ETV Bharat / state

ನನಗೆ ಯಾವುದೇ ಬಣ ಇಲ್ಲ, ವಕ್ಫ್​​ ವಿರುದ್ಧ ಹೋರಾಟ ಅಷ್ಟೇ: ಪ್ರತಾಪ್‌ ಸಿಂಹ - WAQF ISSUE

ಮೈಸೂರು - ಚಾಮರಾಜನಗರ ಭಾಗದಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಸುವುದಾಗಿ ಮಾಜಿ ಸಂಸದ ಪ್ರತಾಪ್​ ಸಿಂಹ ಹೇಳಿದರು.

FORMER MP PRATAP SIMHA
ಪ್ರತಾಪ್‌ ಸಿಂಹ (ETV Bharat)
author img

By ETV Bharat Karnataka Team

Published : Nov 20, 2024, 4:43 PM IST

ಮೈಸೂರು : ನನಗೆ ಯಾವುದೇ ಬಣ ಇಲ್ಲ, ನಾನೊಬ್ಬ ಬಿಜೆಪಿ ಕಾರ್ಯಕರ್ತ. ಅಧಿಕಾರ ಇರಲಿ, ಬಿಡಲಿ, ಜನರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ವಕ್ಫ್​ ವಿರುದ್ಧದ ಹೋರಾಟದಲ್ಲಿ ತಮ್ಮ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಇಂದು ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮೈಸೂರು, ಚಾಮರಾನಗರ ಮತ್ತು ನಾನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯಲ್ಲಿ ವಕ್ಫ್ ಹೆಸರಿಗೆ ಸರ್ಕಾರಿ ಆಸ್ತಿಗಳನ್ನು ಬದಲಾಯಿಸಿದ ವಕ್ಫ್ ವಿರುದ್ಧ ನನ್ನ ಹೋರಾಟ ಅಷ್ಟೇ , ನಾನು ಜನರ ಕೆಲಸ ಮಾಡಲು ಬಂದಿದ್ದೇನೆ. ಅಧಿಕಾರ ಇದ್ದಾಗ ಜನಪರ ಕೆಲಸ ಮಾಡಿದ್ದೇನೆ. ಅಧಿಕಾರ ಇಲ್ಲದಿದ್ದರೂ ಜನಪರ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದರು.

ನನಗೆ ಯಾವುದೇ ಬಣ ಇಲ್ಲ ಎಂದ ಮಾಜಿ ಸಂಸದ ಪ್ರತಾಪ್​ ಸಿಂಹ (ETV Bharat)

ರೈತರು ಆತಂಕದಲ್ಲಿದ್ದಾರೆ : ವಕ್ಫ್‌ ನೋಟಿಫಿಕೇಷನ್‌ ಆಗಿರುವ ದಾಖಲೆಗಳನ್ನ ಬಿಡುಗಡೆ ಮಾಡಿದ ಪ್ರತಾಪ್‌ ಸಿಂಹ, ಯಾವಾಗ ಆರ್.ಟಿ.ಸಿ. ಗಳು ಬದಲಾಗುತ್ತವೆ ಎಂಬ ಆತಂಕದಲ್ಲಿ, ಮಠಗಳು ಮತ್ತು ರೈತರು ಇದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಬಂದಾಗ ಈ ರೀತಿಯಾಗುವುದು ಮಾಮೂಲು. ಈಗ ವಕ್ಫ್‌ ಆಸ್ತಿ ವಿಚಾರದಲ್ಲಿ ರೈತರಿಗೆ ಆತಂಕ ಸೃಷ್ಟಿಯಾಗಿದೆ. ಇದರಲ್ಲಿ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದ್ದು, ಮೈಸೂರು - ಚಾಮರಾಜನಗರ ಭಾಗದಲ್ಲಿ 600ಕ್ಕೂ ಹೆಚ್ಚು ಎಕರೆ ಭೂಮಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಾಪ್‌ ಸಿಂಹ ಆರೋಪಿಸಿದರು.

ಬೊಮ್ಮಾಯಿ ಹೇಳಿದ್ದು ಮುಸ್ಲಿಂ ಮುಖಂಡರಿಂದ ಒತ್ತುವರಿಯಾದ ಆಸ್ತಿ ಹಿಂಪಡೆಯೋಕೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಕ್ಫ್​ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಐದಾರು ಜನ ಮುಸ್ಲಿಂ ಮುಖಂಡರಿಂದ ತೆರವುಗೊಳಿಸಿ ಅಂತಾ. ಅದನ್ನು ಬೇರೆ ರೀತಿ ಬಿಂಬಿಸಲಾಗಿದೆ ಎಂದು ಪ್ರತಾಪ್​ ಸಿಂಹ ಸಮರ್ಥನೆ ನೀಡಿದರು.

ಇನ್ನು, ಮಂತ್ರಾಲಯಕ್ಕೂ ನಾವೇ ಭೂಮಿ ಧಾನ ಮಾಡಿದ್ದು ಎಂದು ಮಾಜಿ ಸಚಿವ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಇಸ್ಲಾಂ ಧರ್ಮಕ್ಕೂ , ಭಾರತಕ್ಕೂ ಏನು ಸಂಬಂಧ, ನಮಗೆ ಭೂಮಿ ದಾನ ಮಾಡಲು ನಿಮಗೆ ಭೂಮಿ ಎಲ್ಲಿಂದ ಬಂತು ಎಂದು ಪ್ರತಾಪ್​ ಸಿಂಹ ಪ್ರಶ್ನಿಸಿದರು. ಇಸ್ಲಾಂ ಧರ್ಮ ಹುಟ್ಟಿದ್ದು ಮರುಭೂಮಿಯಲ್ಲಿ. ಮುಸ್ಲಿಂರಿಗೆ ಆಶ್ರಯ ಕೊಟ್ಟಿದ್ದು ನಾವು, ಈಗ ನಮ್ಮ ಭೂಮಿ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಕ್ಫ್​ ಆಸ್ತಿ ವಿವಾದ: ನೈಜ ವರದಿ ಸಂಗ್ರಹಕ್ಕೆ ಬಿಜೆಪಿಯಿಂದ ಮೂರು ತಂಡಗಳ ರಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.