ETV Bharat / state

ಕರ್ತವ್ಯಕ್ಕೆ ಅಡ್ಡಿ ಹಲ್ಲೆ, ಲೇಖಕಿ ಮತ್ತು ಆಕೆಯ ಪುತ್ರನ ವಿರುದ್ಧ ಎಫ್ಐಆರ್

ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿ ಲೇಖಕಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳುವಾಗ ಆರೋಪಿಯ ಪುತ್ರ ಹಾಗೂ ಆಕೆ ಪೊಲೀಸರಿಗೆ ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ.

ಕರ್ತವ್ಯಕ್ಕೆ ಅಡ್ಡಿ ಹಲ್ಲೆ, ಲೇಖಕಿ ಮತ್ತು ಆಕೆಯ ಪುತ್ರನ ವಿರುದ್ಧ ಎಫ್ಐಆರ್
ಕರ್ತವ್ಯಕ್ಕೆ ಅಡ್ಡಿ ಹಲ್ಲೆ, ಲೇಖಕಿ ಮತ್ತು ಆಕೆಯ ಪುತ್ರನ ವಿರುದ್ಧ ಎಫ್ಐಆರ್ (ETV Bharat)
author img

By ETV Bharat Karnataka Team

Published : 3 hours ago

ಬೆಂಗಳೂರು: ಪ್ರಕರಣವೊಂದರ ವಾರಂಟ್​​​ ಸಂಬಂಧ ವಶಕ್ಕೆ ಪಡೆದು ಠಾಣೆಗೆ ಕರೆತಂದ ಪೊಲೀಸರನ್ನೇ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಲೇಖಕಿ ಹಾಗೂ ಆತನ ಪುತ್ರನ ವಿರುದ್ಧ ಜ್ಞಾನಭಾರತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜ್ಞಾನಭಾರತಿ ಪೊಲೀಸ್​ ಠಾಣೆಯ ಮಹಿಳಾ ಪಿಎಸ್​ಐ ಸುರೇಖಾ ಅವರು ನೀಡಿದ ದೂರಿನ ಅನ್ವಯ ಲೇಖಕಿ ಲಕ್ಷ್ಮೀ ಜಿ. ಪ್ರಸಾದ್​​ ಮತ್ತು ಆಕೆಯ ಪುತ್ರ ಅರವಿಂದ್​ ವಿರುದ್ಧ ಎಫ್‌ಐಆರ್​​ ದಾಖಲಿಸಲಾಗಿದೆ.

"ಹಳೇ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಲೇಖಕಿ ಲಕ್ಷ್ಮೀ ಜಿ. ಪ್ರಸಾದ್​ ವಿರುದ್ಧ ನಗರದ 6ನೇ ಎಸಿಎಂಎಂ ನ್ಯಾಯಾಲಯ ಬಂಧನದ ವಾರಂಟ್​​​ ಜಾರಿಗೊಳಿಸಿತ್ತು. ಅದರಂತೆ ಜ್ಞಾನಭಾರತಿ ಠಾಣೆಯ ಪಿಎಸ್ಐ ಸುರೇಖಾ ಅವರು ಅಕ್ಟೋಬರ್ 23ರಂದು ಆರೋಪಿ ಲಕ್ಷ್ಮೀ ಜಿ. ಪ್ರಸಾದ್‌ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ".

"ಬಳಿಕ ಆರೋಪಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳುವಾಗ, ಆಕೆ ಏಕಾಏಕಿ ನನ್ನನ್ನು ಏಕೆ ಬಂಧಿಸುತ್ತೀರಿ? ನನ್ನಿಂದಲೇ ಎಷ್ಟೋ ಅಧಿಕಾರಿಗಳು ಜ್ಞಾನಭಾರತಿ ಠಾಣೆಯಲ್ಲಿ ಸಸ್ಪೆಂಡ್‌ ಆಗಿದ್ದಾರೆ. ನನ್ನನ್ನು ಬಂಧಿಸಲು ಬಿಡುವುದಿಲ್ಲ ಎಂದು ಪೊಲೀಸರನ್ನು ತಳ್ಳಾಡಿ, ಕೈಗಳಿಂದ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ".

"ಬಳಿಕ ತನ್ನ ಮಗನಾದ ಅರವಿಂದ್‌ಗೆ ಕರೆ ಮಾಡಿ ಪೊಲೀಸ್‌ ಠಾಣೆಗೆ ಕರೆಸಿಕೊಂಡಿದ್ದಾರೆ. ಏಕಾಏಕಿ ಠಾಣೆ ಪ್ರವೇಶಿಸಿದ ಅರವಿಂದ್‌, ಲಕ್ಷ್ಮೀ ಜಿ.ಪ್ರಸಾದ್‌ರನ್ನು ಠಾಣೆಯಿಂದ ಹೊರಗೆ ಕರೆದೊಯ್ಯಲು ಮುಂದಾಗಿದ್ದಾರೆ. ನ್ಯಾಯಾಲಯದ ಆದೇಶ ತೋರಿಸಿದರೂ ಸಹ ಆತ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ".

"ಈ ನಡುವೆ ಲಕ್ಷ್ಮೀ ಜಿ.ಪ್ರಸಾದ್‌ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲು ಮುಂದಾದಾಗ, 'ನಾನು ಹೈಕೋರ್ಟ್‌ ವಕೀಲ. ನನಗೆ ಕಾನೂನು, ಕೋರ್ಟ್‌ ಗೊತ್ತು. ನಿಮ್ಮನ್ನು ಸಸ್ಪೆಂಡ್‌ ಮಾಡಿಸಿ ಅರೆಸ್ಟ್‌ ಮಾಡಿಸುತ್ತೇನೆ' ಎಂದು ಅರವಿಂದ್ ಕೂಗಾಡಿದ್ದಾರೆ. ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಇನ್ಸ್‌ಪೆಕ್ಟರ್ ಅವರಿಗೂ ಆರೋಪಿಗಳು ಕೈಗಳಿಂದ ಹಲ್ಲೆ ಮಾಡಿ ಪರಚಿ ಗಾಯಗೊಳಿಸಿದ್ದಾರೆ. ಠಾಣಾ ಸಿಬ್ಬಂದಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ" ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಂಧನಕ್ಕೊಳಗಾಗಿದ್ದ ಪ್ರಕರಣದಲ್ಲಿ ಸದ್ಯ ಲಕ್ಷ್ಮೀ ಜಿ.ಪ್ರಸಾದ್ ಜಾಮೀನು ಪಡೆದಿದ್ದಾರೆ. ಆದರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದ ಪ್ರಕರಣ ಸಂಬಂಧ ಶೀಘ್ರದಲ್ಲೇ ಇಬ್ಬರು ಆರೋಪಿಗಳಿಗೂ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಸಿಬಿ ಕಾರ್ಯಾಚರಣೆ: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಕೊನೆಗೂ ಸಿಕ್ಕಿಬಿದ್ದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.