ETV Bharat / state

ಕೆಲವರ ಹಿಡನ್‌ ಅಜೆಂಡಾಗಳಿಂದ ಬೆಳಗಾವಿ ಪಾಲಿಕೆಗೆ ಆರ್ಥಿಕ ಸಂಕಷ್ಟ: ಹೆಬ್ಬಾಳ್ಕರ್‌, ಜಾರಕಿಹೊಳಿ ಅಸಮಾಧಾನ - Financial crisis - FINANCIAL CRISIS

ಕೆಲವರ ಹಿಡನ್‌ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಸಚಿವ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

BELAGAVI CORPORATION  HEBBALKAR AND JARAKIHOLI STATEMENT  BELAGAVI
ಹೆಬ್ಬಾಳ್ಕರ್‌, ಜಾರಕಿಹೊಳಿ (ETV Bharat)
author img

By ETV Bharat Karnataka Team

Published : Aug 28, 2024, 5:36 PM IST

ಹೆಬ್ಬಾಳ್ಕರ್‌, ಜಾರಕಿಹೊಳಿ ಹೇಳಿಕೆಗಳು (ETV Bharat)

ಬೆಳಗಾವಿ: ಕೆಲವರ ಹಿಡನ್‌ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಸಚಿವ ಸತೀಶ್​ ಜಾರಕಿಹೊಳಿ ಅಸಮಾಧಾನ ಹೊರ ಹಾಕಿದರು.

ಬೆಳಗಾವಿ ನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಇದಕ್ಕೆ ಅಧಿಕಾರಿಗಳು ಎಷ್ಟು ಕಾರಣವೊ, ಜನಪ್ರತಿನಿಧಿಗಳು ಅಷ್ಟೇ ಕಾರಣ. ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಬ್ಬರ ಮೇಲೆ ಬೊಟ್ಟು ಮಾಡಿ ತೋರಿಸೋಕೆ ಬರೋದಿಲ್ಲ. ನಿಸ್ವಾರ್ಥತೆಯಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ನಾವೆಲ್ಲ ರಾಜಕಾರಣ ಮಾಡಿದರೆ ಬೆಳಗಾವಿಯನ್ನ ಸ್ವರ್ಗ ಮಾಡಬಹುದು. ಆದರೆ, ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಸೋರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳಗಾವಿ ರಾಜ್ಯದ ಅತಿದೊಡ್ಡ ಜಿಲ್ಲೆ, ಎರಡನೇ ರಾಜಧಾನಿ ಅಂತಾ ಹೆಮ್ಮೆಯಿಂದ ಹೇಳುತ್ತೇವೆ. ಬೆಳಗಾವಿ ತಾಲೂಕು ಉಡುಪಿ ಜಿಲ್ಲೆಗಿಂತ ದೊಡ್ಡದು. ಬೆಳಗಾವಿ ತಾಲೂಕಿನಲ್ಲಿ ಏಂಟೂವರೆ ಲಕ್ಷ ಜನಸಂಖ್ಯೆ ಇದ್ದರೆ, ಉಡುಪಿ ಜಿಲ್ಲೆ 9 ಲಕ್ಷ ಜನ ಸಂಖ್ಯೆ ಹೊಂದಿದೆ. ಇಂತಹ ದೊಡ್ಡ ಪಾಲಿಕೆ ಹೀಗಾಗೋಕೆ ಹಿಡನ್ ಅಜೆಂಡಾಗಳೇ ಕಾರಣ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು.

ಬಿಜೆಪಿ- ಜೆಡಿಎಸ್‌ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಾರಥ್ಯದಲ್ಲಿ ಆಗಸ್ಟ್‌ 31 ರಂದು ಸಚಿವರು, ಶಾಸಕರಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಒಡೆತನದ ಸಕ್ಕರೆ ಕಾರ್ಖಾನೆಗೆ ಕಬ್ಬು ಅರೆಯಲು ಕರ್ನಾಟಕ ಪರಿಸರ ಮಂಡಳಿ ಅನುಮತಿ ನಿರಾಕರಿಸಿದ್ದಕ್ಕೆ ದ್ವೇಷ ರಾಜಕೀಯ ಕಾರಣವಲ್ಲ. ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ. ದ್ವೇಷ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಲಿ, ನಾನಾಗಲಿ ದ್ವೇಷದ ರಾಜಕೀಯ ಮಾಡುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಸರ್ಕಾರದ ಮೇಲೆ ಇಲ್ಲದ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥಿಸಿಕೊಂಡರು.

