ETV Bharat / state

ಎಲ್ಲಾ ಸಮುದಾಯದವರನ್ನೂ ಡಿಸಿಎಂ ಮಾಡಲಿ ಯಾರು ಬೇಡ ಅಂದರು: ಡಿ. ಕೆ. ಸುರೇಶ್ - D K Suresh - D K SURESH

ಹೆಚ್ಚುವರಿ ಡಿಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕರ ಮಧ್ಯೆ ಚರ್ಚೆ ಜೋರಾಗಿದೆ. ಇದೀಗ ಮಾಜಿ ಸಂಸದ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಸಹೋದರ ಡಿ.ಕೆ.ಸುರೇಶ್ ಕೂಡ ಪ್ರತಿಕ್ರಿಯಿಸಿದ್ದು, ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಲಿ. ಪಕ್ಷ ತೀರ್ಮಾನ ಮಾಡಿ ಇನ್ನೂ ಐದು ಜನರನ್ನು ಡಿಸಿಎಂ ಮಾಡಿದರೂ ಒಳ್ಳೆಯದು ಎಂದಿದ್ದಾರೆ.

ಡಿ.ಕೆ.ಸುರೇಶ್
ಡಿ.ಕೆ.ಸುರೇಶ್ (ETV Bharat)
author img

By ETV Bharat Karnataka Team

Published : Jun 24, 2024, 3:18 PM IST

ಬೆಂಗಳೂರು: "ಎಲ್ಲಾ ಸಮುದಾಯದವರನ್ನೂ ಡಿಸಿಎಂ ಮಾಡಲಿ ಯಾರು ಬೇಡ ಅಂದರು" ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರಶ್ನಿಸಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂವರು ಡಿಸಿಎಂ ಹುದ್ದೆ ವಿಚಾರವಾಗಿ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, "ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಲಿ. ಪಕ್ಷ ತೀರ್ಮಾನ ಮಾಡಿ ಇನ್ನೂ ಐದು ಜನರನ್ನು ಡಿಸಿಎಂ ಮಾಡಿದರೂ ಒಳ್ಳೆಯದು" ಎಂದು ಹೇಳಿದರು.

"ಡಿ.ಕೆ ವಿಚಾರ ಅಥವಾ ಮತ್ತೊಂದು ವಿಚಾರಗಳ ಬಗ್ಗೆ ಮಾಹಿತಿ ಇಲ್ಲ. ಎಂಟು ಬಾರಿ ಗೆದ್ದ ರಾಮಲಿಂಗಾ ರೆಡ್ಡಿ ಇದ್ದಾರೆ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಜಮೀರ್, ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್ ಹಾಗೂ ಆರ್.ವಿ.ದೇಶಪಾಂಡೆ ಇದ್ದಾರೆ. ಎಲ್ಲರನ್ನೂ ಡಿಸಿಎಂ ಮಾಡಲಿ ಯಾರು ಬೇಡ ಅಂದರು" ಎಂದು ವ್ಯಂಗ್ಯಭರಿತವಾಗಿ ಹೇಳಿದರು.

ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಕೇಂದ್ರ ಸಚಿವರಾದ ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ಹಾಗೂ ನನ್ನನ್ನು ನೆನಪಿಸಿಕೊಳ್ಳದಿದ್ದರೆ ಅವರ ರಾಜಕಾರಣವೂ ನಡೆಯಲ್ಲ, ಅವರ ದಿನಚರಿಯೂ ನಡೆಯಲ್ಲ. ಹೀಗಾಗಿ ಅವರ ರಾಜಕಾರಣಕ್ಕೆ ನನ್ನ ಎಳೆದು ತರುತ್ತಾರೆ. ಚನ್ನಪಟ್ಟಣ ತ್ಯಜಿಸಿ ಮಂಡ್ಯಕ್ಕೆ ಹೋದ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಮಾಡಿದ ಕಾರ್ಯಕ್ರಮ, ಸಭೆ ಬಗ್ಗೆ ಎಲ್ಲಾ ದಾಖಲೆ ಇದೆ" ಎಂದು ಹೇಳಿದರು.

ಅಧಿಕಾರಿಗಳಿಗೆ ಹೆಚ್​ಡಿಕೆ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಮಾಧ್ಯಮಗಳೇ ವ್ಯಾಖ್ಯಾನ ಮಾಡಲಿ. ಜನ ಮೋದಿಗೆ ಆಶೀರ್ವಾದ ಮಾಡಿದ್ದಾರೆ. ಇವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಜನರನ್ನು, ಅಧಿಕಾರಿಗಳನ್ನು ಬೆದರಿಸುವ ಕೆಲಸವನ್ನು ಈ ಹಿಂದೆಯೂ ಅವರು ಮಾಡಿದ್ದಾರೆ. ಈಗಲೂ ಮಾಡ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಸುಳ್ಳು ಹೇಳುವುದನ್ನೂ ಕೂಡ ನಿಲ್ಲಿಸಬೇಕು" ಎಂದರು‌.

ಸೂರಜ್ ರೇವಣ್ಣ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, "ದೇವೇಗೌಡರ ಕುಟುಂಬ ಬಗ್ಗೆ ನೀವು ಯಾರು ಮಾತನಾಡಬೇಡಿ. ದೊಡ್ಡ ಕುಟುಂಬ ಕಾನೂನು ಕ್ರಮ ತೆಗೆದುಕೊಳ್ಳುತ್ತೆ. ಷಡ್ಯಂತ್ರದ ಬಗ್ಗೆ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಬೇರೆಯವರ ಕಡೆ ಬೊಟ್ಟು ಮಾಡಿ ಅವರಿಗೆ ಅಭ್ಯಾಸ. ಅವರ ರಕ್ಷಣೆಗಾಗಿ ಬೇರೆಯವರ ಕಡೆ ಬೊಟ್ಟು‌ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದರು.

ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಮಾಡುವುದರಿಂದ ಎಲ್ಲಾ ಆಗುತ್ತೆ ಅನ್ನೋದಾದ್ರೆ ಇಡೀ ಸಂಪುಟ ಡಿಸಿಎಂ ಆಗಲಿ: ಪ್ರಿಯಾಂಕ್​ ಖರ್ಗೆ - ADDITIONAL DCM POST ISSUE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.