ETV Bharat / state

ಎಕ್ಸಿಟ್ ಪೋಲ್​ನಲ್ಲಿ ಎನ್​ಡಿಎ ಪರ ಒಲವು ಸ್ಪಷ್ಟ, ರಾಜ್ಯದ ಚಿತ್ರಣಕ್ಕೆ ಕಾಯೋಣ: ಯಡಿಯೂರಪ್ಪ - B S Yediyurappa - B S YEDIYURAPPA

ಲೋಕಸಭೆ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

yediyurappa
ಬಿ.ಎಸ್‌. ಯಡಿಯೂರಪ್ಪ (ETV Bharat)
author img

By ETV Bharat Karnataka Team

Published : Jun 2, 2024, 11:53 AM IST

ಬೆಂಗಳೂರು: ಇಡೀ ದೇಶದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೇಲೆ ಜನತೆಯ ಒಲವಿದೆ ಎನ್ನುವುದು ಎಕ್ಸಿಟ್ ಪೋಲ್ ಸಮೀಕ್ಷಾ ವರದಿಗಳಿಂದ ದೃಢವಾಗಿದೆ. ರಾಜ್ಯದಲ್ಲಿ ಯಾವ ರೀತಿಯ ಫಲಿತಾಂಶ ಬರಲಿದೆ ಎನ್ನುವುದನ್ನು ಕಾದು ನೋಡೋಣ ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್​ ಪ್ರಕಾರ ಇಡೀ ದೇಶದಲ್ಲಿ ಬಿಜೆಪಿ ಪರವಾದ ಅಲೆ ಇದೆ ಎನ್ನುವುದು ಸ್ಪಷ್ಟವಾಗಿದೆ. ಕರ್ನಾಟಕ ಸೇರಿ ಎಲ್ಲಾ ಕಡೆ ಎನ್‌ಡಿಎ ಪರವಾಗಿಯೇ ಸಮೀಕ್ಷಾ ವರದಿಗಳು ಬಂದಿವೆ. ಮೋದಿ ಅವರು ಹೆಚ್ಚು ಮತಗಳಿಂದ ಗೆದ್ದು, ಪ್ರಧಾನಿ ಆಗುವುದು ನಿಶ್ಚಿತ. ನಾಲ್ಕನೇ ತಾರೀಕಿನಂದು ಏನಾಗಲಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗಲಿದೆ ಎಂದರು.

ಕರ್ನಾಟಕದಲ್ಲಿ ಕಡಿಮೆ ಸೀಟು ಗೆಲ್ಲುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಏನಾಗಲಿದೆ ಎಂದು ನೋಡೋಣವೆಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕ ಲೋಕಸಭೆ ಕ್ಷೇತ್ರಗಳ ಚುನಾವಣೋತ್ತರ ಸಮೀಕ್ಷೆ; ಬಿಜೆಪಿ​ಗೆ ಎಷ್ಟು ನಷ್ಟ, ಕಾಂಗ್ರೆಸ್​ಗೆ ಎಷ್ಟು ಲಾಭ? - exit poll results 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.