ETV Bharat / state

ಗ್ರಾ.ಪಂ ಸದಸ್ಯನ ವಶಕ್ಕೆ ಪಡೆದ ಪೊಲೀಸರು: ಗಂಗಾವತಿ ಠಾಣೆಗೆ ನುಗ್ಗಲು ಯತ್ನ - BJP Protest - BJP PROTEST

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಕ್ರಮ ಖಂಡಿಸಿ ಮಾಜಿ ಶಾಸಕ ಬಸವರಾಜ ದಡೇಸೂಗೂರು ನೇತೃತ್ವದಲ್ಲಿ ಗ್ರಾಮಸ್ಥರು ಠಾಣೆಗೆ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.

ಗ್ರಾಮಸ್ಥರೊಂದಿಗೆ ಠಾಣೆಗೆ ನುಗ್ಗಲು ಯತ್ನಿಸಿದ ಮಾಜಿ ಶಾಸಕ ಬಸವರಾಜ
ಗ್ರಾಮಸ್ಥರೊಂದಿಗೆ ಠಾಣೆಗೆ ನುಗ್ಗಲು ಯತ್ನಿಸಿದ ಮಾಜಿ ಶಾಸಕ ಬಸವರಾಜ (ETV Bharat)
author img

By ETV Bharat Karnataka Team

Published : Aug 26, 2024, 5:51 PM IST

Updated : Aug 26, 2024, 8:08 PM IST

ಗಂಗಾವತಿ ಠಾಣೆಗೆ ನುಗ್ಗಲು ಯತ್ನಿಸಿದ ಮಾಜಿ ಶಾಸಕ ಬಸವರಾಜ (ETV Bharat)

ಗಂಗಾವತಿ(ಕೊಪ್ಪಳ): ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಕ್ರಮ ಖಂಡಿಸಿ ಜೀರಾಳ ಕಲ್ಗುಡಿ ಗ್ರಾಮದ ನೂರಾರು ಜನರು ಮಾಜಿ ಶಾಸಕ ಬಸವರಾಜ ದಡೇಸೂಗೂರು ನೇತೃತ್ವದಲ್ಲಿ ಠಾಣೆಗೆ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.

ಇಲ್ಲಿನ ಗ್ರಾಮೀಣ ಠಾಣೆಯ ಆವರಣದಲ್ಲಿ ಜಮಾಯಿಸಿದ್ದ ಗ್ರಾಮದ ಯುವಕರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಶಾಸಕ ಬಸವರಾಜ ದಡೇಸೂಗೂರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಠಾಣೆಗೆ ನುಗ್ಗಲು ಯತ್ನಿಸಿದರು. ಇದರಿಂದ ಕೆಲಕಾಲ ಉದ್ರಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು, ಮಾಜಿ ಶಾಸಕ ಸೇರಿದಂತೆ ಠಾಣೆಗೆ ನುಗ್ಗಲು ಯತ್ನಿಸಿದ ಗ್ರಾಮಸ್ಥರನ್ನು ತಡೆದರು.

ಜೀರಾಳ ಕಲ್ಗುಡಿ ಗ್ರಾಮದಲ್ಲಿ ಭಾನುವಾರ ನಡೆದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿಯಾಗಿತ್ತು. ಹೀಗಾಗಿ ಸಚಿವ ಶಿವರಾಜ್​ ತಂಗಡಗಿ, ಸ್ಥಳದಲ್ಲಿದ್ದ ಪೊಲೀಸರಿಗೆ ಗ್ರಾಮ ಪಂಚಾಯಿತಿ ಸದಸ್ಯ ಯಲ್ಲಪ್ಪ ಎಂಬುವವರನ್ನು ಕರೆದೊಯ್ಯುವಂತೆ ನೀಡಿದ ಸೂಚನೆ ಮೇರೆಗೆ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆತಂದು ಕೂರಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ತಿಳಿಯುತ್ತಿದ್ದಂತೆ ಗ್ರಾಮದ ನೂರಾರು ಯುವಕರು ಗಂಗಾವತಿ ಗ್ರಾಮೀಣ ಠಾಣೆಯ ಮುಂದೆ ಜಮಾಯಿಸಿದರು.

ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ಬಸವರಾಜ ದಡೇಸೂಗೂರು, ಏನು ತಪ್ಪು ಮಾಡದ ನಮ್ಮ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಪೊಲೀಸರು ಕರೆತಂದು ಕೂಡಿ ಹಾಕಿದ್ದಾರೆ. ಗ್ರಾಮಕ್ಕೆ ರಸ್ತೆ ಬೇಕು ಎಂದು ಸಚಿವರನ್ನು ಕೇಳಿದ್ದು ತಪ್ಪಾ?. ಕೇಳಿದ ಮಾತ್ರಕ್ಕೆ ಅರೆಸ್ಟ್ ಮಾಡಿಸುತ್ತಾರಾ? ಎಂದು ಪ್ರಶ್ನಿಸಿದರು.

ಪಂಚಾಯಿತಿ ಸದಸ್ಯರ ವಿರುದ್ಧ ದೂರು ದಾಖಲಿಸಿದರೆ ನಾವು ಕೂಡ ಸಚಿವ ತಂಗಡಗಿ ವಿರುದ್ಧ ದೂರು ನೀಡುತ್ತೇವೆ. ಎಫ್ಐಆರ್ ಮಾಡಬೇಕು. ಇಲ್ಲ ಕೂಡಿ ಹಾಕಿದ ಸದಸ್ಯನನ್ನು ಕೂಡಲೇ ಬಿಟ್ಟು ಕಳಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ವ್ಯಕ್ತಿಯಿಂದ ಮುಚ್ಚಳಿಕೆ ಬರೆಸಿಕೊಂಡು ಕಳಿಸುತ್ತೇವೆ ಎಂದು ಪೊಲೀಸರು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಸವರಾಜ, ಪೂರ್ವ ಷರತ್ತುಗಳಿಲ್ಲದೆ ಬಿಟ್ಟುಕಳಿಸಬೇಕು. ಇಲ್ಲವಾದಲ್ಲಿ ಠಾಣೆಯ ಆವರಣದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಪಂಚಾಯಿತಿ ಸದಸ್ಯನನ್ನು ಪೊಲೀಸರು ಬಿಟ್ಟುಕಳುಹಿಸಿದರು.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿ: ಆರೋಪಿಗಳ ಹೆಸರು ಬಹಿರಂಗಪಡಿಸಲ್ಲ ಎಂದ ಕಮಿಷನರ್‌ - Theft Case

Last Updated : Aug 26, 2024, 8:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.