ETV Bharat / state

ಬೆಂಗಳೂರು: 20 ವರ್ಷಗಳ ಬಳಿಕ ಕೊಲೆ ಕೇಸ್​ನಲ್ಲಿ ಬಂಧಿತನಾದ ಚಿತ್ರ ನಿರ್ದೇಶಕ - Film director arrested - FILM DIRECTOR ARRESTED

ಕೊಲೆ ಪ್ರಕರಣದ 8ನೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬರೋಬ್ಬರಿ 20 ವರ್ಷಗಳ ಬಳಿಕ ಸಿಸಿಬಿ ಪೊಲೀಸರು ಮರ್ಡರ್ ಕೇಸ್​ನಲ್ಲಿ ಚಿತ್ರ ನಿರ್ದೇಶಕನನ್ನು ಬಂಧಿಸಿದ್ದಾರೆ.

Gajendra
ಗಜೇಂದ್ರ (ETV Bharat)
author img

By ETV Bharat Karnataka Team

Published : Jul 17, 2024, 9:09 PM IST

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ (ETV Bharat)

ಬೆಂಗಳೂರು : ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ 20 ವರ್ಷಗಳ ಬಳಿಕ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗಜೇಂದ್ರ (46) ಬಂಧಿತ ಆರೋಪಿ. ವಿಲ್ಸನ್ ಗಾರ್ಡನ್ ಠಾಣೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಕೊತ್ತರವಿ ಎಂಬಾತನ ಹತ್ಯೆ ಪ್ರಕರಣದಲ್ಲಿ ಗಜೇಂದ್ರ ಆರೋಪಿಯಾಗಿದ್ದರು. ಹಳೆ ದ್ವೇಷ ಹಿನ್ನೆಲೆ ರವಿಯನ್ನ ಹತ್ಯೆಗೈದಿರುವ ಆರೋಪ ಇವರ ಮೇಲಿದೆ.‌ ಗಜೇಂದ್ರ ಸೇರಿ ಈವರೆಗೆ ಒಟ್ಟು 9 ಮಂದಿಯನ್ನ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆ ಪ್ರಕರಣದಲ್ಲಿ 8ನೇ ಆರೋಪಿಯಾಗಿದ್ದ ಗಜೇಂದ್ರ ಬಂಧನ ಭೀತಿಯಿಂದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸಿಸಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಮಾಡುವಂತೆ ತಾಕೀತು ಮಾಡಿದ್ದರು.

ಹಳೆ ಪ್ರಕರಣಗಳ ತನಿಖೆ ಚುರುಕುಗೊಳಿಸಿದ ಸಿಸಿಬಿ ರೌಡಿ ನಿಗ್ರಹ ದಳದ ಇನ್​ಸ್ಪೆಕ್ಟರ್ ನಯಾಜ್ ಅಹಮದ್ ನೇತೃತ್ವದ ತಂಡ, ಖಚಿತ ಮಾಹಿತಿ ಮೇರೆಗೆ ಸುದ್ದುಗುಂಟೆಪಾಳ್ಯದಲ್ಲಿ ಕಳೆದ 15 ವರ್ಷಗಳಿಂದ ನೆಲೆಸಿದ್ದ ಗಜೇಂದ್ರನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

20 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದು ಎಲ್ಲಿ ?: ಕೊತ್ತ ರವಿ ಹತ್ಯೆ ಪ್ರಕರಣದಲ್ಲಿ 8ನೇ ಆರೋಪಿಯಾಗಿರುವ ಗಜೇಂದ್ರ 2004ರಲ್ಲಿ ಬಂಧಿತನಾಗಿ ಒಂದು ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ. ಜೆ. ಪಿ ನಗರದ ಮಾರನಹಳ್ಳಿಯಲ್ಲಿ ವಾಸವಾಗಿದ್ದ ಅವರ ಮನೆ ಮಾರಿ ಬಂಧನ ಭೀತಿಯಿಂದ ತಮಿಳುನಾಡಿನ ವೆಲೂರಿನಲ್ಲಿ ಅವಿತುಕೊಂಡಿದ್ದರು.

ಹಲವು ಬಾರಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರೂ ಗೈರಾಗಿದ್ದರು. ಹೀಗಾಗಿ ಇವರ ವಿರುದ್ಧ ಕೋರ್ಟ್ ಬಂಧನದ ವಾರೆಂಟ್ ಹೊರಡಿಸಿತ್ತು‌. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಮಾಜಿ ಕೌನ್ಸಿಲರ್ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಸೇರಿ ನಾಲ್ವರು ಮೃತಪಟ್ಟರೆ, ಇನ್ನುಳಿದವರು ವಿಚಾರಣೆ ಎದುರಿಸುತ್ತಿದ್ದಾರೆ. ಈ ಮಧ್ಯೆ 2005 ರಿಂದ ನಾಪತ್ತೆಯಾಗಿದ್ದ ಗಜೇಂದ್ರ 2008 ರಲ್ಲಿ ಕೋರ್ಟ್​ಗೆ ವರದಿ ಸಲ್ಲಿಸಲಾಗಿತ್ತು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

''ಹಲವು ವರ್ಷಗಳಿಂದ ತಮಿಳುನಾಡಿನ ವೆಲೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯು 2010ರ ಬಳಿಕ ನಗರದ ಸುದ್ದುಗುಂಟೆಪಾಳ್ಯಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದಾಗ ತಾನು ಚಿತ್ರ ನಿರ್ದೇಶಕನೆಂದು ಹೇಳಿಕೊಂಡಿದ್ದಾರೆ. ಕನ್ನಡದ ಪುಟಾಣಿ ಪವರ್ ಸೇರಿ ಇನ್ನು ಕೆಲಚಿತ್ರಗಳನ್ನ ನಿರ್ದೇಶನ ಜೊತೆಗೆ ತಮಿಳಿನಲ್ಲಿ ಒಂದೆರೆಡು ಚಿತ್ರಗಳನ್ನ ನಿರ್ದೇಶನ ಮಾಡುವ ಬಗ್ಗೆ ತಯಾರಿ ನಡೆಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ'' ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ.

ಇದನ್ನೂ ಓದಿ : ಮಚ್ಚಿನಿಂದ ಹೊಡೆದು ಯುವಕನ ಬರ್ಬರ ಹತ್ಯೆ: ಕಾರಣ ನಿಗೂಢ - YOUTH MURDER IN DAVANAGERE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.