ETV Bharat / state

ವಾಲ್ಮೀಕಿ ನಿಗಮ ಅಕ್ರಮದಿಂದ ಎಚ್ಚೆತ್ತ ಸರ್ಕಾರ: ನಿಗಮ-ಮಂಡಳಿಗಳಿಗೆ ಹಣಕಾಸು ನಿರ್ವಹಣೆಯ ಗೈಡ್​ಲೈನ್ಸ್ - Guidelines For Corporation Boards

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಿಂದ ಎಚ್ಚೆತ್ತ ರಾಜ್ಯ ಸರ್ಕಾರ, ನಿಗಮ ಮಂಡಳಿಗಳಿಗೆ ಹಣಕಾಸು ನಿರ್ವಹಣೆಯ ಮಾರ್ಗಸೂಚಿ ಹೊರಡಿಸಿದೆ.

author img

By ETV Bharat Karnataka Team

Published : Jun 30, 2024, 1:12 PM IST

Financial Management Guidelines  Government wakes up  Bengaluru  Valmiki Development Corporation
ವಿಧಾನಸೌಧ (ETV Bharat)

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ಎಲ್ಲಾ ನಿಗಮ, ಸಾರ್ವಜನಿಕ ಸಂಸ್ಥೆ, ಮಂಡಳಿ, ವಿವಿಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸಮರ್ಪಕವಾಗಿ, ಎಚ್ಚರಿಕೆಯಿಂದ ಹಣಕಾಸು ನಿರ್ವಹಣೆ ಮಾಡುವಂತೆ ಸಲಹೆ ಸೂಚನೆ ನೀಡಿದೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ಲಾ ನಿಗಮಗಳು, ಸಾರ್ವಜನಿಕ ಸಂಸ್ಥೆ, ಮಂಡಳಿ, ವಿವಿಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಬ್ಯಾಂಕ್ ಠೇವಣಿ, ಬ್ಯಾಂಕ್ ಬ್ಯಾಲೆನ್ಸ್ ಅನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ನಿರ್ದೇಶ ಒಳಗೊಂಡ ಸುತ್ತೋಲೆ ಹೊರಡಿಸಿದೆ.

ಎಂಡಿ, ಸಿಇಒ ನಿರ್ವಹಿಸಬೇಕಾದ ಜವಾಬ್ದಾರಿ: ಮಾಸಿಕವಾಗಿ ಸಂಸ್ಥೆಗಳ ಎಲ್ಲಾ ಖಾತೆಗಳಲ್ಲಿನ ಬ್ಯಾಂಕ್ ಬ್ಯಾಲೆನ್ಸ್, ಆರಂಭಿಕ ಬ್ಯಾಲೆನ್ಸ್, ಕ್ಲೋಸಿಂಗ್ ಬ್ಯಾಲೆನ್ಸ್​ಗಳನ್ನು ಪರಿಶೀಲಿಸಬೇಕು. ಪಾವತಿ ಮಾಡಲಾದ ಮೊತ್ತದ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ. ನಿಗಮ, ಮಂಡಳಿ, ಸಂಸ್ಥೆಗಳ ಎಲ್ಲಾ ಟರ್ಮ್ ಡಿಪಾಸಿಟ್ ಖಾತೆಯಲ್ಲಿನ ಪ್ರಧಾನ ಮೊತ್ತ, ಮೆಚ್ಯೂರಿಟಿ ಅವಧಿ, ಬಡ್ಡಿ ದರ, ಪಾವತಿಯಾದ ಬಡ್ಡಿಯ ವಿವರಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಆಂತರಿಕ ಆಡಿಟರ್​ನಿಂದ ಮಾಸಿಕವಾಗಿ ಭೌತಿಕ ದೃಢೀಕರಣ ಮಾಡಲು ಸೂಚಿಸಲಾಗಿದೆ. ಅದರಂತೆ ಆಡಿಟರ್​ಗಳು ಖುದ್ದು ಬ್ಯಾಂಕ್​ಗಳಿಗೆ ಭೇಟಿ ನೀಡಿ, ನಿಗಮ, ಮಂಡಳಿ, ಸಂಸ್ಥೆಗಳು ಹೊಂದಿರುವ ಎಲ್ಲಾ ಠೇವಣಿ, ಬ್ಯಾಂಕ್ ಖಾತೆಗಳಲ್ಲಿನ ಬ್ಯಾಲೆನ್ಸ್ ಅನ್ನು ನಿಗಮ, ಮಂಡಳಿ, ಸಂಸ್ಥೆಗಳು ನಿರ್ವಹಿಸುತ್ತಿರುವ ಲೆಕ್ಕಪತ್ರಗಳಲ್ಲಿನ ಬ್ಯಾಲೆನ್ಸ್‌ಗಳನ್ನು ಹೋಲಿಕೆ ಮಾಡಿ ಪರಿಶೀಲಿಸಬೇಕು.

