ETV Bharat / state

ಆರಗ ಜ್ಞಾನೇಂದ್ರ ಎಸಗಿರುವ ಅಕ್ರಮಗಳ ತನಿಖೆಗೆ ಎಸ್​ಐಟಿ ರಚಿಸಿ: ಕಿಮ್ಮನೆ ರತ್ನಾಕರ್ - Kimmane Ratnakar - KIMMANE RATNAKAR

ಆರಗ ಜ್ಞಾನೇಂದ್ರ ಎಸಗಿರುವ ಅಕ್ರಮಗಳ ಬಗ್ಗೆ ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಪ್ರಿಯಾಂಕ ಖರ್ಗೆ ಅವರ ಗಮನಕ್ಕೆ ತರಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.

Former Minister Kimmane Ratnakar
ಮಾಜಿ ಸಚಿವ ಕಿಮ್ಮನೆ ರತ್ನಾಕರ (ETV Bharat)
author img

By ETV Bharat Karnataka Team

Published : Sep 20, 2024, 7:29 PM IST

Updated : Sep 20, 2024, 7:59 PM IST

ಬೆಂಗಳೂರು: "ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದ ವೇಳೆ ಅನೇಕ ಅಕ್ರಮಗಳು ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆದಿದೆ. ಪಿಎಸ್​ಐ ಹಗರಣದಿಂದ ಹಿಡಿದು ಕಳಪೆ ಕಟ್ಟಡ ಕಾಮಗಾರಿಗಳವರೆಗೆ ನಡೆದಿವೆ. ಈ ವಿಚಾರವನ್ನು ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಪ್ರಿಯಾಂಕ ಖರ್ಗೆ ಅವರ ಗಮನಕ್ಕೆ ತರಲಾಗುವುದು. ಹಾಗೂ ಆರಗ ಜ್ಞಾನೇಂದ್ರ ವಿರುದ್ಧ ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗುವುದು" ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

ಆಗ ಏಕೆ ಇವರನ್ನು ತನಿಖೆಗೆ ಒಳಪಡಿಸಿಲ್ಲ; ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ಆರಗ ಜ್ಞಾನೇಂದ್ರ ಅವರ ಕಾಲದಲ್ಲಿ ನಡೆದ ಪಿಎಸ್​ಐ ಹಗರಣದ ತನಿಖೆ ವೇಳೆ ಇವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಲ್ಲದೇ ಸ್ಯಾಂಟ್ರೋ ರವಿ ಸೇರಿದಂತೆ, ಹಗರಣದ ಪಮುಖ ಆರೋಪಿ ದಿವ್ಯಾ ಹಾಗರಗಿ ಅವರು ತೀರ್ಥಹಳ್ಳಿಗೆ ಬಂದು ಹೋಗಿದ್ದಾರೆ ಎನ್ನುವ ಮಾತಿದೆ. ಇದರ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು. ಪಿಎಸ್​ಐ ಹಗರಣದ ತನಿಖೆ ವೇಳೆ ಏಕೆ ಇವರನ್ನು ವಿಚಾರಣೆ ಮಾಡಿಲ್ಲ ಎನ್ನುವುದೇ ಆಶ್ಚರ್ಯ. ಜ್ಞಾನೇಂದ್ರ ಅವರು ಅಧಿಕಾರದಲ್ಲಿ ಇದ್ದಾಗ ತೀರ್ಥಹಳ್ಳಿ ಹಾಗೂ ಸುತ್ತಮುತ್ತ ಅಕ್ರಮ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿದ್ದವು. ಇವರ ಬೆಂಬಲಿಗರು ರಿಯಲ್ ಎಸ್ಟೇಟ್​ನಲ್ಲಿ ತೊಡಗಿಕೊಂಡಿದ್ದರು. ಇವರು ನಿರಪರಾಧಿ ಎಂದಾದರೆ ಸತ್ಯ ಹೊರಗೆ ಬರಲಿ. ಇದು ದ್ವೇಷದ ರಾಜಕಾರಣವಲ್ಲ" ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ (ETV Bharat)

