ETV Bharat / state

ಹಾವೇರಿ: ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದ ಕುಟುಂಬಸ್ಥರು, ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವು - Haveri Car Accident - HAVERI CAR ACCIDENT

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಅಪಘಾತಗೊಂಡ ಕಾರು
ಅಪಘಾತಕ್ಕೀಡಾದ ಕಾರು (ETV Bharat)
author img

By ETV Bharat Karnataka Team

Published : May 24, 2024, 10:05 AM IST

ಹಾವೇರಿ ಅಪಘಾತ (ETV Bharat)

ಹಾವೇರಿ: ಹಾವೇರಿಯಿಂದ ತಿರುಪತಿಗೆ ತೆರಳುತ್ತಿದ್ದ ಎರ್ಟಿಗಾ ಕಾರು​ ಪಲ್ಟಿಯಾಗಿ ಸರ್ವಿಸ್​​ ರೋಡ್‌ಗೆ​ ಬಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ರಾಣೆಬೆನ್ನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಹಲಗೇರಿ ಸೇತುವೆ ಬಳಿ ಮಧ್ಯರಾತ್ರಿ ನಡೆದಿದೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.

ವೇಗವಾಗಿ ಸಂಚರಿಸುತ್ತಿದ್ದ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗುವುದನ್ನ ತಪ್ಪಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಎರ್ಟಿಗಾ ಕಾರು, ಹೆದ್ದಾರಿ ಮೇಲಿಂದ ಸರ್ವಿಸ್ ರಸ್ತೆಗೆ ಬಿದ್ದಿದೆ. ಪರಿಣಾಮ ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರನ್ನು 54 ವರ್ಷದ ಸುರೇಶ ಜಾಡಿ, 22 ವರ್ಷದ ಐಶ್ವರ್ಯ, 7 ವರ್ಷದ ಚೇತನಾ ಮತ್ತು 28 ವರ್ಷದ ಪವಿತ್ರಾ ಸಮಗಂಡಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದು ಇಬ್ಬರ ಸ್ಥಿತಿ ಚಿಂತಾಜನಕ ಇದೆ. ಗಾಯಗೊಂಡವರನ್ನ ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಸ ಬಾರ್ಕಿ, ಹೊನ್ನಪ್ಪ ಬಾರ್ಕಿ, ಪ್ರಭುರಾಜ್ ಸಮಗಂಡಿ ಮತ್ತು ಗೀತಾ ಬಾರ್ಕಿ ಎಂದು ಗುರುತಿಸಲಾಗಿದೆ.

ತೀವ್ರವಾಗಿ ಗಾಯಗೊಂಡ ಸಾವಿತ್ರಾ ಜಾಡಿ ಮತ್ತು ಪ್ರಭುರಾಜ್ ಸಮಗಂಡಿಯನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರೆಲ್ಲಾ ಹಾವೇರಿಯ ಅಶ್ವಿನಿ ನಗರದ ನಿವಾಸಿಗಳು.

ತಿಮ್ಮಪ್ಪನ ದರ್ಶನಕ್ಕೆ ಹೋಗುವಾಗ ಅಪಘಾತ: ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಗುರುವಾರ ತಡರಾತ್ರಿ ಹಾವೇರಿಯಿಂದ ಹೊರಟಿದ್ದರು. ರಾತ್ರಿ 11-30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಸ್ಪಿ ಅಂಶುಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತಂತೆ ರಾಣೆಬೆನ್ನೂರು ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು - Horrific Road Accident

ಮೃತ ದೇಹಗಳ ಮರಣೋತ್ತರ ಪರೀಕ್ಷೆಯನ್ನು ರಾಣೆಬೆನ್ನೂರು ತಾಲೂಕಾಸ್ಪತ್ರೆಯಲ್ಲಿ ನಡೆಸಲಾಯಿತು. ನಂತರ ಮೂರು ಪಾರ್ಥೀವ ಶರೀರ ಅಶ್ವಿನಿ ನಗರಕ್ಕೆ ತರುತ್ತಿದ್ದಂತೆ ಮೃತರ ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿತ್ತು. ಮತ್ತೊಂದು ಪಾರ್ಥೀವ ಶರೀರವನ್ನ ಬಸದಿ ಓಣಿಗೆ ತಗೆದುಕೊಂಡ ಹೋಗಲಾಯಿತು. ನಂತರ ಒಂದೇ ವಾಹನದಲ್ಲಿ ಮೃತರ ಅಂತಿಮ ಯಾತ್ರೆ ನಡೆಸಲಾಯಿತು. ಹಾವೇರಿ ನಗರದ ಹೊರವಲಯದಲ್ಲಿರುವ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಮೃತ ಸುರೇಶ ಜಾಡಿ ಕುಟುಂಬ ಹಾವೇರಿ ಬಸ್ ನಿಲ್ದಾಣದ ಪಕ್ಕದಲ್ಲಿ ದೂಡುವ ಗಾಡಿಯಲ್ಲಿ ಪಡ್ಡು ಮಾರಾಟ ಮಾಡುತ್ತಿತ್ತು. ಕಳೆದ ಹಲವು ವರ್ಷಗಳಿಂದ ಜಾಡಿ ಕುಟುಂಬ ಈ ವೃತ್ತಿ ಮಾಡಿಕೊಂಡು ಬಂದಿತ್ತು. ಕೆಲ ದಿನಗಳಿಂದ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಎನ್ನುವ ಆಸೆ ವ್ಯಕ್ತವಾಗಿತ್ತು. ಇದರಿಂದ ಅವರ ಮಗ ಮತ್ತು ಸಂಬಂಧಿಕರು ಸೇರಿಕೊಂಡು ಎರ್ಟಿಗಾ ಕಾರ್‌ನಲ್ಲಿ ಗುರುವಾರ ತಡರಾತ್ರಿ ಹಾವೇರಿಯಿಂದ ತಿರುಪತಿಗೆ ಹೊರಟಿದ್ದರು.

ಇದನ್ನೂ ಓದಿ: ಗಲ್ಲಿ ಕ್ರಿಕೆಟ್‌ ಗಲಾಟೆಯಲ್ಲಿ 8 ಜನರಿಗೆ ಗಾಯ; ತಲ್ವಾರ್ ಪ್ರದರ್ಶಿಸಿದ ಆರೋಪ, ಬೆಳಗಾವಿಯಲ್ಲಿ ಕಟ್ಟೆಚ್ಚರ - Gully Cricket Turns Violent

ETV Bharat Logo

Copyright © 2025 Ushodaya Enterprises Pvt. Ltd., All Rights Reserved.