ಈ ಬಗ್ಗೆ ಆಡಿಟರ್​ಗಳಿಗೆ ನಿಗಮ, ಮಂಡಳಿ, ಸಂಸ್ಥೆಗಳ ಬದಲು ಬ್ಯಾಂಕ್​ಗಳಿಂದಲೇ ದೃಢೀಕರಣ ನೀಡುವುದನ್ನು ಖಚಿತಪಡಿಸಬೇಕು. ಮತ್ತು ಆಡಿಟರ್​ಗಳು ಬಗ್ಗೆ ವಿವರವಾದ ವರದಿ ನೀಡಬೇಕು. ಒಂದು ವೇಳೆ ಬ್ಯಾಂಕ್ ಬ್ಯಾಲೆನ್ಸ್ ಮತ್ತು ನಿಗಮಗಳು ನಿರ್ವಹಿಸಿರುವ ಲೆಕ್ಕಪತ್ರ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದರೆ ಆ ಬಗ್ಗೆ ವಿಸ್ತೃತ ಪರಿಶೀಲನೆ ನಡೆಸಬೇಕು. ಮಂಡಳಿ ಸಭೆಯಲ್ಲಿ ಈ ನಿಟ್ಟಿನ ಆಡಿಟರ್ ವರದಿಯನ್ನು ಮಂಡಿಸುವಂತೆ ನಿರ್ದೇಶನ ನೀಡಿದ್ದಾರೆ.

ಎಲ್ಲಾ ಕಡತಗಳು, ಬ್ಯಾಂಕ್ ಸ್ಟೇಟ್ ಮೆಂಟ್ ಹಾಗೂ ಬ್ಯಾಂಕಿನಿಂದ ದೃಢೀಕರಿಸಲ್ಪಟ್ಟ ದಾಖಲೆಗಳನ್ನು ಸಮರ್ಪಕವಾಗಿ ದಾಖಲಿಸಿ, ಅವುಗಳನ್ನು ಲೆಕ್ಕಪರಿಶೋಧ ಹಾಗೂ ಪರಿಶೀಲನೆಗಾಗಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಟರ್ಮ್ ಡಿಪಾಸಿಟ್​​ಗೆ ಮಾರ್ಗಸೂಚಿಗಳು:

  • ಬ್ಯಾಂಕ್ ಠೇವಣಿಗಳಲ್ಲಿ ಇಡುವ ಮೊತ್ತವನ್ನು ನಿಗಮ, ಮಂಡಳಿಗಳು ಕಡ್ಡಾಯವಾಗಿ ಇಂಟರ್ನೆಟ್ ಬ್ಯಾಂಕ್, ಆರ್​ಟಿಜಿಎಸ್ ಮೂಲಕ ನಿಗಮ, ಮಂಡಳಿ, ಸಂಸ್ಥೆಗಳ ಹೆಸರಲ್ಲಿ ಮಾಡಲಾದ ಖಾತಡಗಳಿಗೆ ವರ್ಗಾವಣೆ ಮಾಡಬೇಕು.
  • ನಿಗಮ, ಮಂಡಳಿಗಳ ನೋಂದಾಯಿತ ಕಚೇರಿ ಇರುವ ಅದೇ ನಗರದಲ್ಲಿನ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಮಾಡಬೇಕು.
  • ಪ್ರತಿ ಠೇವಣಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಬ್ಯಾಂಕ್​ಗಳಿಂದ ಪಡೆಯಬೇಕು.
  • ನಿಗಮಗಳು ಠೇವಣಿ ಅವಧಿ ಮುಗಿದ ಬಳಿಕ ಬಡ್ಡಿ ಸಹಿತದ ಠೇವಣಿ ಮೊತ್ತ ಯಾವ ಸಂಸ್ಥೆಗೆ ವರ್ಗಾವಣೆ ಆಗುತ್ತೋ ಅದರ ಖಾತೆ ಸಂಖ್ಯೆಯನ್ನು ಪಡೆದಿರಬೇಕು. ಠೇವಣಿ ಅವಧಿ ಮುಗಿಯುವವರೆಗೆ ಆ ಕಡತವನ್ನು ನಿರ್ವಹಿಸಬೇಕು.
  • ಯಾವ ಸಂಸ್ಥೆಗೆ ಬಡ್ಡಿ ಮೊತ್ತವನ್ನು ಕಟ್ಟಲಾಗುತ್ತದೆಯೋ ಅದರ ಖಾತೆಯನ್ನು ಪರಿಶೀಲಿಸಬೇಕು. ಬಡ್ಡಿ ಮೊತ್ತವನ್ನು ಸಕಾಲದಲ್ಲಿ ಕಟ್ಟಲಾಗುತ್ತದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.
  • ಠೇವಣಿ ಮೇಲಿನ ಬಡ್ಡಿ ಮೊತ್ತಕ್ಕೆ ಟಿಡಿಎಸ್ ಅನ್ನು ಸಕಾಲದಲ್ಲಿ ಕಟ್ಟಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು.
  • ಜಂಟಿ ಖಾತೆಯಲ್ಲಿ ಎಲ್ಲಾ ನಿಗಮ ಮಂಡಳಿಗಳು ಠೇವಣಿ ಮೊತ್ತವನ್ನು ಇಡಬೇಕು.

