ETV Bharat / state

3 ಕೋಟಿ ರೂ ವಂಚನೆ ಆರೋಪ: ಆನ್‌ಲೈನ್‌ ಗೇಮಿಂಗ್ ಆ್ಯಪ್‌ ವಿರುದ್ಧ ಪ್ರಕರಣ ದಾಖಲು - CASE FILED AGAINST GAMING APP

3 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಆರೋಪದಡಿ ಆನ್‌ಲೈನ್‌ ಪೋಕರ್ ಗೇಮಿಂಗ್​ ಆ್ಯಪ್​ವೊಂದರ ವಿರುದ್ಧ ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಆನ್‌ಲೈನ್‌ ಗೇಮಿಂಗ್ ಆ್ಯಪ್‌
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Dec 7, 2024, 5:56 PM IST

ಬೆಂಗಳೂರು: 3 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಆರೋಪದಡಿ ಆನ್‌ಲೈನ್‌ ಪೋಕರ್ ಗೇಮಿಂಗ್​ ಆ್ಯಪ್​ವೊಂದರ ವಿರುದ್ಧ ಎಫ್ಐಆರ್ ದಾಖಲಾಗಿದೆ. 33 ವರ್ಷದ ವ್ಯಕ್ತಿಯೊಬ್ಬರು ನೀಡಿರುವ ದೂರಿನನ್ವಯ ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್‌ ಪೋಕರ್ ಗೇಮಿಂಗ್​ ಆ್ಯಪ್​ನಲ್ಲಿ ಸಣ್ಣ ಪ್ರಮಾಣದ ಹಣ ಹೂಡಿ ಆಡಿದಾಗ ಗೆಲ್ಲಲು ಅನುವು ಮಾಡಿಕೊಡಲಾಗುತ್ತಿದೆ. ಆದರೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದಾಗ ಸೋಲಿಸಲಾಗುತ್ತಿದೆ. ಇದರಿಂದ ಅನುಮಾನಗೊಂಡು ನಾವು ಆಟವಾಡಿದ ಟೇಬಲ್‌ನ ಮಾಹಿತಿಯನ್ನ ಕೇಳಿದರೆ ನೀಡುತ್ತಿಲ್ಲ. ಆ್ಯಪ್‌ನಲ್ಲಿ ಸಾಕಷ್ಟು ಲೋಪಗಳಿದ್ದು, ಹೂಡಿಕೆ ಮಾಡುವ ಹಣಕ್ಕೆ ಯಾವುದೇ ಭದ್ರತೆಯಿಲ್ಲ. ದೂರು ದಾಖಲು ಮಾಡುವುದಾಗಿ ತಿಳಿಸಿದಾಗ, ಕರೆ ಮಾಡಿ ಮತ್ತೆ ಹಣ ಹೂಡಿಕೆ ಮಾಡಿದರೆ ಗೆಲ್ಲುತ್ತೀರ ಎಂದು ನಂಬಿಸುವ ಯತ್ನ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನನ್ವಯ ಕೇಂದ್ರ ವಿಭಾಗದ ಸಿ‌ಇಎನ್ ಪೊಲೀಸರು ತನಿಖೆ ಕೈಗೊಂಡಿದಿದ್ದಾರೆ.

ಇದನ್ನೂ ಓದಿ: ಪೇಮೆಂಟ್ ಗೇಟ್ ವೇ ಪ್ಲಾಟ್‌ ಫಾರ್ಮ್ ಕಂಪೆನಿಗೆ ಲಕ್ಷಾಂತರ ವಂಚನೆ: ಆರೋಪಿ ಬಂಧ‌ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.