ಪಾಲಿಕೆ ನಿರ್ಧಾರಕ್ಕೆ ನನ್ನ ಸಮ್ಮತಿ ಇಲ್ಲ: ನಿನ್ನೆ ಮಹಾನಗರ ಪಾಲಿಕೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಸಮ್ಮತಿಯಿಲ್ಲ. ಕೋರ್ಟ್ ಆದೇಶವಾಗಿದೆ. ಈಗ ಚರ್ಚೆ ಅಷ್ಟೇ ‌ಮಾಡಲು ಸಾಧ್ಯ. ಕೋರ್ಟ್ ಆದೇಶದ ಪ್ರಕಾರ ಕ್ರಮ ಆಗುತ್ತದೆ. 8 ಕೋಟಿ ಜಿಎಸ್​ಟಿ ಹಣ ಸಹ ಕೊಟ್ಟಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ದಿವಾಳಿ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, 20 ಕೋಟಿ ರೂಪಾಯಿ ಠೇವಣಿ ಮಾಡಬೇಕು ಎಂದು ಕೋರ್ಟ್ ಆದೇಶ ಆಗಿದೆ. ಎಸಿಯವರಿಗೆ ದುಡ್ಡು ಡಿಪಾಸಿಟ್ ಮಾಡಬೇಕು. ಹಿಂದೆ ಅಧಿಕಾರಿಗಳು ಮಾಡಿದ ತಪ್ಪಿನ ಬಗ್ಗೆ ಸರ್ಕಾರ ತನಿಖೆ ಮಾಡಬೇಕಿದೆ. ಏನಾದ್ರೂ ಉಳಿಸಲು ಸಾಧ್ಯವಿದೆಯಾ ಎಂದು ಚರ್ಚೆ ಮಾಡುತ್ತಿದ್ದೇವೆ. ಸ್ಮಾರ್ಟ್‌ ಸಿಟಿಯಿಂದ‌ ರಸ್ತೆ ಕಾಮಗಾರಿ ಮಾಡಿದೆ. ಅದನ್ನ‌ ಮಹಾನಗರ ಪಾಲಿಕೆ ಮೇಲೆ ಹಾಕಿ, ತಪ್ಪು ಹೊರಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಆಗಲೇಬೇಕು ಎಂದು ಆಗ್ರಹಿಸಿದರು.

ಕಾನೂನು ವಿಭಾಗದವರು ಕೋರ್ಟ್​ಗೆ ಹಾಜರಾಗದೇ ಇರುವುದಕ್ಕೆ ರಾಜಕೀಯ ಒತ್ತಡದಿಂದ ಹೇಗೆ ಬೇಕೊ‌ ಹಾಗೇ ಬರೆಸಿಕೊಟ್ಟಿದ್ದಾರೆ. ಆಡಳಿತ ಪಕ್ಷದವರು ಚರ್ಚೆ ಮಾಡಬೇಕಿತ್ತು. ಹಿಂದೆಯೂ ಒಬ್ಬರೇ‌ ನಿರ್ಧಾರ ಮಾಡಿದ್ದರು. ಈಗಲೂ ಅದೇ ಆಗಿದೆ ಎಂದು ಸತೀಶ್​ ಜಾರಕಿಹೊಳಿ ಕಿಡಿಕಾರಿದರು.

ಪ್ರತಿ ಅಡಿಗೆ 30-35 ಸಾವಿರ ರೂ. ಹಣ ಫಿಕ್ಸ್ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ, ಜಿಲ್ಲಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕ್ರಮ ಆಗುತ್ತದೆ. ಸಂಬಂಧ ಪಟ್ಟ ಮಂತ್ರಿಯವರ ಗಮನಕ್ಕೆ ತೆಗೆದುಕೊಂಡು ಬರುತ್ತೇನೆ ಎಂದರು.

ಅನುದಾನ ವಸೂಲಿ ಮಾಡುತ್ತಿಲ್ಲ ಎಂಬ ಆರೋಪ ಕುರಿತು ಮಾತನಾಡಿದ ಅವರು, 40 ಪರ್ಸೆಂಟ್ ವಸೂಲಿ ಮಾಡೋದು ಬಾಕಿ ಇದೆ. ಕಾರ್ಪೋರೇಷನ್ ನವರು ಮಾಡಬೇಕು. ಡಿಸಿಯವರ ನೇತೃತ್ವದಲ್ಲಿ ಸಮಿತಿ ಮಾಡಿದ್ದಾರೆ. ಹಿಂದಿನ ಪಾಲಿಕೆ ಆಯುಕ್ತ ಜಗದೀಶ್​ ಅವರ ವಿರುದ್ಧ ತನಿಖೆ ನಡೆಯಲಿ ಎಂದು ಸತೀಶ ಜಾರಕಿಹೊಳಿ ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಅಂತಾ ಹೇಳಿದ್ದೇವೆ. ಬಿಜೆಪಿಯವರು ಕೊಡುತ್ತಾರೆ ಅಂತಾ ಹೇಳುತ್ತಿದ್ದಾರೆ. ಆದರೆ, ನಾವು ಕೊಡಲ್ಲ ಅಂತಾ ಹೇಳುತ್ತಿದ್ದೇವೆ ಎಂದು ಸತೀಶ್​ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಓದಿ: ಲೈವ್ Karnataka News Today Live: ಒಂದೇ ಕ್ಲಿಕ್​ನಲ್ಲಿ ಕರ್ನಾಟಕದ ಇಂದಿನ ಪ್ರಮುಖ ಸುದ್ದಿಗಳ ಮಾಹಿತಿ - Live Update

ETV Bharat Logo

Copyright © 2025 Ushodaya Enterprises Pvt. Ltd., All Rights Reserved.