ಮಂಡಳಿ ಸಭೆಯಲ್ಲಿ ವರದಿ ಮಂಡನೆ: ನಿಗಮ ಮಂಡಳಿಗಳು ಪ್ರತಿ ಬೋರ್ಡ್ ಮೀಟಿಂಗ್​ನಲ್ಲಿ ಪ್ರತಿ ಠೇವಣಿ ಖಾತೆಗಳ ಮಾಹಿತಿಯ ವರದಿಯನ್ನು ನೀಡಬೇಕು. ಆ ವರದಿಯನ್ನು ಹಿಂದಿನ ಮಂಡಳಿ ಸಭೆಯಲ್ಲಿ ಸಲ್ಲಿಸಲಾದ ವರದಿಗೆ ತುಲನೆ ಮಾಡಬೇಕು. ಈ ವರದಿಯಲ್ಲಿ ಪರಿಶೀಲನಾ ಪ್ರಕ್ರಿಯೆಯ ಮಾಹಿತಿಯೂ ಒಳಗೊಂಡಿರಬೇಕು. ಪರಿಶೀಲನೆ ವೇಳೆ ಯಾವುದಾದರೂ ಲೋಪಗಳು, ವ್ಯತ್ಯಾಸಗಳು ಕಂಡು ಬಂದಿದೆಯೇ ಎಂಬುದರ ಬಗ್ಗೆ ವಿಶೇಷ ಗಮನ ಹರಿಸಬೇಕು.

ಕಾರ್ಯದರ್ಶಿಗಳ ಜವಾಬ್ದಾರಿ ಏನು?:

  • ಎಲ್ಲಾ ನಿಗಮ ಮಂಡಳಿಗಳು, ಸಾರ್ವಜನಿಕ ಸಂಸ್ಥೆಗಳು ವಿಶ್ವವಿದ್ಯಾಲಯಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಈ ಎಲ್ಲಾ ಮಾರ್ಗಸೂಚಿಗಳನ್ನು ಮತ್ತು ನಿರ್ದೇಶನಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಸಂಬಂಧಿತ ಇಲಾಖೆಯ ಕಾರ್ಯದರ್ಶಿಗಳು ಖಾತ್ರಿಪಡಿಸಿಕೊಳ್ಳಬೇಕು.
  • ಸಂಬಂಧಿತ ಇಲಾಖೆ ಕಾರ್ಯದರ್ಶಿಗಳು ನಿಗಮ ಮಂಡಳಿಗಳು, ಸಾರ್ವಜನಿಕ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಈ ಎಲ್ಲಾ ನಿರ್ದೇಶನಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾಲ ಕಾಲಕ್ಕೆ ತನಿಖಾ ತಂಡವನ್ನು ಕಳುಹಿಸಿ, ಪರಿಶೀಲಿಸಬೇಕು.
  • ಈ ನಿರ್ದೇಶನಗಳನ್ನು ಪಾಲಿಸದೇ ಹೋದಲ್ಲಿ ನಿಗಮ ಮಂಡಳಿಗಳು ಸಾರ್ವಜನಿಕ ಸಂಸ್ಥೆಗಳ ಎಂಡಿ/ ಮತ್ತು ಸಿಇಒಗಳು ಮತ್ತು ಹಣಕಾಸು ವಿಭಾಗದ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.

ಇದನ್ನೂ ಓದಿ: ಬೆಂಗಳೂರು ನಗರ ವಿವಿ 3ನೇ ಘಟಿಕೋತ್ಸವ: ಮಾಜಿ ಕ್ರಿಕೆಟರ್​ ವಿಶ್ವನಾಥ್​ಗೆ ಗೌರವ ಡಾಕ್ಟರೇಟ್ ಪ್ರದಾನ - Convocation Ceremony

ETV Bharat Logo

Copyright © 2024 Ushodaya Enterprises Pvt. Ltd., All Rights Reserved.