ETV Bharat / state

ಮಂಗಳೂರು: ನದಿಗೆ ಈಜಲು ತೆರಳಿದ್ದ ನಾಲ್ವರು ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು - dead

ನದಿಗೆ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

mangaluru
ಮಂಗಳೂರು
author img

By ETV Bharat Karnataka Team

Published : Feb 28, 2024, 8:54 AM IST

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಸುರತ್ಕಲ್​ನ ನಾಲ್ವರು ವಿದ್ಯಾರ್ಥಿಗಳು ನದಿ‌ಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಯಶ್ವಿತ್​ ಚಂದ್ರಕಾಂತ್​, ನಿರೂಪ್, ಅನ್ವಿತ್​ ಮತ್ತು ರಾಘವೇಂದ್ರ ಮೃತಪಟ್ಟವರು. ಹಳೆಯಂಗಡಿ ಬಳಿಯ ನದಿಯಲ್ಲಿ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ.

ನಾಲ್ವರು ಮೃತರು ನಿನ್ನೆ ಮಧ್ಯಾಹ್ನ 1:30ರ ಸುಮಾರಿಗೆ ನಾಪತ್ತೆಯಾಗಿದ್ದರು. ಶಾಲಾ ಪರೀಕ್ಷೆ ನಂತರ ನದಿಗೆ ಈಜಲು ಹೋಗಿ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಸುರತ್ಕಲ್​ನ ವಿದ್ಯಾದಾಯಿನಿ ಫ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಇವರು ಆಂಗ್ಲ ಭಾಷಾ ಪರೀಕ್ಷೆಯನ್ನು ಬರೆದಿದ್ದು, ಪರೀಕ್ಷೆಯ ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಸುರತ್ಕಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಬೆಳಗ್ಗೆ ನಾಲ್ವರ ಮೃತದೇಹ ಹಳೆಯಂಗಡಿ ಬಳಿಯ ನದಿಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ಬೈಕ್​ಗೆ ಲಾರಿ ಡಿಕ್ಕಿ: ಹಾವೇರಿಯಲ್ಲಿ ಒಂದೇ ಕುಟುಂಬದ ಮೂವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.