅಶೋಕ್ ಕುಮಾರ್ ಎಂಬುವರಿಗೆ ಲಿಂಕ್​ ಕಳುಹಿಸಿ ಆನ್​ಲೈನ್ ಟ್ರೇಡಿಂಗ್​ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂದು ಹೇಳಿದ್ದಾರೆ. ಇದನ್ನು ನಂಬಿ ಅಶೋಕ್​ ಹಂತ-ಹಂತವಾಗಿ 19 ಲಕ್ಷ ಹಣವನ್ನು ವಂಚಕರಿಗೆ ವರ್ಗಾಯಿಸಿದ್ದರು. ನಂತರ ವಂಚಕರು ಯಾವುದೇ ಲಾಭಾಂಶ ನೀಡದೆ 19 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಸೆನ್ ಪೊಲೀಸ್​ ಠಾಣೆಗೆ ಅಶೋಕ್ ದೂರು ಕೊಟ್ಟಿದ್ದಾರೆ.

ಇದನ್ನೂ ಓದಿ: ಆರ್ಡರ್ ನೆಪದಲ್ಲಿ ಅಮೆಜಾನ್ ಸಂಸ್ಥೆಗೆ 11.45 ಲಕ್ಷ ರೂ. ವಂಚನೆ: ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.