ಈ ಕೂಡಲೇ ಸರ್ಕಾರ ಗಮನ ಹರಿಸಬೇಕು: "ಬಿಟ್ ಕಾಯಿನ್ ಹಗರಣದಲ್ಲಿ ಜ್ಞಾನೇಂದ್ರ ಅವರ ಸ್ನೇಹಿತರು ಭಾಗಿಯಾಗಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ. ಇವರ ಸ್ನೇಹಿತರನ್ನು ತನಿಖೆಗೆ ಒಳಪಡಿಸಿಲ್ಲ. ಆದ ಕಾರಣಕ್ಕೆ ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು. ಇವರ ಸ್ನೇಹಿತರೊಬ್ಬರು ಜೈಲಿಗೆ ಹೋಗಿ ಹೊರಬಂದಿದ್ದಾರೆ. ಅವರನ್ನು ಕೂಲಂಕಷವಾಗಿ ಎಸ್​ಐಟಿ ತನಿಖೆಗೆ ಒಳಪಡಿಸಬೇಕು. ತೀರ್ಥಹಳ್ಳಿ ಸುತ್ತ ಮುತ್ತವಿರುವ ಸರ್ಕಾರಿ ಜಮೀನು ಹಾಗೂ ಮಠಗಳಿಗೆ ಸೇರಿದ ಜಮೀನುಗಳನ್ನು ಮಾಜಿ ಗೃಹ ಸಚಿವರ ಕಡೆಯವರು ಖರೀದಿ ಮಾಡಿರುವ ಬಗ್ಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳಿವೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭೂಮಿ ಖರೀದಿ ಬಗ್ಗೆ ತನಿಖೆಯಾಗಬೇಕು. ಈ ಬೇನಾಮಿ ಹಣ ಎಲ್ಲಿಂದ ಬಂದಿದೆ ತಿಳಿಯಬೇಕು" ಎಂದು ದೂರಿದರು.

"ಆರಗ ಜ್ಞಾನೇಂದ್ರ ಅವರ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆಯಾಗುತ್ತದೆ. ಆತ ಬೆಳಗ್ಗಿನ ಜಾವದ ತನಕ ಬದುಕಿರುತ್ತಾನೆ. ಆನಂತರ ಜ್ಞಾನೇಂದ್ರ ಅವರ ಸಂಬಂಧಿಕರೇ ಆಸ್ಪತ್ರೆಗೆ ಸೇರಿಸುತ್ತಾರೆ. ಆ ವ್ಯಕ್ತಿ ಮೃತನಾಗುತ್ತಾನೆ. ಈ ಪ್ರಕರಣದ ಬಗ್ಗೆ ಪೊಲೀಸರು ಎಂಟು ದಿನಗಳು ಕಳೆದರೂ ಕ್ರಮ ತೆಗೆದುಕೊಳ್ಳುವುದಿಲ್ಲ. ಮೃತ ವ್ಯಕ್ತಿಯ ಕುಟುಂಬದವರು ನನ್ನ ಬಳಿ ಮನವಿ ಮಾಡಿದಾಗ ಇದರ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿದೆ. ಈ ಪ್ರಕರಣದಲ್ಲಿ ಆರಗ ಅವರ ರಕ್ತಸಂಬಂಧಿಗಳು ಶಾಮೀಲಾಗಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಆದರೆ ಪೊಲೀಸರು ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಮೃತ ವ್ಯಕ್ತಿಯ ಅತ್ತಿಗೆ ದೂರು ನೀಡಿದ್ದಾರೆ. ಈಕೆ ಜ್ಞಾನೇಂದ್ರ ಅವರ ಮನೆಗೆ ಕೆಲಸಕ್ಕೆ ಹೋಗುತ್ತಾರೆ. ಈ ಪ್ರಕರಣದ ವಿರುದ್ಧ ಸೂಕ್ತ ತನಿಖೆಯಾಗಲಿ" ಎಂದು ಒತ್ತಾಯಿಸಿದರು.

ಇದನ್ನೂ ಓದಿ: ತೀರ್ಥಹಳ್ಳಿಯ ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿಲ್ಲ: ಆರಗ ಜ್ಞಾನೇಂದ್ರ - Araga Jnanendra

Last Updated : Sep 20, 2024, 7:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.